newsfirstkannada.com

×

ರೋಹಿತ್​ಗೆ ಪದೇ ಪದೇ ಅವಮಾನ ಮಾಡಿದ ​​ಹಾರ್ದಿಕ್; ಆಕ್ರೋಶ ಹೊರಹಾಕಿದ ಫ್ಯಾನ್ಸ್​​!

Share :

Published March 25, 2024 at 4:42pm

Update March 25, 2024 at 4:43pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​!

    ಗುಜರಾತ್​ ಟೈಟನ್ಸ್​ ವಿರುದ್ಧ ಹೀನಾಯವಾಗಿ ಸೋತ ಮುಂಬೈ

    ಪಂದ್ಯದಲ್ಲಿ ರೋಹಿತ್​ಗೆ ಅವಮಾನ ಮಾಡಿದ ಹಾರ್ದಿಕ್​ ಪಾಂಡ್ಯ

ಇತ್ತೀಚೆಗೆ ನಡೆದ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ಗುಜರಾತ್​ ಟೈಟನ್ಸ್​ ಗೆದ್ದು ಬೀಗಿದೆ. ಗುಜರಾತ್​ ಟೈಟನ್ಸ್​ ನೀಡಿದ 169 ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​​​​ 9 ವಿಕೆಟ್​​ಗೆ 162 ರನ್​ ಗಳಿಸೋ ಮೂಲಕ 6 ರನ್​ನಿಂದ ಸೋತಿದೆ.

ಇನ್ನು, ಈ ಪಂದ್ಯದಲ್ಲಿ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಮುಂಬೈ ಇಂಡಿಯನ್ಸ್​ ಹೊಸ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಭಾರೀ ಅವಮಾನ ಮಾಡಿದ್ದಾರೆ. ಮ್ಯಾಚ್​​ ಉದ್ಧಕ್ಕೂ ಹಾರ್ದಿಕ್ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಸ್ಥಾನವನ್ನು ಪದೇ ಪದೇ ಬದಲಾಯಿಸಿದರು. ಬೇಕಂತಲೇ ರೋಹಿತ್​ ಅವರನ್ನು ಟಾರ್ಗೆಟ್​ ಮಾಡಿ ಓಡಿಸಿದ್ರು ಅನ್ನೋದು ಅಭಿಮಾನಿಗಳು ಮಾತು. ಅದರಲ್ಲೂ ಹಾರ್ದಿಕ್​ ರೋಹಿತ್​ ಅವರನ್ನು ಸಾಮಾನ್ಯ ಆಟಗಾರನಂತೆ ನಡೆಸಿಕೊಂಡಿದ್ದು ಅಭಿಮಾನಿಗಳಿಗೆ ಭಾರೀ ಕೋಪ ತರಿಸಿದೆ.

ಗುಜರಾತ್​ ಟೈಟನ್ಸ್​ ಬ್ಯಾಟಿಂಗ್​ ಮಾಡುವಾಗ ಬೌಲಿಂಗ್​ಗೆ ಮುನ್ನವೇ ರೋಹಿತ್ ಅವರನ್ನು ಮಿಡ್​ ಆನ್​ನಲ್ಲಿ ಫೀಲ್ಡಿಂಗ್​ ಮಾಡಿ ಎಂದರು. ಬಳಿಕ ಬೇಕಂತಲೇ ರೋಹಿತ್‌ಗೆ ಮತ್ತೆ ಲಾಂಗ್-ಆನ್ ಸ್ಥಾನಕ್ಕೆ ಹೋಗಲು ಸೂಚಿಸಿದರು. ರೋಹಿತ್‌ ನಾನು ಹೋಗಬೇಕಾ ಎಂದಿದ್ದಕ್ಕೆ ಹಾರ್ದಿಕ್‌, ಹೌದು ಹೋಗು ಎಂದು ಸನ್ನೆ ಮಾಡಿದ್ರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: VIDEO: ಪಂದ್ಯ ಸೋತ ಬಳಿಕ ಹಾರ್ದಿಕ್​​, ರೋಹಿತ್​​ ಮಧ್ಯೆ ಜೋರು ಜಗಳ; ಅಸಲಿಗೆ ನಡೆದಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ಗೆ ಪದೇ ಪದೇ ಅವಮಾನ ಮಾಡಿದ ​​ಹಾರ್ದಿಕ್; ಆಕ್ರೋಶ ಹೊರಹಾಕಿದ ಫ್ಯಾನ್ಸ್​​!

https://newsfirstlive.com/wp-content/uploads/2024/03/Hardik_Rohit-News1.jpg

Load More