/newsfirstlive-kannada/media/post_attachments/wp-content/uploads/2024/05/DK_SHIVAKUMAR-1.jpg)
ಗುಜರಾತ್​ನ ರಾಜ್ ಕೋರ್ಟ್​ನಲ್ಲಿ ಗೇಮ್ ಝೋನ್​ ದುರಂತದಲ್ಲಿ ಬೆಂಕಿ ಆರಿದ್ರೂ, ಅಲ್ಲಾದ ಸಾವು-ನೋವಿನ ಕಾವು ಇನ್ನೂ ಕಮ್ಮಿಯಾಗಿಲ್ಲ. ಈ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಕರ್ನಾಟಕದಲ್ಲಿ ಇಂಥ ಘಟನೆಗಳು ಯಾವುದೇ ಕಾರಣಕ್ಕೂ ಆಗದಂತೆ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಹೊತ್ತಿದ್ದ ಈ ಬೆಂಕಿಯ ಜ್ವಾಲೆ ಸಾವಿನ ಆಟಕ್ಕೆ ಕಾರಣವಾಗಿತ್ತು. ವೀಕೆಂಡ್ ಅಂತಾ ಮಕ್ಕಳನ್ನ ಕರ್ಕೊಂಡು ಗೇಮಿಂಗ್ ಝೋನ್‌ಗೆ ಹೋದವರು ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆಗೆ ಇಡೀ ದೇಶವೇ ಮರುಗುತ್ತಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗುರುತು ಸಿಗದ ರೀತಿಯಲ್ಲಿ ಮೃತದೇಹಗಳು ಸುಟ್ಟು ಕರಕಲಾಗಿದ್ದು, ಮೃತರ ಪತ್ತೆಗೆ ಕುಟುಂಬಸ್ಥರು ಮತ್ತು ಮೃತದೇಹಗಳ ಡಿಎನ್​​ಎ ಮಾದರಿ ಸಂಗ್ರಹ ಕಾರ್ಯ ನಡೀತಿದೆ. ಈ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಮುನ್ನೆಚ್ಚರಿಕೆ ಮಂತ್ರ ಪಠಿಸ್ತಿದೆ.
/newsfirstlive-kannada/media/post_attachments/wp-content/uploads/2024/05/GT_FIRE_1.jpg)
ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದ ಡಿಸಿಎಂ ಡಿಕೆಶಿ
ಯಾವಾಗ ಗುಜರಾತ್​ನಲ್ಲಿ ಬೆಂಕಿಯಲ್ಲಿ ಜನರು ಬೆಂದು ಹೋದ್ರೋ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡೋದಕ್ಕೆ ಮುಂದಾಗಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿರೋ ಡಿಸಿಎಂ ಡಿ.ಕೆ ಶಿವಕುಮಾರ್, ರಾಜಧಾನಿಯಲ್ಲಿರೋ ಮನರಂಜನಾ ಕೇಂದ್ರಗಳಲ್ಲಿ ಮುನ್ನಚ್ಚರಿಕೆ ಪರಿಶೀಲಿಸಿ ಅಂತಾ ಸೂಚನೆ ಕೊಟ್ಟಿದ್ದಾರೆ. ಒಂದಷ್ಟು ಸೂಚನೆಗಳನ್ನೂ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/BBMP.jpg)
ಬೆಂಗಳೂರಲ್ಲಿ ‘ಬೆಂಕಿ’ ಅಲರ್ಟ್!
- ರಾಜ್​ಕೋಟ್​ನಲ್ಲಿ ಸಂಭವಿಸಿರುವ ಅಗ್ನಿ ಅವಘಡ ಕಳವಳಕಾರಿ
- ಈ ದುರಂತ ಎಚ್ಚರಿಕೆ ಗಂಟೆಯಾಗಿದ್ದು, ಬೆಂಗಳೂರಿನಲ್ಲಿ ಪರಿಶೀಲಿಸಿ
- ಮಾಲ್. ಇತರೆ ಜನನಿಬಿಡ ಕೇಂದ್ರಗಳಲ್ಲಿ ಅಗ್ನಿ ದುರಂತ ಆಗಬಾರದು
- ಅನಾಹುತಗಳು ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ಯಾ?
- ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ಯಾ ಅಂತಾ ಪರಿಶೀಲಿಸಬೇಕು
- ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಅಂತಾ ಸೂಚನೆ
- ಮನರಂಜನಾ ಕೇಂದ್ರಗಳಲ್ಲಿ ಸೇಫ್ಟಿ ರೂಲ್ಸ್ ಪಾಲನೆ ಆಗುತ್ತಿದ್ಯಾ?
- ಬೆಂಗಳೂರಿನಲ್ಲಿ ಗುಜರಾತ್​ನಂತಹ ದುರ್ಘಟನೆ ನಡೆಯಬಾರದು
- ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರೋ ಡಿಸಿಎಂ ಡಿಕೆಶಿ
ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ
ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಾಲ್​ಗಳು, ಗೇಮಿಂಗ್ ಝೋನ್​ಗಳು, ಮನರಂಜನಾ ಕೇಂದ್ರಗಳ ಮೇಲೆ ಕಣ್ಣಿಡುವಂತೆ ಸೂಚನೆ ನೀಡಲಾಗಿದೆ. ಅಗ್ನಿ ದುರಂತ ಸೇರಿದಂತೆ ಎಲ್ಲ ರೀತಿಯ ಅನಾಹುತ ತಪ್ಪಿಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಡಿಸಿಎಂ ಸೂಚಿಸಿದ್ದಾರೆ. ಗುಜರಾತ್​ನ ಅವಘಡದಿಂದ ಎಚ್ಚೆತ್ತಿರೋ ಇಲ್ಲಿನ ಸರ್ಕಾರ ಸುರಕ್ಷಿತ ಕ್ರಮಗಳತ್ತ ಗಮನಹರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us