newsfirstkannada.com

ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​​​ಸಿಬಿ ಶಾಕಿಂಗ್​​ ಪ್ರದರ್ಶನ.. ಗುಜರಾತ್​ 147 ರನ್​ಗೆ ಆಲೌಟ್​​

Share :

Published May 4, 2024 at 9:35pm

Update May 4, 2024 at 9:36pm

    ಇಂದು ಆರ್​​ಸಿಬಿ, ಗುಜರಾತ್​ ಟೈಟನ್ಸ್​ ಮಧ್ಯೆ ರೋಚಕ ಪಂದ್ಯ

    ಆರ್​​ಸಿಬಿಗೆ 148 ರನ್​ಗಳ ಸಾಧಾರಣ ಗುರಿ ನೀಡಿದ ಗುಜರಾತ್​​

    ಬೆಂಗಳೂರು ತಂಡದ ಬೌಲರ್​ಗಳ ದಾಳಿಗೆ ತತ್ತರಿಸಿದ ಗಿಲ್​ ಪಡೆ

ಸದ್ಯ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಟ್ಟಿ ಹಾಕಿದೆ. 19.3 ಓವರ್​ಗಳಲ್ಲಿ 147 ರನ್​​ಗೆ ಆಲೌಟ್​ ಮಾಡಿದೆ.

ಇನ್ನು, ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್​ ತಂಡವು ಆರ್​​ಸಿಬಿ ಬೌಲರ್​​ಗಳ ದಾಳಿಗೆ ತತ್ತರಿಸಿದೆ. ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​​ 3 ವಿಕೆಟ್​ ಕಳೆದುಕೊಂಡು ಗುಜರಾತ್​ ಟೈಟನ್ಸ್​​​ ಸಂಕಷ್ಟಕ್ಕೆ ಸಿಲುಕಿತ್ತು. ಸಾಹಾ 1, ಗಿಲ್​ 2, ಸಾಯ್​ ಸುದರ್ಶನ್​​ 6 ರನ್​ಗಳಿಗೆ ಔಟಾದ್ರು.

ಬಳಿಕ ಬಂದ ಶಾರುಖ್​ ಖಾನ್​​​ ಕ್ರೀಸ್​ನಲ್ಲೇ ನಿಂತು 1 ಸಿಕ್ಸರ್​​, 5 ಫೋರ್​ ಸಮೇತ 37 ರನ್​ ಸಿಡಿಸಿದ್ರು. ಡೇವಿಡ್​ ಮಿಲ್ಲರ್​ ಕೂಡ ಶಾರುಖ್​ಗೆ ಸಾಥ್​ ನೀಡಿದ್ದು, 20 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ನೊಂದಿಗೆ 30 ರನ್​ ಪೇರಿಸಿದ್ರು.

ರಾಹುಲ್​ ತೆವಾಟಿಯಾ ಮತ್ತು ರಶೀದ್​ ಖಾನ್​ ಭರ್ಜರಿ ಆಟ ಆಡಿದ್ರು. ತೆವಾಟಿಯಾ 21 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 35 ರನ್​​, ರಶೀದ್​ ಖಾನ್​​ 1 ಸಿಕ್ಸ್​​, 2 ಫೋರ್​ನೊಂದಿಗೆ 18 ರನ್​ ಚಚ್ಚಿದ್ರು. ವಿಜಯ್​ ಶಂಕರ್​​ 10 ರನ್​ಗೆ ವಿಕೆಟ್​ ಒಪ್ಪಿಸಿದ್ರು.

ಆರ್​​ಸಿಬಿ ಪರ ಸಿರಾಜ್​​, ಯಶ್​ ದಯಾಳ್​​, ವೈಶಾಕ್​​ ತಲಾ 2 ವಿಕೆಟ್​ ತೆಗೆದ್ರು. ಕ್ಯಾಮೆರಾನ್​ ಗ್ರೀನ್​ ಮತ್ತು ಕರಣ್​ ಶರ್ಮಾ ತಲಾ 1 ವಿಕೆಟ್​ ತೆಗೆದ್ರು.

ಇದನ್ನೂ ಓದಿ: ಗುಜರಾತ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ವಿಲ್​​ ಜಾಕ್ಸ್​ ಆಡೋದು ಡೌಟ್​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​​​ಸಿಬಿ ಶಾಕಿಂಗ್​​ ಪ್ರದರ್ಶನ.. ಗುಜರಾತ್​ 147 ರನ್​ಗೆ ಆಲೌಟ್​​

https://newsfirstlive.com/wp-content/uploads/2024/05/Virat_RCB.jpg

Load More