newsfirstkannada.com

ಕೊನೆಗೂ ಹೊಸ ಭರವಸೆ ಕೊಟ್ಟ ಆರ್​ಸಿಬಿ ಬೌಲರ್ಸ್​.. ಬೊಂಬಾಟ್ ಬೌಲಿಂಗ್​ನ ಹೈಲೆಟ್ಸ್..!

Share :

Published May 5, 2024 at 9:39am

    ಚಿನ್ನಸ್ವಾಮಿ ಅಂಗಳದಲ್ಲಿ RCB ಬೌಲರ್ಸ್​ ದರ್ಬಾರ್

    ಹೋಮ್​​ಗ್ರೌಂಡ್​ನಲ್ಲಿ ಧೂಳೆಬ್ಬಿಸಿದ ಆರ್​​ಸಿಬಿ ಬೌಲರ್ಸ್​

    ಗುಜರಾತ್​ ತಂಡವನ್ನು ಕಟ್ಟಿ ಹಾಕಿದ್ದೇಗೆ ಆರ್​​ಸಿಬಿ..?

ಚಿನ್ನಸ್ವಾಮಿ ಮೈದಾನ ಬ್ಯಾಟ್ಸ್​​ಮನ್​ಗಳ ಸ್ವರ್ಗ ಅನ್ನೋ ಮಾತು ನಿನ್ನೆ ಸುಳ್ಳಾಗಿ ಹೋಯ್ತು. ಏನ್​ ಕೇಳ್ತೀರಾ? ಹೋಮ್​​ಗ್ರೌಂಡ್​ನಲ್ಲಿ ಆರ್​​ಸಿಬಿ ಬೌಲರ್ಸ್​ ನಿನ್ನೆ ಧೂಳೆಬ್ಬಿಸಿಬಿಟ್ರು. ಗುಜರಾತ್​ ಬ್ಯಾಟರ್ಸ್​​ ಪೆವಿಲಿಯನ್​ ಪರೇಡ್​ ನಡೆಸ್ತಾ ಇದ್ರೆ, ಆರ್​​ಸಿಬಿ ಹುಚ್ಚೆದ್ದು ಕುಣೀತಾ ಇದ್ರು. ಆರ್​​ಸಿಬಿಯ ಬೊಂಬಾಟ್​ ಬೌಲಿಂಗ್​ನ ಹೈಲೆಟ್ಸ್​ ಇಲ್ಲಿದೆ.

ಅಬ್ಬಬ್ಬಾ.. ನಿಜಕ್ಕೂ ಇದೇನಾ ನಮ್ಮ ಆರ್​​ಸಿಬಿ ಟೀಮ್​..? ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಬೌಲರ್ಸ್​ ನಡೆಸಿದ ದರ್ಬಾರ್​ ನೋಡಿದ ಪ್ರತಿಯೊಬ್ಬರಿಗೂ ಈ ಒಂದು ಡೌಟ್​ ಬಂದೇ ಬಂದಿರುತ್ತೆ. ಹಂಗಿತ್ತು ಆರ್​​ಸಿಬಿ ಬೌಲರ್​​ಗಳ ದರ್ಬಾರ್​.​.! ಅಬ್ಬಬ್ಬಾ.. ಚಿಂದಿ ಬೌಲಿಂಗ್..!

ಇದನ್ನೂ ಓದಿ:ರೇವಣ್ಣ ಅರೆಸ್ಟ್.. ಪ್ರಜ್ವಲ್ ರೇವಣ್ಣ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಪುಟ್ಟರಾಜು..!

ಪವರ್​​​ ಪ್ಲೇನಲ್ಲಿ ಪವರ್​ ಫುಲ್​ ಅಟ್ಯಾಕ್.​​​.!
ಪಂದ್ಯದಲ್ಲಿ ಟಾಸ್​​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ನೇರವಾಗಿ ಬೌಲಿಂಗ್​ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಬೌಲರ್ಸ್​ ಸರಿಯಾಗಿ ಸಮರ್ಥಿಸಿಕೊಂಡರು. ಚಿನ್ನಸ್ವಾಮಿ ಅಂಗಳದಲ್ಲಿ ಬೌಲರ್ಸ್​ ಬೆಂಕಿಯುಗುಳುತ್ತಿದ್ರೆ, ಗುಜರಾತ್​ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​​ ನಡೆಸಿದರು. ಆರ್​​​ಸಿಬಿ ಬೌಲರ್ಸ್​ ನಿನ್ನೆ ಎಷ್ಟು ಸಖತ್​ ಸ್ಪೆಲ್​ ಮಾಡಿದ್ರು ಅನ್ನೋದಕ್ಕೆ ಪವರ್​ ಪ್ಲೇ ಬೆಸ್ಟ್​ ಎಕ್ಸಾಂಪಲ್​. ಮೊದಲ 6 ಓವರ್​ಗಳಲ್ಲಿ ಕೇವಲ 23 ರನ್​ ಬಿಟ್ಟುಕೊಟ್ಟ ಆರ್​​ಸಿಬಿ ಬೌಲರ್ಸ್​ 3 ವಿಕೆಟ್​ ಕಬಳಿಸಿದ್ರು. ಮೊಹಮ್ಮದ್​ ಸಿರಾಜ್​ 2, ಕ್ಯಾಮರೂನ್​ ಗ್ರೀನ್​ 1 ವಿಕೆಟ್​ ಕಬಳಿಸಿದರು.

ಮಿಡಲ್​ ಓವರ್​​ನಲ್ಲಿ ದರ್ಬಾರ್​ ನಡೆಸಿದ ಬೌಲರ್ಸ್​
ಪವರ್​​ ಪ್ಲೇನಲ್ಲಿ ಸಾಧಿಸಿದ ಹಿಡಿತವನ್ನ ಮಿಡಲ್​ ಓವರ್​​ನಲ್ಲೂ ಬೌಲರ್ಸ್​​ ಬಿಟ್ಟುಕೊಡಲಿಲ್ಲ. 7ರಿಂದ 15 ಓವರ್​​ಗಳಲ್ಲಿ 79 ರನ್​ ಬಿಟ್ಟುಕೊಟ್ಟ ಆರ್​​ಸಿಬಿ ಬೌಲರ್ಸ್​​, 2 ಪ್ರಮುಖ ವಿಕೆಟ್​ಗಳನ್ನೂ ಬುಟ್ಟಿಗೆ ಹಾಕಿಕೊಂಡ್ರು. ಡೇವಿಡ್​ ಮಿಲ್ಲರ್​, ರಾಹುಲ್​ ತೆವಾಟಿಯಾ ಸೈಲೆಂಟಾಗಿ ಪೆವಿಲಿಯನ್​ ಸೇರಿದರು.

ಡೆತ್​ ಓವರ್​​​​​ಗಳಲ್ಲಿ ಬೊಂಬಾಟ್​ ಪ್ರದರ್ಶನ ​

ಚಿನ್ನಸ್ವಾಮಿ ಮೈದಾನದಲ್ಲಿ ಡೆತ್​ ಓವರ್​​ಗಳಲ್ಲಿ ಬೌಲಿಂಗ್​ ಮಾಡೋದು ಕಷ್ಟ ಅನ್ನೋ ಮಾತನ್ನ ನಿನ್ನೆ ಆರ್​​ಸಿಬಿ ಬೌಲರ್ಸ್​​ ಸುಳ್ಳಾಗಿಸಿ ಬಿಟ್ರು. ಆರ್​​ಸಿಬಿಯ ದರ್ಬಾರ್​ನ ಮುಂದೆ ಗುಜರಾತ್​ ಬ್ಯಾಟರ್ಸ್​ ದಂಗಾಗಿ ಹೋದ್ರು. 16ರಿಂದ 20 ಓವರ್​​ಗಳಲ್ಲಿ ಮ್ಯಾಜಿಕ್​ ಮಾಡಿಬಿಟ್ರು. ಡೆತ್​ ಓವರ್​ಗಳಲ್ಲಿ ಆರ್​​ಸಿಬಿ​ ಬೌಲಿಂಗ್​ ಜೊತೆಗೆ ಫೀಲ್ಡಿಂಗ್​ ಕೂಡ ಅಷ್ಟೇ ಜಬರ್ದಸ್ತ್​ ಆಗಿತ್ತು. ಸೂಪರ್​ ಪರ್ಫಾಮೆನ್ಸ್​ ನೀಡಿದ ತಂಡ 5 ವಿಕೆಟ್​ ಉರುಳಿಸುವಲ್ಲಿ ಯಶಸ್ವಿಯಾಯ್ತು. ಕೇವಲ 45 ರನ್​ ಬಿಟ್ಟು ಕೊಟ್ಟ ಆರ್​​ಸಿಬಿ, ಗುಜರಾತ್​ ತಂಡವನ್ನು 147 ರನ್​ಗಳಿಗೆ ಆಲೌಟ್​ ಮಾಡ್ತು.

ಒಟ್ಟಿನಲ್ಲಿ, ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿಯ ಬೌಲರ್​​ಗಳ ಬೊಂಬಾಟ್​ ಪರ್ಫಾಮೆನ್ಸ್​, ಫಸ್ಟ್​ ಹಾಫ್​ನಲ್ಲೇ ಫ್ಯಾನ್ಸ್​​ಗೆ ಭರ್ಜರಿ ಎಂಟರ್​​ಟೈನ್​ಮೆಂಟ್​ ನೀಡ್ತು. ಜೊತೆಗೆ ಅರ್ಧ ಪಂದ್ಯವನ್ನೂ ಆರಂಭದಲ್ಲೇ ಗೆಲ್ಲಿಸಿಬಿಡ್ತು.

ಇದನ್ನೂ ಓದಿ:ರೇವಣ್ಣ ಅರೆಸ್ಟ್.. ಒಂದೇ ಹೋಟೆಲ್​ನಲ್ಲಿ ಅಮಿತ್ ಶಾ, ಕುಮಾರಸ್ವಾಮಿ.. ಮಾತಿಲ್ಲ, ಕತೆ ಇಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಹೊಸ ಭರವಸೆ ಕೊಟ್ಟ ಆರ್​ಸಿಬಿ ಬೌಲರ್ಸ್​.. ಬೊಂಬಾಟ್ ಬೌಲಿಂಗ್​ನ ಹೈಲೆಟ್ಸ್..!

https://newsfirstlive.com/wp-content/uploads/2024/05/RCB-33.jpg

Load More