newsfirstkannada.com

ಯುವತಿ ಮೇಲೆ ಆಟೋ ಡ್ರೈವರ್‌ ಪೌರುಷ.. ವಿಡಿಯೋ ನೋಡಿ ಬೆಂಗಳೂರಿಗರೇ ಶಾಕ್‌! ಅಸಲಿಗೆ ಆಗಿದ್ದೇನು?

Share :

Published September 5, 2024 at 5:58pm

    ಆಟೋ ಬುಕ್ಕಿಂಗ್ ಕ್ಯಾನ್ಸಲ್​ ಮಾಡಿದ್ದಕ್ಕೆ ಆಟೋ ಡ್ರೈವರ್​ನ ರೋಷಾವೇಷ

    ಯುವತಿಯ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದನೆ, ಹಲ್ಲೆ ಮಾಡಿದ ಡ್ರೈವರ್​!

    ಡ್ರೈವರ್​ ವೀರಾವೇಷಕ್ಕೆ ಎಕ್ಸ್ ಖಾತೆಯಲ್ಲಿ ಪೋಸ್ಟ್, ವಿಡಿಯೋ ಫುಲ್‌ ವೈರಲ್​

ಬೆಂಗಳೂರಿನ ಆಟೋ ಡ್ರೈವರ್​ಗಳ ಮೇಲೆ ಸದಾ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತವೆ. ಹೆಚ್ಚು ಕಡಿಮೆ ಆಟೋ ಸೇವೆಯ ಬಗ್ಗೆ ಜನರಲ್ಲಿ ಬಹಳ ಕಡಿಮೆ ಒಳ್ಳೆಯ ಅಭಿಪ್ರಾಯವಿದೆ. ಪ್ರಯಾಣಿಕರಿಂದಲೇ ಅವರ ಬದುಕು ನಡೆಯುವುದು. ಓಲಾ ಉಬರ್​ಗಳ ಹಾವಳಿಯ ನಡುವೆಯೇ ಎಷ್ಟೋ ಜನರು ಆಟೋಗಳಿಗೆ ಪ್ರಾಮುಖ್ಯತೆ ನೀಡಿ ಆಟೋ ಸೇವೆಯನ್ನೇ ಪಡೆಯುತ್ತಾರೆ. ಆದ್ರೆ ಬೆಂಗಳೂರು ಆಟೋ ಡ್ರೈವರ್​ಗಳು ಪ್ರಯಾಣಿಕರನ್ನು ಗೌರವಿಸುವ ವಿಚಾರದಲ್ಲಿ ಕೊಂಚ ಎಡುವುತ್ತಿದ್ದಾರಾ ಅನ್ನೋ ಅನುಮಾನಗಳು ಸದ್ಯ ಮೂಡುತ್ತಿವೆ. ಅದಕ್ಕೆ ಸಾಕ್ಷಿಯೆಂಬಂತಿದೆ ಯುವತಿಯೊಬ್ಬಳು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ.

ಇದನ್ನೂ ಓದಿ: ಜೈಲಲ್ಲಿ ದಾಸನ ದಶಾವತಾರ.. ಸೆಲ್‌ನಿಂದ ಬೇಸರದಲ್ಲೇ ಹೊರ ಬಂದ ದರ್ಶನ್‌; 10 ಫೋಟೋ ಇಲ್ಲಿವೆ!

ಯುವತಿಯೊಬ್ಬಳು ತನ್ನ ಗೆಳತಿಯ ಜೊತೆ ಸೇರಿ ಆಟೋ ಸೇವೆಯನ್ನು ಪಡೆಯಲು ಮುಂದಾಗಿದ್ದಾಳೆ. ಇಬ್ಬರು ಪೀಕ್ ಹವರ್ ಇದ್ದ ಕಾರಣ ಇಬ್ಬರು ಒಂದೊಂದು ಓಲಾ ಆಟೋ ಬುಕ್ ಮಾಡಿದ್ದಾರೆ. ಯಾವುದು ಮೊದಲು ಬರುತ್ತದೆಯೋ ಅದನ್ನು ಹತ್ತಿಕೊಂಡು ಹೋದರಾಯ್ತು ಅಂತ ನಿರ್ಧರಿಸಿ. ಮೊದಲ ಬಂದ ಆಟೋ ಏರಿ ಕುಳಿತ ಯುವತಿಯರು ಎರಡನೇ ಆಟೋದ ಸೇವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮತ್ತೊಂದು ಆಟೋ ಡ್ರೈವರ್​, ನಾನು ಸಾಕಷ್ಟು ದೂರದಿಂದ ಬಂದಿದ್ದೇನೆ, ಗ್ಯಾಸ್ ಏನು ನಿಮ್ಮಪ್ಪ ಹಾಕ್ತಾನಾ ಅಂತ ಅರಚಾಡಿದ್ದಾನೆ. ಅದು ಮಾತ್ರವಲ್ಲದೇ ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಕೊನೆಗೆ ಯುವತಿ ಮುಖಕ್ಕೆ ಹೊಡೆದಿದ್ದಾನೆ. ಇದೆಲ್ಲವನ್ನೂ ವಿಡಿಯೋ ಮಾಡಿಕೊಂಡ ಯುವತಿ ಅದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಾಕಿದ್ದಾಳೆ. ಇಡೀ ವಿಡಿಯೋದಲ್ಲಿ ಆಟೋ ಡ್ರೈವರ್​ ಪೌರುಷ ಪ್ರದರ್ಶನವಾಗಿದೆ. ಅವಾಚ್ಯ ಶಬ್ದಗಳೇ ಅವನ ಬಾಯಿಂದ ಆಚೆ ಬಂದಿವೆ.

ಇದನ್ನೂ ಓದಿ: ಕುಂದಾಪುರ ಪ್ರಾಂಶುಪಾಲರಿಗೆ ಬಿಗ್ ಶಾಕ್‌.. ಶಿಕ್ಷಕ ದಿನಾಚರಣೆಯಂದೇ ಪ್ರಶಸ್ತಿ ತಡೆ ಹಿಡಿದ ಸರ್ಕಾರ? ಏನಿದು ವಿವಾದ?

ಈ ಎಲ್ಲಾ ವಿಡಿಯೋಗಳನ್ನು ಎಕ್ಸ್ ಖಾತೆಯಲ್ಲಿ ಅಪ್​ಲೋಡ್ ಮಾಡಿರುವ ಯುವತಿ, ಬೆಂಗಳೂರು ಸಿಟಿ ಪೊಲೀಸ್, ಓಲಾ ಹಾಗೂ ಓಲಾ ಸಪೋರ್ಟರ್ಸ್​ ಖಾತೆಗಳನ್ನ ಟ್ಯಾಗ್ ಮಾಡಿದ್ದಾರೆ. ಯುವತಿಯ ಪೋಸ್ಟ್​ಗೆ ಸ್ಪಂದಿಸಿರುವ ಬೆಂಗಳೂರು ಪೊಲೀಸರು ಕೂಡಲೇ ಘಟನೆ ನಡೆದ ಏರಿಯಾ ಮತ್ತು ನಿಮ್ಮ ಮೊಬೈಲ್ ನಂಬರ್​ನ್ನು ಡಿಎಂ ಅಂದ್ರೆ ಡೈರೆಕ್ಟ್ ಮೆಸೇಜ್ ಮಾಡುವಂತೆ ಸೂಚಿಸಿದ್ದಾರೆ. ಆಟೋ ಡ್ರೈವರ್ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವತಿ ಮೇಲೆ ಆಟೋ ಡ್ರೈವರ್‌ ಪೌರುಷ.. ವಿಡಿಯೋ ನೋಡಿ ಬೆಂಗಳೂರಿಗರೇ ಶಾಕ್‌! ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/BNG-AUTO-DRIVER-ON-LADY.jpg

Load More