newsfirstkannada.com

ಮಾರ್ಕ್ಸ್​​ ಎಂಟ್ರಿ ಮಾಡುವಾಗ ಯಡವಟ್ಟು.. 200ಕ್ಕೆ 212 ಅಂಕ ಕೊಟ್ರು.. ಆಮೇಲೇನಾಯ್ತು?

Share :

Published May 7, 2024 at 5:59am

  ಒಟ್ಟು 1 ಸಾವಿರ ಮಾರ್ಕ್ಸ್​ಗೆ ಪರೀಕ್ಷೆಗಳನ್ನು ನಡೆಸಿದ್ದ ಶಿಕ್ಷಣ ಇಲಾಖೆ

  ಆನ್ಸರ್ ಪತ್ರಿಕೆ ಅಂಕಗಳನ್ನ ನಮೂದಿಸುವಾಗ ಯಡವಟ್ಟು ಮಾಡಿದ್ರಾ?

  ತನಗೆ ಅಂಕಗಳು ಬಂದಿರುವುದು ನೋಡಿ ಆಶ್ಚರ್ಯವಾಗಿದ್ದ ವಿದ್ಯಾರ್ಥಿ

ಗಾಂಧಿನಗರ: ಅಧಿಕಾರಿಗಳ ಯಡವಟ್ಟಿನಿಂದ ವಿದ್ಯಾರ್ಥಿಯೋರ್ವ 2 ವಿಷಯಗಳಿಗೆ ನಿಗದಿತ 200 ಅಂಕಗಳಿಗೆ 211, 212 ಮಾರ್ಕ್ಸ್​ ಪಡೆದಿದ್ದಾನೆ. ಸದ್ಯ ಈ ಸಂಬಂಧ ಗುಜರಾತ್​ನ ದಾಹೋದ್ ಜಿಲ್ಲಾ ಶಿಕ್ಷಣಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಜಿಲ್ಲೆಯ ಜಲೋದ್ ತಾಲೂಕಿನ ಖರಸಾನಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 4ನೇ ತರಗತಿ ವಿದ್ಯಾರ್ಥಿ ವಂಶಿಬೆನ್ ಮನೀಶ್‌ಭಾಯ್ ಮೊನ್ನೆ ಮೊನ್ನೆ ಪರೀಕ್ಷೆಗಳನ್ನು ಬರೆದಿದ್ದನು. ಈ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳಲ್ಲಿ ಬಂದಿರುವ ಅಂಕಗಳನ್ನು ಮಾರ್ಕ್ಸ್​ ಕಾರ್ಡ್​ನಲ್ಲಿ ಎಂಟ್ರಿ ಮಾಡುವಾಗ ದೊಡ್ಡ ಅನಾಹುತಾ ಮಾಡಲಾಗಿದೆ. ಗುಜರಾತಿ ಮತ್ತು ಗಣಿತ ವಿಷಯಕ್ಕೆ ತಲಾ 200 ಅಂಕಗಳನ್ನು ನಿಗದಿ ಮಾಡಲಾಗಿದೆ. ಆದರೆ ಮಾರ್ಕ್ಸ್ ಕಾರ್ಡ್​ನಲ್ಲಿ 211, 212 ಅಂಕಗಳನ್ನು ಪಡೆದುಕೊಂಡಿದ್ದಾನೆ ಎಂದು ನಮೂದಿಸಿದ್ದು ಫಲಿತಾಂಶದಲ್ಲಿ 1000ಕ್ಕೆ 956 ಅಂಕ ನಮೂದು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಆದರೆ ವಿದ್ಯಾರ್ಥಿ ಪ್ರಥಮ ಭಾಷೆ ಗುಜರಾತಿಯಲ್ಲಿ 191 ಮತ್ತು ಗಣಿತ 190 ಪಡೆದಿದ್ದು 1000ಕ್ಕೆ ಒಟ್ಟು 934 ಅಂಕಗಳನ್ನು ಪಡೆದಿದ್ದಾನೆಂದು ಸರಿಪಡಿಸಲಾಗಿದೆ. ಇಷ್ಟೊಂದು ಮಾರ್ಕ್ಸ್​ ಬಂದಿದ್ದಕ್ಕೆ 4ನೇ ವಿದ್ಯಾರ್ಥಿ ಫುಲ್ ಖುಷಿಗೊಂಡಿದ್ದಾನೆ. ಆದರೆ ಅಂಕಪಟ್ಟಿಯಲ್ಲಿ ಹೇಗೆ ತಪ್ಪಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರ್ಕ್ಸ್​​ ಎಂಟ್ರಿ ಮಾಡುವಾಗ ಯಡವಟ್ಟು.. 200ಕ್ಕೆ 212 ಅಂಕ ಕೊಟ್ರು.. ಆಮೇಲೇನಾಯ್ತು?

https://newsfirstlive.com/wp-content/uploads/2024/05/GT_MARKS_CORDS.jpg

Load More