ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ಬಂದಿದ್ದ ಪ್ರಶಸ್ತಿಗೆ ತಡೆ
ಸರ್ಕಾರದ ಆದೇಶದ ವಿರುದ್ಧ ಸಿಡಿದೆದ್ದ ಬಿಜೆಪಿ ಪಾಳಯ, ನ್ಯಾಯ ಸಿಗುವ ಭರವಸೆ
ಹಿಜಾಬ್ ವಿಚಾರದಲ್ಲಿ ಸರ್ಕಾರದ ಆದೇಶ ಪಾಲಿಸಿದ್ದೇ ತಪ್ಪಾಯ್ತಾ? ಸಾಲು, ಸಾಲು ಪ್ರಶ್ನೆ!
ಉಡುಪಿ: ಒಂದು ಸದೃಢ ಸಮಾಜಕ್ಕಾಗಿ, ಉತ್ತಮ ಸಮಾಜಕ್ಕಾಗಿ ಶಿಕ್ಷಕರು ಅಗತ್ಯ. ಶಿಕ್ಷಕ ನೀಡುವ ಶಿಕ್ಷಣವೇ ಒಂದು ಸಮಾಜವನ್ನು ಒಂದು ದೇಶವನ್ನು ಕೇವಲ ಸಾಕ್ಷರತೆಯ ದೇಶವನ್ನಾಗಿಸುವುದಿಲ್ಲ. ದೇಶವನ್ನು ಸೃಜನಶೀಲದತ್ತನ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರದಿಂದ ಹಿಡಿದ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವವರೇ ಒಬ್ಬ ಅತ್ಯುತ್ತಮ ಶಿಕ್ಷಕರು. ಅವರನ್ನು ಯಾವುದೇ ಅಜೆಂಡಾ ಚಾಳೀಸು ಧರಿಸಿ ನೋಡುವುದು ಶಿಕ್ಷಕ ವೃಂದಕ್ಕೆ ಮಾಡುವ ಅವಮಾನ ಅನ್ನೋ ಮಾತುಗಳು ಸದ್ಯ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಸಿದ್ದರಾಮಯ್ಯ ಸರ್ಕಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿಜಿ ಅವರ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ತಡೆ ಹಿಡಿದಿದೆ. ಇದರ ವಿರುದ್ಧ ಬಿಜೆಪಿ ಈಗ ಕೆಂಡಾಮಂಡಲವಾಗಿದೆ.
ಇದನ್ನೂ ಓದಿ:ಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗೋ ಹಾಗೆ ಹಲ್ಲೆ; ದರ್ಶನ್ ಗ್ಯಾಂಗ್ ಭೀಕರತೆ ಬಿಚ್ಚಿಟ್ಟ 3 ಫೋಟೋ ಇಲ್ಲಿವೆ
ಶಿಕ್ಷಕರ ದಿನಾಚಣೆಯ ದಿನವೇ ಉಡುಪಿಯಲ್ಲಿ ಮತ್ತೆ ಹಿಜಾಬ್ ವಿವಾದದ ಕಿಡಿ ಹೊತ್ತಿದೆ. ಕುಂದಾಪುರ ತಾಲೂಕಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿಜಿ ಅವರಿಗೆ ಒಲಿದು ಬಂದ ಪ್ರಶಸ್ತಿಯನ್ನ ರಾಜ್ಯ ಸರ್ಕಾರ ತಡೆ ಹಿಡಿದೆ. ಅದಕ್ಕೆ ಕಾರಣ ಸರ್ಕಾರದ ಆದೇಶ ಎನ್ನುತ್ತಿದ್ದಾರೆ ಇಲಾಖೆಯ ಅಧಿಕಾರಿಗಳು. ಈ ಹಿಂದೆ ನಡೆದ ಹಿಜಾಬ್ ವಿವಾದದಲ್ಲಿ ರಾಮಕೃಷ್ಣ ಬಿಜಿಯವರು ತಮ್ಮ ಕಾಲೇಜಿನಲ್ಲಿ ಹಿಜಾಬ್ ಹಾಕಿಕೊಂಡು ಬರದಂತೆ ವಿದ್ಯಾರ್ಥಿನಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಈ ಕಾರಣಕ್ಕಾಗಿಯೇ ಅವರಿಗೆ ಬಂದ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ ಅನ್ನೋ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಅಂಗಲಾಚಿ, ಚೀರಾಡಿದ ರೇಣುಕಾಸ್ವಾಮಿ.. ಒಂದಲ್ಲ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್; ಏನಿದರ ರಹಸ್ಯ?
ಬಿಜೆಪಿ ಅಧಿಕಾರದ ಅವಧಿಯಲ್ಲಿ ಆಗಿದ್ದ ಹಿಜಾಬ್ ಗಲಾಟೆ ವೇಳೆ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶಿಸಲು ಪ್ರಾಂಶುಪಾಲ ರಾಮಕೃಷ್ಠ ಒಪ್ಪಿಗೆ ನೀಡಿರಲಿಲ್ಲ. ಸಮವಸ್ತ್ರದ ಪಾಲನೆ ಕಡ್ಡಾಯಗೊಳಿಸಿದ್ದರು. ಇದೇ ಕಾರಣಕ್ಕೆ ಪ್ರಶಸ್ತಿ ನೀಡಿಲ್ಲ ಎಂಬ ವಾದಗಳು ಸದ್ಯ ಕೇಳಿ ಬರುತ್ತಿವೆ. ಈ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಿದ್ದಕ್ಕೆ ಪ್ರಗತಿಪರ ಚಿಂತಕರು ವಿರೋಧ ಮಾಡಿದ ಕಾರಣ ಸರ್ಕಾರ ಪ್ರಶಸ್ತಿ ಘೋಷಣೆಯನ್ನು ವಾಪಸ್ ಪಡೆದಿದೆ ಎನ್ನಲಾಗುತ್ತಿದೆ.
ನ್ಯಾಯ ಸಿಗುವ ಭರವಸೆ ನೀಡಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ
ಪ್ರಾಂಶುಪಾಲರ ಪ್ರಶಸ್ತಿಯನ್ನು ತಡೆ ಹಿಡಿದ ವಿಚಾರವಾಗಿ ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದಾರೆ. ನನಗೆ ಕರೆ ಮೇಲೆ ಕರೆ ಬರುತ್ತಿವೆ. ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರು ನೀವು ಸುಮ್ಮನೆ ಇದ್ದೀರಲ್ಲ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದ್ರೆ. ಸರ್ಕಾರದ ನಿರ್ಧಾರವೇ ನಮ್ಮ ನಿರ್ಧಾರ ಎಂದು ಹೇಳುತ್ತಿದ್ದಾರೆ. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತವೆ ಕುಂದಾಪುರಕ್ಕೆ ಇಂದಲ್ಲ ನಾಳೆ ನ್ಯಾಯ ಸಿಗುತ್ತದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ: ಶಾಲಾ ಹಾಗೂ ಸರ್ಕಾರಿ ಬಸ್ ಮುಖಾಮುಖಿ.. ಇಬ್ಬರು ಸಾವು, ತುಂಡರಿಸಿ ಬಿದ್ದ 4 ವಿದ್ಯಾರ್ಥಿಗಳ ಕಾಲು
ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷರ ಅಗತ್ಯವಿದೆ. ಪ್ರಾಂಶುಪಾಲರ ಪ್ರಶಸ್ತಿ ವಾಪಸ್ ಪಡೆದದ್ದು ನೋವಿನ ಸಂಗತಿ. ಸರ್ಕಾರದ ನಡೆಯೇ ಆಶ್ಚರ್ಯಕ್ಕೆ ನೂಕಿದೆ. ಸಮಾನ ವಸ್ತ್ರ ಇರಬೇಕು ಎಂದು ಹಿಜಾಬ್ ನಿಷೇಧಿಸಲಾಗಿತ್ತು. ಅಂದು ಪ್ರಾಂಶುಪಾಲರು ಸರ್ಕಾರದ ಆದೇಶವನ್ನು ಸರ್ಕಾರಿ ಅಧಿಕಾರಿಯಾಗಿ ಪಾಲಿಸಿದ್ದಾರೆ. ಹೈಕೋರ್ಟ್ ಕೂಡ ಅದಕ್ಕೆ ಪೂರಕವಾದ ಆದೇಶವನ್ನೇ ನೀಡಿತ್ತು. ಸಂವಿಧಾನದ ಆಶಯ ಅಂಬೇಡ್ಕರ್ ಅವರ ಆಶಯಕ್ಕೆ ಅನುಸಾರವಾಗಿ ಆದೇಶ ನೀಡಿತ್ತು ಸರಕಾರ ಹೈಕೋರ್ಟ್ ನ ಆದೇಶವನ್ನು ಗೌರವಿಸುತ್ತದೋ? ಅಥವಾ ತಮ್ಮ ಅಜೆಂಡವನ್ನು ಗೌರವಿಸುತ್ತದೋ ಸರ್ಕಾರ ಉತ್ತರಿಸಬೇಕು, ಇದು ಸರ್ಕಾರ ಶಿಕ್ಷಕವೃಂದಕ್ಕೆ ಮಾಡಿದ ಅಪಾಮನ, ಸಿಎಂ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಶಿಕ್ಷಕರಿಗೆ ಪ್ರಶಸ್ತಿಯನ್ನು ಪುನರ್ಘೋಷಣೆ ಮಾಡಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ