newsfirstkannada.com

ಬಿಜಾಪುರದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ; 6 ಮಂದಿ ಮಾವೋವಾದಿಗಳು ಸಾವು

Share :

Published March 27, 2024 at 12:31pm

Update March 27, 2024 at 12:32pm

    ಲೋಕ ಸಭಾ ಚುನಾವಣೆಯ ಸಮಯದಲ್ಲಿ ನಕ್ಸಲರ ಅಟ್ಟಹಾಸ

    ಮಾರ್ಚ್​ 23ರಂದು ದಾಂತೇವಾಡದಲ್ಲಿ ಐಇಡಿ ಸ್ಫೋಟ ನಡೆದಿತ್ತು

    ಭದ್ರತಾ ಸಿಬ್ಬಂದಿ ಗುಂಡೇಟಿಗೆ ಮಹಿಳಾ ಕೇಡರ್​ ಸೇರಿ 6 ಮಂದಿ ನಕ್ಸಲರು ಸಾವು

ಛತ್ತೀಸ್​ಘಡ ರಾಜ್ಯದ ಬಿಜಾಪುರದಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಮಹಿಳಾ ಕೇಡರ್​ ಸೇರಿ ಆರು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ.

ಬಸಗುಡ ಪೊಲೀಸ್​ ಠಾಣೆ ವ್ಯಾಪ್ತಿಯ ಚಿಕುರಭಟ್ಟಿ ಮತ್ತು ಪುಸ್ಬಾಕ ಗ್ರಾಮದ ಕಾಡಿನಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ದಾಳಿ ನಡೆದಿದೆ. ಡಿಸ್ಟ್ರಿಕ್ಟ್​​ ರಿಸರ್ವ್​ ಗಾರ್ಡ್​, ಸೆಂಟ್ರಲ್​ ರಿಸರ್ವ್​ ಪೊಲೀಸ್​ ಪೋರ್ಸ್​ ಮತ್ತು ಕೋಬ್ರಾ ಕಮಾಂಡೋಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಮಹಿಳೆ ಸೇರಿ ಒಟ್ಟು ಆರು ಜನರು ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಬಲಿಯಾಗಿದ್ದಾರೆ. ಸದ್ಯ ಕಾರ್ಯಚರಣೆ ಮುಂದುವರಿದಿದೆ ಎಂಬ ಸುದ್ದಿ ಕೇಳಿಬಂದಿದೆ.

ಇನ್ನು ಲೋಕ ಸಭಾ ಚುನಾವಣೆಯ ದಿನಾಂಕ ಪ್ರಕಟಗೊಂಡಿದೆ. ಬಿಜಾಪುರದ ಬಸ್ತಾರ್​​ನಲ್ಲಿ ಏಪ್ರಿಲ್​ 19ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಆದರೆ ಅದಕ್ಕೂ ಮುನ್ನವೇ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆಗೆ ಗುಂಡಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ.. ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಮಾರ್ಚ್​ 23ರಂದು ದಾಂತೇವಾಡದಲ್ಲಿ ಐಇಡಿ ಸ್ಫೋಟ ನಡೆದಿತ್ತು. ಇದರಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದರು.

ಬಿಜಾಪುರದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ; 6 ಮಂದಿ ಮಾವೋವಾದಿಗಳು ಸಾವು

https://newsfirstlive.com/wp-content/uploads/2024/03/Naxal-1.jpg

Load More