ಶೆಡ್‌ನಲ್ಲಿ ಬಿಟ್ಟು ಬಿಡಿ ಅಂತ ಅಂಗಲಾಚಿರುವ ರೇಣುಕಾಸ್ವಾಮಿ
ದರ್ಶನ್ ಮೇಲೆ ಅಂಗಲಾಚಿ ಬೇಡುತ್ತಿದ್ದ ರೇಣುಕಾಸ್ವಾಮಿಗೆ ಒದ್ದ ಆರೋಪ
ತಪ್ಪಾಯ್ತು ನನ್ನ ಬಿಡಿ ಅಂತಾ ಅಳುತ್ತಾ ಬೇಡಿಕೊಂಡ ರೇಣುಕಾಸ್ವಾಮಿ
ಬೆಂಗಳೂರು: ರೇಣುಕಾಸ್ವಾಮಿ ಕ್ರೂರ ಕೊಲೆ ಪ್ರಕರಣದ ಚಾರ್ಜ್‌ಶೀಟ್ ಅನ್ನು ಪೊಲೀಸರು ಕೋರ್ಟ್ಗೆ ತಲುಪಿಸಿದ್ದಾರೆ. 3991 ಪುಟಗಳ ಚಾರ್ಜ್ಶೀಟ್ನಲ್ಲಿ ಹಲವು ಭೀಕರ ಅಂಶಗಳನ್ನು ನಮೂದಿಸಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ದರ್ಶನ್ ಗ್ಯಾಂಗ್‌ನ ಕ್ರೌರ್ಯದ ಅಸಲಿ ಮುಖ ಅನಾವರಣವಾಗಿದೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದ ಆರೋಪಿಗಳು ಅಕ್ಷರಶಃ ರಾಕ್ಷಸರಂತೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿರುವ ಫೋಟೋಗಳನ್ನು ತನಿಖೆಯಲ್ಲಿ ಪೊಲೀಸರು ರಿಟ್ರೀವ್ ಮಾಡಿದ್ದಾರೆ.
ಇದನ್ನೂ ಓದಿ: EXCLUSIVE: ಅಂಗಿ, ಬನಿಯಾನ್ ಹರಿದು ವಿಕೃತಿ.. ಡಿಲೀಟ್ ಆದ ರೇಣುಕಾಸ್ವಾಮಿ ಫೋಟೋ ಪತ್ತೆ
ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡು ಎರಡು ಲಾರಿಗಳ ಮಧ್ಯೆ ಬಿದ್ದಿರೋದು ಒಂದು ಫೋಟೋ ಆದ್ರೆ ಮತ್ತು ಬಿಟ್ಟು ಬಿಡಿ ಅಂತ ಅಂಗಲಾಚುತ್ತಿರುವ ಫೋಟೋಗಳು ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ. ಈ ಫೋಟೋ ತೆಗೆದದ್ದು ಯಾರು? ಈ ಫೋಟೋ ಹಿಂದಿನ ಕಥೆ ಅತ್ಯಂತ ಭಯಾನಕವಾದ ರಕ್ತಚರಿತ್ರೆಯನ್ನು ಬಿಚ್ಚಿಡುತ್ತಿದೆ.
ಫೋಟೋ ತೆಗೆದದ್ದು ಯಾರು?
ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಚೀರಾಟ ಮಾಡುತ್ತಿದ್ದ. ರೇಣುಕಾಸ್ವಾಮಿ ಅಂಗಲಾಚುತ್ತಿದ್ದರೆ ಆರೋಪಿಗಳು ಅಟ್ಟಹಾಸದಲ್ಲಿ ಕೂಗಾಡಿದ್ದಾರೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಗಾರ್ಡ್ ಒಳಗೆ ಬಂದಿದ್ದಾನೆ. ಹಲ್ಲೆ ಮಾಡಿದನ್ನು ಕಣ್ಣಾರೆ ನೋಡಿದ್ದ ಸೆಕ್ಯೂರಿಟಿ ಗಾರ್ಡ್ ತಕ್ಷಣವೇ ಶೆಡ್ ಮಾಲೀಕ ವಿನಯ್‌ಗೆ ಫೋನ್ ಮಾಡಿ ತಿಳಿಸಿದ್ದಾರೆ. ಆಗ ವಿನಯ್, ಅವರು ನಮ್ಮವರೇ ಬಿಡು ಎಂದಿದ್ದಾರಂತೆ.
ಇದನ್ನೂ ಓದಿ: EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಐ ವಿಟ್ನೇಸ್ ಆಗಿದ್ದು, ಆರೋಪಿ ವಿನಯ್‌ಗೆ ಕಾಲ್ ಮಾಡಿ ಅಣ್ಣಾ ಅವರು ತೀರಾ ಜೋರಾಗಿ ಹೊಡೆದಿದ್ದಾರೆ. ಅವನು ಲಾರಿಗಳ ನಡುವೆ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಆಗ ವಿನಯ್ ಅವನ ಫೋಟೋ ಕಳಿಸು ಅಂತ ಹೇಳಿದ್ದಾರೆ. ಆಗ ಸೆಕ್ಯೂರಿಟಿ ಫೋಟೋ ತೆಗೆದು ವಿನಯ್‌ಗೆ ಕಳಿಸಿದ್ದಾರೆ. ವಿನಯ್ ಆ ಫೋಟೋಗಳನ್ನ ನಟ ದರ್ಶನ್‌ಗೆ ತೋರಿಸಿದ್ದು, ಫೋಟೋಸ್ ನೋಡಿದ ಬಳಿಕ ದರ್ಶನ್ ಶೆಡ್‌ಗೆ ಬಂದಿದ್ದಾರೆ.
ಒಂದಲ್ಲ 10ಕ್ಕೂ ಹೆಚ್ಚು ಫೋಟೋ ಡಿಲೀಟ್!
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ನಿತ್ರಾಣವಾಗಿ ಬಿದ್ದಿದ್ದ ಫೋಟೋವನ್ನು ಸೆಕ್ಯೂರಿಟಿ ಗಾರ್ಡ್ ವಿನಯ್‌ಗೆ ಕಳುಹಿಸಿದ್ದಾರೆ. ದರ್ಶನ್‌ಗೆ ಫೋಟೋ ತೋರಿಸಿದ ಬಳಿಕ ವಿನಯ್ ಡಿಲೀಟ್ ಮಾಡಿದ್ದರು. ಮೊಬೈಲ್ ರಿಟ್ರೀವ್ ಮಾಡಿದ್ದ ವೇಳೆ ಅದು ಸಿಕ್ಕಿದೆ. ಡಿಲೀಟ್ ಆದ ಫೋಟೋಗಳನ್ನು FSL ಟೀಮ್ ರಿಟ್ರೀವ್ ಮಾಡಿದೆ. ಎ10 ವಿನಯ್ ಫೋನ್‌ನಲ್ಲಿ ಕೇವಲ ಒಂದಲ್ಲ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್ ಮಾಡಲಾಗಿದೆ. ಅದರಲ್ಲಿ ಸದ್ಯ ಎರಡು ಪ್ರಮುಖ ಫೋಟೋಗಳು ಮಾತ್ರ ಬಿಡುಗಡೆಯಾಗಿದೆ.
ಫೋಟೋಗಳು ಬಿಚ್ಚಿಟ್ಟ ಸತ್ಯವೇನು?
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಶೆಡ್‌ಗೆ ಕರೆತಂದಿದ್ದರು. ಆರೋಪಿಗಳಿಂದ ಆತನಿಗೆ ಕರೆಂಟ್ ಶಾಕ್ ಕೊಟ್ಟು ಪವನ್, ಧನರಾಜ್ & 5 ಮಂದಿಯಿಂದ ಹಲ್ಲೆ ಮಾಡಿದ್ದಾರೆ. ಎಲೆಕ್ಟ್ರಿಕ್ ಮೆಗ್ಗರ್ನಿಂದ ಆತನ ಕೈಗಳಿಗೆ ಬರೆ ಹಾಕಿದ್ದಾರೆ. ಚೆನ್ನಾಗಿ ಹೊಡೆದು ವಾಹನಗಳ ಮಧ್ಯೆ ಬಿಸಾಡಿದ್ದು ಈ ಫೋಟೋದಿಂದ ಗೊತ್ತಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಫೋಟೋ ಮೊದಲು ಕ್ಲಿಕ್ಕಿಸಿದ್ಯಾರು? ಯಾರ ಫೋನ್ನಲ್ಲಿತ್ತು ಆತ ಅಂಗಲಾಚುತ್ತಿರೋ ದೃಶ್ಯ
ಗಾಯಗೊಂಡ ರೇಣುಕಾಸ್ವಾಮಿ ತನ್ನ ಬಿಟ್ಟು ಬಿಡುವಂತೆ ಅಂಗಲಾಚುತ್ತಿದ್ದರು. ತಪ್ಪಾಯ್ತು ನನ್ನ ಬಿಡಿ ಅಂತಾ ಅಳುತ್ತಾ ಬೇಡಿಕೊಂಡಿದ್ದಾರೆ. ಕೈ & ಕಾಲಿಗೆ ಗಾಯಗೊಂಡು ಅಳುತ್ತಿದ್ದ ಮೃತ ರೇಣುಕಾಸ್ವಾಮಿಯ ಮೈ ಮೇಲೆ ಹಾಕಿದ್ದ ಬನಿಯನ್ ಸಹ ಕಿತ್ತು ಹಾಕಲಾಗಿದೆ.
ಆರೋಪಿ ದರ್ಶನ್ ಶೆಡ್‌ಗೆ ಬಂದು ಏಕಾಏಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕೆಳಗೆ ಬಿದ್ದವನನ್ನ ಎಳೆದು ಹೊಡೆದು ಬನಿಯನ್ ಹರಿದುಹಾಕಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ ಬಿಸಾಡಿ ತುಳಿದಿದ್ದಾರೆ ಎನ್ನಲಾಗಿದೆ. ಅಕ್ಷರಶಃ ಮೃಗೀಯ ರೀತಿಯಲ್ಲಿ ರೇಣುಕಾಸ್ವಾಮಿ ಮೇಲೆ ದಾಳಿ ಮಾಡಲಾಗಿದೆ. ಅಂಗಲಾಚಿ ಬೇಡುತ್ತಿದ್ದ ರೇಣುಕಾಸ್ವಾಮಿ ಕೈಗಳಿಗೆ ಕಾಲಿನಿಂದ ತುಳಿದು, ಮುಖಕ್ಕೆ ಶೂ ಕಾಲಿನಿಂದ ಒದ್ದಿದ್ದಾರೆ.
KA-51-AF-0454 ಲಾರಿ ಮುಂದೆ ಮೃತ ರೇಣುಕಾಸ್ವಾಮಿ ಬಿದ್ದಿದ್ದಾರೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದು, ಆತನ ಕೈಗೆ & ಕಾಲಿಗೆ ಕರೆಂಟ್ ಶಾಕ್ ನೀಡಲಾಗಿದೆ. ಅಂದು ರೇಣುಕಾಸ್ವಾಮಿ ಅವರು ಬ್ಲೂ ಜೀನ್ಸ್ & ವೈಟ್ ಹಾಫ್ ಸ್ಲೀವ್ ಬನಿಯನ್ ಹಾಕಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ