newsfirstkannada.com

ಭಲೇ ಭಲೇ..! ಬಾಂಗ್ಲಾ ವಿರುದ್ಧ ಪಾಂಡ್ಯ ಬೆಂಕಿ ಬ್ಯಾಟಿಂಗ್.. ಸಮಸ್ಯೆಗಳ ಮೆಟ್ಟಿ ನಿಂತು ಸ್ಟ್ರಾಂಗ್ ಕಂಬ್ಯಾಕ್..!

Share :

Published June 2, 2024 at 11:54am

Update June 2, 2024 at 12:37pm

    ಅಭ್ಯಾಸ ಪಂದ್ಯದಲ್ಲಿ ಆಲ್​ರೌಂಡರ್ ಆಟ ಪ್ರದರ್ಶನ

    ಜೂನ್ ಐದರಿಂದ ಟೀಂ ಇಂಡಿಯಾ ವಿಶ್ವಕಪ್ ಜರ್ನಿ

    ನಿನ್ನೆಯ ಪಂದ್ಯದಲ್ಲಿ ಭಾರತಕ್ಕೆ 60 ರನ್​ಗಳ ಜಯ

ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಎಕ್ಸ್​​ಪರಿಮೆಂಟ್​​​​ ವರ್ಕೌಟ್ ಆಗಲಿಲ್ಲ. ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶ ಮತ್ತೆ ಕೈಚೆಲ್ಲಿದರು. ನ್ಯೂಯಾರ್ಕ್​ನ ಡ್ರಾಪಿಂಗ್ ಪಿಚ್​ನಲ್ಲಿ ಪರದಾಡಿದ ಟೀಮ್ ಇಂಡಿಯಾದಿಂದ ನಿರೀಕ್ಷೆಯ ಪ್ರದರ್ಶನ ಬರಲಿಲ್ಲ. ಆದರೆ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹೊಸ ಭರವಸೆ ಹುಟ್ಟಿಸಿದ್ದಾರೆ.

ಇದನ್ನೂ ಓದಿ:ಮಹಿಳೆ ಸತ್ತ ನಂತರ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಭಯ ಹುಟ್ಟಿಸುತ್ತೆ..!

ನಿನ್ನೆಯ ಪಂದ್ಯದಲ್ಲಿ ಉಪನಾಯಕ ಪಾಂಡ್ಯ ಆಲ್​ರೌಂಡರ್ ಆಟವನ್ನಾಡಿದ್ದು, ಸಮಸ್ಯೆಗಳಿಂದ ಹೊರಬಂದಂತೆ ಕಾಣ್ತಿದೆ. 23 ಬಾಲ್​ಗಳನ್ನು ಎದುರಿಸಿದ ಹಾರ್ದಿಕ್, 4 ಸಿಕ್ಸರ್, ಎರಡು ಬೌಂಡರಿ ಬಾರಿಸಿ ಗಮನ ಸೆಳೆದರು. ಒಟ್ಟಾರೆ 174 ಸ್ಟ್ರೈಕ್​ ರೇಟ್​ನಲ್ಲಿ ಆಡಿರುವ ಅವರು 40 ರನ್​ಗಳನ್ನು ಬಾರಿಸಿ ನಾಟೌಟ್ ಆಗಿ ಉಳಿದರು. ಇನ್ನು ಬೌಲಿಂಗ್​ನಲ್ಲೂ ಮಿಂಚಿದ ಪಾಂಡ್ಯ ಮೂರು ಓವರ್ ಮಾಡಿ ಒಂದು ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ:20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!

ಪಾಂಡ್ಯ ಅವರ ನಿನ್ನೆಯ ಪ್ರದರ್ಶನಿಂದ ತಂಡಕ್ಕೆ ಹೊಸ ಶಕ್ತಿ ಬಂದಿದೆ. ಯಾಕೆಂದರೆ ಐಪಿಎಲ್​​ನಲ್ಲಿ ಅವರ ಪ್ರದರ್ಶನ ತುಂಬಾ ಕೆಟ್ಟದಾಗಿತ್ತು. ಅವರನ್ನು ವಿಶ್ವಕಪ್​ಗೆ ಆಯ್ಕೆ ಮಾಡಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರ ವೈಯಕ್ತಿಕ ಜೀವನದ ವಿಚಾರಗಳು ಮುನ್ನಲೆಗೆ ಬಂದಿದ್ದವು. ಅದೆಲ್ಲವನ್ನೂ ಮೆಟ್ಟಿ ನಿಂತಂತೆ ಪಾಂಡ್ಯ ಕಾಣ್ತಿದ್ದು, ತಂಡಕ್ಕೆ ಹೊಸ ಕಳೆ ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್​ಗೆ ಖಡಕ್ ಮೆಸ್ಸೇಜ್..!

ಇನ್ನು ಬಾಂಗ್ಲಾ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ ರೋಹಿತ್ ಪಡೆ. ನಿಗದಿತ 20 ಓವರ್​ನಲ್ಲಿ ಐದು ವಿಕೆಟ್ ಕಳೆದುಕೊಂಡ ಭಾರತ 182 ರನ್​ ಕಲೆ ಹಾಕಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 23, ರಿಷಬ್ ಪಂತ್ 53, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ 40 ರನ್​ಗಳ ಕಾಣಿಕೆ ನೀಡಿದರು. 183 ರನ್​ಗಳ ಗುರಿ ಬೆನ್ನು ಹತ್ತಿದ್ದ ಬಾಂಗ್ಲಾದೇಶ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್​ಗಳಿಸಿ ಸೋಲಿಗೆ ಶರಣಾಯ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಲೇ ಭಲೇ..! ಬಾಂಗ್ಲಾ ವಿರುದ್ಧ ಪಾಂಡ್ಯ ಬೆಂಕಿ ಬ್ಯಾಟಿಂಗ್.. ಸಮಸ್ಯೆಗಳ ಮೆಟ್ಟಿ ನಿಂತು ಸ್ಟ್ರಾಂಗ್ ಕಂಬ್ಯಾಕ್..!

https://newsfirstlive.com/wp-content/uploads/2024/06/PANDYA-6.jpg

Load More