newsfirstkannada.com

20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!

Share :

Published June 2, 2024 at 9:43am

  ಅಮೆರಿಕದಲ್ಲಿ ಟಿ20 ವಿಶ್ವಕಪ್​ ಮಹಾಜಾತ್ರೆ ಶುರವಾಗಿದೆ

  ಈ ಬಾರಿಯ ಟೂರ್ನಿಗೆ ವೆಸ್ಟ್​ ವಿಂಡೀಸ್​​-ಅಮೆರಿಕ ಆತಿಥ್ಯ

  ವಿಶ್ವಕಪ್​ ಗೆಲ್ಲುವ ಫೇವರಿಟ್ ಟೀಮ್ಸ್ ಯಾವುವು..?

ಐಪಿಎಲ್​​​ ನಂತರ ಕ್ರಿಕೆಟ್​​​​ ಫ್ಯಾನ್ಸ್​ಗೆ ಮನರಂಜನೆ ಇರ್ಲಿಲ್ಲ. ಇಂದಿನಿಂದ ಆ ಚಿಂತೆ ದೂರವಾಗಲಿದೆ. ಯಾಕಂದ್ರೆ ಇಂದಿನಿಂದ ಟಿ20 ವಿಶ್ವಕಪ್ ಧಮಾಕ ಶುರುವಾಗಿದೆ.

20 ತಂಡಗಳು! 28 ದಿನಗಳ ಮೆಗಾ ಫೈಟ್
17ನೇ ಐಪಿಎಲ್​​​​​​​​ ಮುಗಿದ್ದೇ ಬಂತು. ಕಳೆದುಕೊಂದು ವಾರದಿಂದ ಟಿ20 ವಿಶ್ವಕಪ್​ನದ್ದೆ ಟಾಕ್​​​. ಇಂದಿನಿಂದ ಆ ಡಿಬೇಟ್​​​ ಇನ್ನಷ್ಟು ಜೋರಾಗಲಿದೆ. ಬಹುನಿರೀಕ್ಷಿತ 2024ನೇ ಟಿ20 ವಿಶ್ವಕಪ್​​​​​​​ ಇಂದಿನಿಂದ ಆರಂಭಗೊಂಡಿದೆ. 28 ದಿನಗಳ ಮೆಗಾಫೈಟ್ ಇದಾಗಿದ್ದು, ಟ್ರೋಫಿಗಾಗಿ 20 ತಂಡಗಳು ಹದ್ದಿನ ಕಣ್ಣಿಟ್ಟಿವೆ. ಟಿ20 ಸಾಮ್ರಾಜ್ಯದ ಅಧಿಪತಿ ಪಟ್ಟಕ್ಕಾಗಿ ನಡೆಯುವ ಈ ವಾರ್​​​​ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದನ್ನೂ ಓದಿ:6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್​ಗೆ ಖಡಕ್ ಮೆಸ್ಸೇಜ್..!

ಟೂರ್ನಿ ಆತಿಥ್ಯವಹಿಸಿಕೊಂಡಿರುವ USA ಮೇಲೆ ಎಲ್ಲರ ಕಣ್ಣು..!
ಈ ಸಲದ ಟಿ20 ವಿಶ್ವಕಪ್​​ ಆತಿಥ್ಯಕ್ಕೆ ವೆಸ್ಟ್​ಇಂಡೀಸ್​ ಜೊತೆ ಅಮೆರಿಕಾ ಕೂಡ ಕೈ ಜೋಡಿಸಿದೆ. ಬೇಸ್​ಬಾಲ್​​​, ಬಾಸ್ಕೆಲ್​​​​​ಬಾಲ್​ಗೆ ಪ್ರಖ್ಯಾತಿ ಗಳಿಸಿದ್ದ ನೆಲದಲ್ಲಿ ಕ್ರಿಕೆಟ್​​ ವಿಶ್ವಕಪ್​ ನಡೆಯುತ್ತಿದೆ.

ಶಾಕ್ ಕೊಡೋಕೆ ಅಸೋಸಿಯೇಟ್ ನೇಷನ್ಸ್ ರೆಡಿ..!
ಒಂದೆಡೆ ಬಲಾಢ್ಯ ತಂಡಗಳು ಟ್ರೋಫಿ ಗೆದ್ದೇ ತೀರಲು ಇನ್ನಿಲ್ಲದ ಸರ್ಕಸ್ ನಡೆಸಿವೆ. ಇನ್ನೊಂದೆಡೆ ಇವುಗಳಿಗೆ ಶಾಕ್ ಕೊಡಲು ಅಸೋಸಿಯೇಟ್​​​​ ನೇಷನ್ಸ್​ ಸಜ್ಜಾಗಿವೆ. ಐರ್ಲೆಂಡ್​​​​​​, ನೆದರ್​ಲೆಂಡ್, ಯುಎಸ್​​ಎ ಹಾಗೂ ಸ್ಕಾಟ್ಲೆಂಡ್​​ ಈಗಾಗಲೇ ಬಲಿಷ್ಟ ತಂಡಗಳಿಗೆ ಶಾಕ್ ನೀಡಿವೆ. ಈ ಬಾರಿಯೂ ಅಚ್ಚರಿ ರಿಸಲ್ಟ್​ ಹೊರಬಂದ್ರೂ ಆಶ್ಚರ್ಯವಿಲ್ಲ.

ಭಾರತ-ಪಾಕ್ ಪಂದ್ಯವೇ T20 ವಿಶ್ವಕಪ್​ನ ಹೈಲೈಟ್ಸ್​..!
28 ದಿನಗಳ ಮಹಾಕದನದಲ್ಲಿ ಬದ್ಧವೈರಿ ಭಾರತ-ಪಾಕ್​​ ಪಂದ್ಯವೇ ಸೆಂಟರ್​ ಆಫ್​ ಅಟ್ರ್ಯಾಕ್ಷನ್​​​. ಜೂನ್​​ 9 ರಂದು ಉಭಯ ತಂಡಗಳು ಮುಖಾಮುಖಿಯಾಗಲಿವೆ. ಹೊಸದಾಗಿ ನಿರ್ಮಾಣವಾದ ನಸ್ಸೌ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಕಾಳಗಕ್ಕಾಗಿ ಕ್ರಿಕೆಟ್​ ಜಗತ್ತು ಕಾದು ಕುಳಿತಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್​ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!

ವಿಶ್ವಕಪ್ ಗೆಲ್ಲೋ ಫೇವರಿಟ್ಸ್​ ಯಾರು..?
ವಿಶ್ವಕಪ್​​​ ದಂಗಲ್​ ಶುರುವಾದ ಬೆನ್ನಲ್ಲೇ ಟ್ರೋಫಿ ಗೆಲ್ಲುವ ಫೇವರಿಟ್​ ತಂಡಗಳ ಬಗ್ಗೆ ಡಿಬೇಟ್​ ನಡೀತಿದೆ. ಕ್ರಿಕೆಟ್​ ಎಕ್ಸ್​ಫರ್ಟ್ಸ್ ಪ್ರಕಾರ ಈ ಬಾರಿ ಟೀಮ್ ಇಂಡಿಯಾ, ಇಂಗ್ಲೆಂಡ್​​​, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್​ಇಂಡೀಸ್​​ ಹಾಗೂ ನ್ಯೂಜಿಲೆಂಡ್​ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ.

ಕೊನೆ ವಿಶ್ವಕಪ್ ಆಡಲಿರೋ ಕ್ರಿಕೆಟ್​​​ ಲೆಜೆಂಡ್ಸ್..!
ಈ ಬಾರಿ ವಿಶ್ವಕಪ್​ ಹಲವು ದಿಗ್ಗಜರಿಗೆ ಕೊನೆ ವಿಶ್ವಕಪ್​​​ ಆಗುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​​, ಶರ್ಮಾ, ಕಿಂಗ್ ಕೊಹ್ಲಿ, ಡೇವಿಡ್​ ವಾರ್ನರ್​​, ಮಿಚೆಲ್ ಸ್ಟಾರ್ಕ್​, ಶಕೀಬ್ ಅಲ್​​ ಹಸನ್ ಹಾಗೂ ಟಿಮ್ ಸೌಥಿಗೆ ಇದು ಬಹುತೇಕ ಕೊನೆ ವಿಶ್ವಕಪ್​ ಆಗಲಿದೆ. ಎನಿವೇ ಬಹುನಿರೀಕ್ಷಿತ ಟಿ20 ವಿಶ್ವಕಪ್​​​​ಗೆ ಚಾಲನೆ ಸಿಕ್ಕಾಗಿದೆ. ಇನ್ನೇನಿದ್ರೂ ಒಂದು ತಿಂಗಳು ಕಾಲ ಕಣ್ಣಿಗೆ ಹಬ್ಬ. ಟ್ವಿಸ್ಟ್​​​ ಆ್ಯಂಡ್​ ಟರ್ನ್​,ಜಿದ್ದಿನ ಹಣಾಹಣಿ ಪಂದ್ಯಗಳನ್ನ ಮಿಸ್​ ಮಾಡದೇ ನೋಡಿ, ಎಂಜಾಯ್ ಮಾಡಿ.

ಇದನ್ನೂ ಓದಿ:ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!

https://newsfirstlive.com/wp-content/uploads/2024/06/T20-World-cup-1.jpg

Load More