newsfirstkannada.com

ಗೋವುಗಳೊಂದಿಗೆ ಪ್ರಧಾನಿ ಮೋದಿ ಸಂಕ್ರಾಂತಿ.. ರಾಜ್ಯದಲ್ಲಿ ರೈತರ ಸುಗ್ಗಿ ಸಂಭ್ರಮ ಹೇಗಿದೆ..?

Share :

Published January 15, 2024 at 6:37am

    ಬಾಗಲಕೋಟೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

    ಧಾರವಾಡದ ರಂಗಾಯಣದ ಉದ್ಯಾನದಲ್ಲಿ ಸಂಕ್ರಾಂತಿ ಸಡಗರ

    ಚಿಕ್ಕಬಳ್ಳಾಪುರದಲ್ಲಿ ಮಕ್ಕಳಿಂದ ಸಂಕ್ರಾಂತಿ ಸುಗ್ಗಿ ಸಂಭ್ರಮ

ನಾಡಿನೆಲ್ಲೆಡೆ ಸಡಗರ-ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗ್ತಿದೆ. ಪ್ರಧಾನಿ ಮೋದಿ ಮಾತ್ರ ವಿಶೇಷವಾಗಿ ಹಬ್ಬ ಆಚರಿಸಿದ್ದಾರೆ.

ಗೋವುಗಳೊಂದಿಗೆ ಪ್ರಧಾನಿ ಮೋದಿ ಸಂಕ್ರಾಂತಿ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ವಿಶೇಷ ಅತಿಥಿಗಳ ಜೊತೆ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಮೋದಿ ಗೋವುಗಳ ಜೊತೆ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ಕಪ್ಪು ಬಿಳಿಪು ಬಣ್ಣದ ನಾಲ್ಕೈದು ಹಸುಗಳ ಜೊತೆ ಹಬ್ಬ ಆಚರಿಸಿದ್ದಾರೆ.

ಗೋವುಗಳಿಗೆ ಹುಲ್ಲು ಮತ್ತಿತರ ಆಹಾರ ತಿನ್ನಿಸಿ ಖುಷಿ ಪಟ್ಟಿದ್ದಲ್ಲದೇ ತಬ್ಬಿ ಮುತ್ತುಕೊಟ್ಟು ಸಂಭ್ರಮಿಸಿದ್ದಾರೆ. ದೇಶದ ಜನರಿಗೆ ಮೋದಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಹಬ್ಬ ಎಲ್ಲರಿಗೂ ಶುಭ ತರಲಿ ಅಂತ ಆಶಿಸಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿ ಸಡಗರ.. ಪ್ರಧಾನಿ ಮೋದಿ ಸೆಲೆಬ್ರೇಟ್‌ ಮಾಡಿದ ವಿಶೇಷ ಪೋಟೋಗಳು​ ಇಲ್ಲಿವೆ

ಬಾಗಲಕೋಟೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ರನ್ನ ಬೆಳಗಲಿಯ ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಹಳ್ಳಿ ಸೊಗಡಿನ ಧಿರುಸು ಹಾಕಿ ಮಿಂಚಿದ್ರು‌.

ಜೊತೆಗೆ ಎತ್ತಿನ ಬಂಡಿ ಮೆರವಣಿಗೆ, ಡೊಳ್ಳು ಕುಣಿತ, ಕೋಲಾಟ, ಗೊಂಬೆ ಕುಣಿತ, ಶಹನಾಯಿ ವಾದನ, ಕರಡಿ ಮಜಲ್ ಗಳು ಸಂಕ್ರಾಂತಿ ಸಂಭ್ರಮದ ಮೆರುಗನ್ನು ಹೆಚ್ಚಿಸಿದವ್ರು‌. ಇತ್ತ ಮುಧೋಳದಲ್ಲಿಯೂ ಮಹಿಳೆಯರು ಇಡೀ ನಗರದಲ್ಲಿ ಚಕ್ಕಡಿಯಲ್ಲಿ ಸುತ್ತಿದ್ರು. ಬಳಿಕ ಜಮೀನಿಗೆ ತೆರಳಿ ಸಂಕ್ರಮಣ ಆಚರಣೆ ಮಾಡಿ, ಕುಣಿದು ಕುಪ್ಪಳಿಸಿದ್ರು.

ಚಿಕ್ಕಬಳ್ಳಾಪುರದಲ್ಲಿ ಮಕ್ಕಳಿಂದ ಸಂಕ್ರಾಂತಿ ಸುಗ್ಗಿ ಆಚರಣೆ

ಇನ್ನು ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಇರುವ ಬಿಜಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಪ್ರತಿದಿನ ಕೈಯಲ್ಲಿ ಪೆನ್ನು, ಪೇಪರ್ ಹಿಡಿದು ವಿದ್ಯಾಭ್ಯಾಸದಲ್ಲಿ ತೊಡಗಿರುತ್ತಿದ್ದ ವಿದ್ಯಾರ್ಥಿಗಳು ಕೈಯಲ್ಲಿ ಬೀಸುಕಲ್ಲು ಹಿಡಿದು ರಾಗಿ ಬೀಸಿ, ಭತ್ತ ಕುಟ್ಟಿ, ರಾಗಿ ರಾಶಿ ಮಾಡಿ ನಲಿಯುವುದು, ಅವರೇಕಾಯಿ ಸುಲಿದು ಹಂಚಿಕೊಂಡು ಸಂಕ್ರಾಂತಿ ಆಚರಿಸಿದ್ರು. ಸಾಂಪ್ರದಾಯಿಕ ಕಲರ್‍ ಪುಲ್ ಉಡುಗೆಗಳಲ್ಲಿ ಮಿರಾಮಿರ ಮಿಂಚಿ ಖುಷಿ ಪಟ್ರು.

ಧಾರವಾಡದ ರಂಗಾಯಣದ ಉದ್ಯಾನದಲ್ಲಿ ಜಾನಪದ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮವೂ ಜೋರಾಗಿತ್ತು. ಜರತಾರಿ ಸೀರೆಯುಟ್ಟ ನಾರಿಯರ ವೈಯ್ಯಾರ, ತಲೆಗೆ ಪೇಟ ಹಾಕಿಕೊಂಡಿರುವ ಹುರಿ ಮೀಸಿಯೆ ಯಜಮಾನ ಒಂದೇಡೆ ಸೇರಿ ಹಬ್ಬ ಆಚರಿಸಿದರು. ಒಟ್ಟಾರೆ ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಜನರು ಸಡಗರ-ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋವುಗಳೊಂದಿಗೆ ಪ್ರಧಾನಿ ಮೋದಿ ಸಂಕ್ರಾಂತಿ.. ರಾಜ್ಯದಲ್ಲಿ ರೈತರ ಸುಗ್ಗಿ ಸಂಭ್ರಮ ಹೇಗಿದೆ..?

https://newsfirstlive.com/wp-content/uploads/2024/01/MODI-38.jpg

Load More