newsfirstkannada.com

ಪಂತ್ ಆ​​ ವಿಷಯ ಕೇಳಿ ಕಣ್ಣೀರಿಟ್ಟ ಲೆಜೆಂಡರಿ ಕ್ರಿಕೆಟರ್​​.. ಈ ಬಗ್ಗೆ ಹೇಳಿದ್ದೇನು ಗೊತ್ತಾ?

Share :

Published June 11, 2024 at 6:13am

  ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಿಷಬ್​ ಪಂತ್

  ಮತ್ತೆ ಟೀಮ್ ಇಂಡಿಯಾಕ್ಕೆ ಮರಳಲು ಭಾರೀ ಕಷ್ಟ ಪಟ್ಟಿದ್ದರು

  ರಿಷಬ್ ಪಂತ್​ರನ್ನ ಆಸ್ಪತ್ರೆಯಲ್ಲಿ ನೋಡಿದಾಗ ನೋವಾಗಿತ್ತು

ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಭರ್ಜರಿಯಾಗಿ ಗೆಲುವು ಪಡೆದಿದೆ. ಈಗಾಗಲೇ ರೋಹಿತ್ ಬಾಯ್ಸ್​ ಈ ಗೆಲುವನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ. ಪಾಕ್​ ವಿರುದ್ಧ ಗೆಲವು ಎಂದರೆ ಅದು ಇಂಡಿಯನ್ ಪ್ಲೇಯರ್ಸ್​ಗೆ ವಿಶ್ವಕಪ್ ಗೆದ್ದಷ್ಟು ಸಂತಸ. ಇಂತಹ ಸಂದರ್ಭದಲ್ಲಿ ಕ್ರಿಕೆಟ್​ ಲೆಜೆಂಡರಿ ರವಿಶಾಸ್ತ್ರಿಯವರು ರಿಷಬ್ ಪಂತ್ ಬಗ್ಗೆ ಮನದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

ರಿಷಬ್ ಪಂತ್ ಸದ್ಯ ಟೀಮ್ ಇಂಡಿಯಾ ಕಷ್ಟ ಕಾಲದಲ್ಲೂ ರನ್​ ಗಳಿಸುವ ಯುವ ಪ್ಲೇಯರ್. ಏಕೆಂದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್, ಶಿವಂ ದುಬೆ ಸೇರಿದಂತೆ ಎಲ್ಲರೂ ಬ್ಯಾಟಿಂಗ್​​ನಲ್ಲಿ ಕೈಕೊಟ್ಟಿದ್ದರು. ಆದರೆ ರಿಷಬ್ ಪಂತ್ ಮಾತ್ರ ಕ್ರೀಸ್​ ಕಚ್ಚಿ ನಿಂತು 31 ಎಸೆತದಲ್ಲಿ 42 ರನ್​ ಗಳಿಸಿ ಭಾರತದ ಗೆಲುವಿಗೆ ಕಾರಣವಾದರು. ಇದರಿಂದ ಪಂತ್ ಪಾಕ್ ಜೊತೆಗಿನ ಮ್ಯಾಚ್​ನಲ್ಲಿ ಹೀರೋ ಆಗಿದ್ದರು ಎನ್ನಬಹುದು. ಸದ್ಯ ರವಿಶಾಸ್ತ್ರಿ ಕೂಡ ರಿಷಬ್ ಪಂತ್​ಗೆ ಆ್ಯಕ್ಸಿಡೆಂಟ್ ಆಗಿದ್ದಾಗ ಕಣ್ಣೀರು ಹಾಕಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 3ನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

ಕಾರು ಆ್ಯಕ್ಸಿಡೆಂಟ್​ನಲ್ಲಿ ಪಂತ್ ತೀವ್ರವಾಗಿ ಗಾಯಗೊಂಡ ವಿಷಯವನ್ನು ಕೇಳಿದಾಗ ನನ್ನ ಕಣ್ಣುಗಳಿಂದ ನೀರು ಬಂದವು. ಆದರೆ ಪಂತ್​ರನ್ನ ಆಸ್ಪತ್ರೆಯಲ್ಲಿ ನೋಡಿದಾಗ ಮನಸಿಗೆ ಇನ್ನಷ್ಟು ನೋವಾಗಿತ್ತು. ಆ ಪರಿಸ್ಥಿತಿಯಲ್ಲಿ ಯುವ ಆಟಗಾರನನ್ನ ನೋಡಲಾಗಲಿಲ್ಲ. ಪಂತ್ ಗಾಯಗಳಿಂದ ಚೇತರಿಸಿಕೊಂಡು ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಲು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅದರಲ್ಲಿ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ರಿಷಬ್ ಪಂತ್ ಹೃದಯಸ್ಪರ್ಶಿ ಬ್ಯಾಟಿಂಗ್ ಮಾಡಿ ಎಲ್ಲರ ಮನ ಗೆದ್ದರು ಎಂದು ರವಿಶಾಸ್ತ್ರಿಯವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಂತ್ ಆ​​ ವಿಷಯ ಕೇಳಿ ಕಣ್ಣೀರಿಟ್ಟ ಲೆಜೆಂಡರಿ ಕ್ರಿಕೆಟರ್​​.. ಈ ಬಗ್ಗೆ ಹೇಳಿದ್ದೇನು ಗೊತ್ತಾ?

https://newsfirstlive.com/wp-content/uploads/2024/06/RISHAB_PANT_CATCH.jpg

Load More