newsfirstkannada.com

MI vs GT; ಮಿಂಚಿ ಮರೆಯಾದ ರೋಹಿತ್, ಬ್ರೆವಿಸ್.. ಟಾರ್ಗೆಟ್ ಬೆನ್ನಟ್ಟಿದ ಮುಂಬೈಗೆ ಆರಂಭದಲ್ಲೇ ಶಾಕ್

Share :

Published March 25, 2024 at 9:18am

Update March 25, 2024 at 9:20am

    ಕೊನೆ ಓವರ್​ನಲ್ಲಿ 19 ರನ್​ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಔಟ್

    ಗೆಲುವಿನ ಹಾದಿಯಲ್ಲಿದ್ದ ಮುಂಬೈಗೆ ಕೊನೆ ಓವರ್​ನಲ್ಲಿ ಬಿಗ್ ಟ್ವಿಸ್ಟ್

    ಅಕ್ಷರಶಃ ಗುಜರಾತ್​ ತಂಡಕ್ಕೆ ಕಾಡಿದ ವೇಗಿ ಜಸ್​ಪ್ರೀತ್ ಬೂಮ್ರಾ

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದಕೊಂಡರು. ಅದರಂತೆ ಇನ್ನಿಂಗ್ಸ್​ ಆಂಭಿಸಿದ ಗುಜರಾತ್ ಪರ ನಾಯಕ ಶುಭಮನ್, ವೃದ್ಧಿಮಾನ್ ಸಹಾ, ಮೊದಲ 3 ಓವರ್​ಗಳಲ್ಲೇ 27 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದ್ರೆ, 4ನೇ ಓವರ್​​ನಲ್ಲಿ ದಾಳಿಗಿಳಿದ ಬೂಮ್ರಾ, 19 ರನ್​ ಗಳಿಸಿ ಬ್ಯಾಟಿಂಗ್ ನಡೆಸ್ತಿದ್ದ ಸಹಾಗೆ ಪೆವಿಲಿಯನ್ ದಾರಿ ತೋರಿದ್ರೆ. 31 ರನ್​ ಗಳಿಸಿದ್ದ ಗಿಲ್​ಗೆ ಚಾವ್ಲಾ ಚಮಕ್ ನೀಡಿದ್ರು.

ಈ ವೇಳೆ ಸಾಯಿ ಸುದರ್ಶನ ಜೊತೆಯಾದ ಅಜ್ಮತುಲ್ಲಾ ಉಮರ್ಜಾಯ್, 3ನೇ ವಿಕೆಟ್​​ಗೆ 40 ರನ್​​ಗಳ ಜೊತೆಯಾಟವಾಡಿದ್ರು. ಆದ್ರೆ, 17 ರನ್​ಗಳಿಗೆ ಉಮರ್ಜಾಯ್ ಆಟ ಅಂತ್ಯವಾಯ್ತು.

ಬೂಮ್ರಾ, ಜೆರಾಲ್ಡ್ ವೇಗಕ್ಕೆ ಗುಜರಾತ್ ಟೈಟನ್ಸ್​​ ಸ್ಟನ್..!

ಅಕ್ಷರಶಃ ಗುಜರಾತ್​ ತಂಡಕ್ಕೆ ಇನ್ನಿಲ್ಲದಂತೆ ಕಾಡಿದ್ದ ವೇಗಿ ಜಸ್​ಪ್ರೀತ್ ಬೂಮ್ರಾ ಹಾಗೂ ಜೆರಾಲ್ಡ್.. 17ನೇ ಓವರ್​ನಲ್ಲಿ 12 ರನ್​ ಗಳಿಸಿದ್ದ ಡೇವಿಡ್ ಮಿಲ್ಲರ್​​ಗೆ ಶಾಕ್ ಕೊಟ್ಟ ಬೂಮ್ರಾ, ಇದೇ ಓವರ್​​ನ ಮೂರನೇ ಎಸೆತದಲ್ಲಿ 45 ರನ್ ಗಳಿಸಿದ್ದ ಸಾಯಿ ಸುದರ್ಶನ್​​ಗೆ ಪೆವಿಲಿಯನ್ ಹಾದಿ ತೋರಿದ್ರು. 22 ರನ್​​ ಗಳಿಸಿ ಅಪಾಯಕಾರಿ ಆಗೋ ಮುನ್ಸೂಚನೆ ನೀಡಿದ್ದ ರಾಹುಲ್​ ತೆವಾಟಿಯಾ ವಿಕೆಟ್ ಪಡೆಯುವಲ್ಲಿ ಜೆರಾಲ್ಡ್ ಯಶಸ್ಸು ಕಂಡ್ರು.

ಅಂತಿಮವಾಗಿ ರಶೀದ್ ಖಾನ್ ಅಜೇಯ 4 ರನ್, ವಿಜಯ್ ಶಂಕರ್ ಅಜೇಯ 6 ರನ್ ಸಿಡಿಸಿದರು. ಇದರೊಂದಿಗೆ 6 ವಿಕೆಟ್ ನಷ್ಟಕ್ಕೆ ಗುಜರಾತ್ ಟೈಟಾನ್ಸ್ 168 ರನ್ ಪೇರಿಸುವಲ್ಲಿ ಶಕ್ತವಾಯ್ತು. ಬೂಮ್ರಾ ಹಾಗೂ ಜೆರಾಲ್ಡ್​ ತಲಾ 4 ಓವರ್ ಎಸೆದು 41 ರನ್​ ನೀಡಿ 5 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್​ಗಳು ಎನಿಸಿದ್ರು.

ಮಿಂಚಿನ ಆಟವಾಡಿ ನಿರ್ಗಮಿಸಿದ ನಮನ್ ಧೀರ್..!

169 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ ಅಘಾತ ಅನುಭವಿಸಿತು. ಅಜ್ಮತುಲ್ಲಾ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಇಶನ್ ಕಿಶನ್ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಈ ಬಳಿಕ ಆಗಮಿಸಿದ ನಮನ್ ಧೀರ್​, ಎಟರ್​ಟೈನ್ಮೆಂಟ್ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಈತ ಆಡಿದ 10 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಒಳಗೊಂಡ 20 ರನ್ ಸಿಡಿಸಿ ಅಜ್ಮತುಲ್ಲಾ ಓವರ್​ನಲ್ಲಿ ಔಟಾದರು.

ಇದನ್ನೂ ಓದಿ: ಗಂಡನನ್ನ ಹೊರಗಿಟ್ಟು ಚುನಾವಣೆಗೆ ಸ್ಪರ್ಧೆ ಮಾಡೋ ಶಕ್ತಿ ನನಗಿದೆ- ವೀಣಾ ಕಾಶಪ್ಪನವರ ಎಚ್ಚರಿಕೆ

ಬ್ರೆವಿಸ್ ಔಟಾದ ಬೆನ್ನಲ್ಲೇ ಟ್ವಿಸ್ಟ್​ ಮೇಲೆ ಟ್ವಿಸ್ಟ್​

3ನೇ ವಿಕೆಟ್​ಗೆ ಜೊತೆಯಾದ ರೋಹಿತ್ ಆ್ಯಂಡ್ ಡೆವಾಲ್ಡ್​ ಬ್ರೆವಿಸ್ ಅಬ್ಬರಿಸಿ ಬೊಬ್ಬೆರೆಸಿದ್ರು. ಆದ್ರೆ, 43 ರನ್ ಗಳಿಸಿದ್ದ ರೋಹಿತ್, ಸಾಯಿ ಕಿಶೋರ್ ಬೌಲಿಂಗ್​ನಲ್ಲಿ ಔಟಾದ್ರೆ.. ಈ ಬೆನ್ನಲ್ಲೇ 46 ರನ್ ಗಳಿಸಿದ್ದ ಬ್ರೆವಿಸ್, ಮೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ರು. ಇವರಿಬ್ಬರ ಔಟಾದ ಬೆನ್ನಲ್ಲೇ ಗೆಲುವಿನ ಹಾದಿಯಲ್ಲಿದ್ದ ಮುಂಬೈಗೆ ಟ್ವಿಸ್ಟ್​ ಸಿಕ್ತು.

8 ರನ್​​ಗಳ ಅಂತರದಲ್ಲೇ ಟಿಮ್ ಡೇವಿಡ್, ತಿಲಕ್ ವರ್ಮ, ಜೆರಾಲ್ಡ್​ ವಿಕೆಟ್ ಕಳೆದುಕೊಂಳ್ತು. ಆದ್ರೆ, ಕೊನೆ ಓವರ್​ನಲ್ಲಿ 19 ರನ್ ಮುಂಬೈ ಮುಂದಿತ್ತು. ಆದ್ರೆ, 1 ಸಿಕ್ಸರ್​, ಬೌಂಡರಿ ಸಿಡಿಸಿ ಆಸೆ ಚಿಗುರಿಸಿದ್ದ ಹಾರ್ದಿಕ್, 3ನೇ ಬಾಲ್​ನಲ್ಲೇ ಔಟಾದರು. ಈ ಬೆನ್ನಲ್ಲೇ ಗೆಲುವಿನ ಕನಸು ಕಮರಿತು.

ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 162 ರನ್​ ಗಳಿಸಲಷ್ಟೇ ಶಕ್ತವಾದ ಮುಂಬೈ ಇಂಡಿಯನ್ಸ್​, 6 ರನ್​ಗಳ ಸೋಲು ಅನುಭವಿಸಿದ್ರೆ. ಗುಜರಾತ್ ಗೆದ್ದು ಬೀಗಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MI vs GT; ಮಿಂಚಿ ಮರೆಯಾದ ರೋಹಿತ್, ಬ್ರೆವಿಸ್.. ಟಾರ್ಗೆಟ್ ಬೆನ್ನಟ್ಟಿದ ಮುಂಬೈಗೆ ಆರಂಭದಲ್ಲೇ ಶಾಕ್

https://newsfirstlive.com/wp-content/uploads/2024/03/GILL_PANDYA.jpg

Load More