newsfirstkannada.com

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ.. ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

Share :

Published March 27, 2024 at 8:35am

Update March 27, 2024 at 8:36am

    95ನೇ ವಯಸ್ಸಿನಲ್ಲಿ ನಿಧನರಾದ ಸ್ವಾಮಿ ಸ್ಮರಣಾನಂದ ಜಿ ಮಹರಾಜ್

    ಸ್ವಾಮಿ ಸ್ಮರಣಾನಂದರವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

    ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಸ್ವಾಮಿ ಸ್ಮರಣಾನಂದ ಜಿ ಮಹರಾಜ್

ರಾಮಕೃಷ್ಣ ಮಿಷನ್​​ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಜಿ ಮಹರಾಜ್​ರವರು ಮಂಗಳವಾರದಂದು ನಿಧನರಾಗಿದ್ದಾರೆ. 95 ವರ್ಷ ವಯಸ್ಸಿನ ಅವರು ವಯೋ ಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.

ಸ್ವಾಮಿ ಸ್ಮರಣಾನಂದರವರು ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ಸ್ವಾಮಿ ಸ್ಮರಣಾನಂದರವರು ಅಸಂಖ್ಯಾತ ಹೃದಯ ಮತ್ತು ಮನಸ್ಸಿನ ಮೇಲೆ ಅಳಿಸಲಾದಂತಹ ಛಾಪು ಮೂಡಿಸಿದ್ದಾರೆ. ಅವರ ಸಹಾನುಭೂತಿ ಮತ್ತು ಬುದ್ಧಿವಂತಿಕೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’ ಎಂದು ಹೇಳಿದ್ದಾರೆ.

ಇದನ್ನು ಓದಿ: ಹೋಳಿ ಸಂಭ್ರಮದ ವೇಳೆ ಸ್ಪೀಕರ್​ ಬಾಕ್ಸ್​ ಬಿದ್ದು 6 ವರ್ಷದ ಬಾಲಕ ಸಾವು

ಸ್ವಾಮಿ ಸ್ಮರಣಾನಂದರವರು ಮಂಗಳವಾರ ರಾತ್ರಿ 8.14ಕ್ಕೆ ನಿಧನರಾದರು. ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ರಾಮಕೃಷ್ಣಮಿಷನ್​ ಸೇವಾ ಪ್ರತಿಷ್ಠಾನಕ್ಕೆ ದಾಖಲಿಸಲಾಯಿತು. ನಂತರ ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ವೆಂಟಿಲೇಟರ್​ನಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸ್ವಾಮಿ ಸ್ಮರಣಾನಂದರವರು ಕೊನೆಯುಸಿರೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ.. ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

https://newsfirstlive.com/wp-content/uploads/2024/03/Modi-1-1.jpg

Load More