ಲೈಫ್ ಅನ್ನ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದೇ ಪ್ರತಿಕ್ಷಣ ಸಂಭ್ರಮಿಸ್ತಾರೆ
ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಅಂತ ಮಾತನಾಡುತ್ತಾರಾ?
ಪಾಂಡ್ಯ ವಿಂಡೀಸ್ ಆಟಗಾರರಂತೆ ಬೌಲಿಂಗ್, ಬ್ಯಾಟಿಂಗ್ 2 ಮಾಡುತ್ತಾರೆ
ವೆಸ್ಟ್ ಇಂಡೀಸ್ ಆಟಗಾರರ ಅಬ್ಬರದ ಆಟ, ಮಸ್ತುಕಟ್ಟಾದ ದೇಹ, ಗಟ್ಟಿಯಾದ ಧ್ವನಿಗೆ ಫಿದಾ ಆಗದೋರಿಲ್ಲ. ಇಂತಹ ವಿಂಡೀಸ್ ಪ್ರಭಾವಕ್ಕೆ ಒಳಗಾದ ಆಟಗಾರನೊಬ್ಬ ಟೀಮ್ ಇಂಡಿಯಾದಲ್ಲಿದ್ದಾನೆ. ಈತ ಹುಟ್ಟಿದ್ದು, ಬೆಳೆದಿದ್ದು ಇಲ್ಲೇನೆ ಆದ್ರೂ ಲೈಫ್ ಸ್ಟೈಲ್ ಮಾತ್ರ ದ್ವೀಪರಾಷ್ಟ್ರದ ಕೆರಿಬಿಯನ್ನರನ್ನ ನೆನಪಿಸುತ್ತೆ. ಅಷ್ಟಕ್ಕೂ ರೋಹಿತ್ ಪಡೆಯಲ್ಲಿರೋ ಆ ವಿಂಡೀಸ್ಮ್ಯಾನ್ ಬೇರಾರೂ ಅಲ್ಲ. ಒನ್ ಅಂಡ್ ಒನ್ಲೀ ಹಾರ್ದಿಕ್ ಪಾಂಡ್ಯ.
ಹೃದಯ ಗುಜರಾತಿ, ಆದರೆ ಆತ್ಮ ಮಾತ್ರ ಕೆರಿಬಿಯನ್..!
T20 ವಿಶ್ವಕಪ್ ವಿನ್ನಿಂಗ್ ಹೀರೋ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಾಕ್ ಆಫ್ ಟೌನ್ ಆಗಿದ್ದಾರೆ. ಈ ಬರೋಡಾ ಬಾಯ್ ಹುಟ್ಟಿದ್ದು, ಬೆಳೆದಿದ್ದು, ಯಶಸ್ಸು ಕಂಡಿದ್ದೆಲ್ಲ ಭಾರತದಲ್ಲೇ. ಹಾರ್ದಿಕ್ ಫ್ಯಾಮಿಲಿಗೂ ವೆಸ್ಟ್ ಇಂಡೀಸ್ಗೂ ಯಾವುದೇ ಕನೆಕ್ಷನ್ ಇಲ್ಲ. ಆದರೂ ಹಾರ್ದಿಕ್ ಭಾರತಕ್ಕಿಂತ ಕೆರಿಬಿಯನ್ ಸಂಸ್ಕೃತಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಇವರ ಹೃದಯ ಗುಜರಾತಿ ಆದ್ರೂ ಆತ್ಮ ಮಾತ್ರ ಕೆರಿಬಿಯನ್. ಅವರ ಲೈಫ್ ಸ್ಟೈಲ್, ಮಾತನಾಡುವ ರೀತಿ ಥೇಟ್ ದ್ವೀಪರಾಷ್ಟ್ರದ ಜನರಿನಂತೆ. ಹಾರ್ದಿಕ್ ಮೇಲೆ ವೆಸ್ಟ್ ಇಂಡೀಸ್ ಸಂಸ್ಕೃತಿಯ ಪ್ರಭಾವ ಎಷ್ಟಿದೆ ಅನ್ನೋದನ್ನ ಒಂದೊಂದಾಗಿ ಇಲ್ಲಿ ಕೊಡಲಾಗಿದೆ.
ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!
ಕಾರಣ ನಂ.1- ಪಾರ್ಟಿ ಪ್ರಿಯ
ಹಾರ್ದಿಕ್ ಪಾಂಡ್ಯ ಬೇಸಿಕಲಿ ಜಾಲಿ ಪರ್ಸನ್. ಪಾರ್ಟಿಯನ್ನ ಹೆಚ್ಚಾಗಿ ಪ್ರೀತಿಸ್ತಾರೆ. ಬಿಡುವು ಸಿಕ್ರೆ ಸಾಕು ಪಾರ್ಟಿ ಮಾಡ್ತಾರೆ. ಡ್ಯಾನ್ಸ್ ಮಾಡಿ ಡ್ರಿಂಕ್ ಸೇವನೆ ಮಾಡ್ತಾ ಮಸ್ತಿ ಮಾಡ್ತಾರೆ. ಬಹುತೇಕ ಆಟಗಾರರೇ ಹೇಳುವಂತೆ ಪಾರ್ಟಿ ಅಂದ್ರೆ ಅವರ ಡೋರ್ ಸದಾ ಓಪನ್ ಆಗಿರುತ್ತಂತೆ. ಇಷ್ಟಪಟ್ಟಂತೆ ಬದುಕಲು ಹಿಂಜರಿಯಲ್ಲ ಹಾಗೂ ಯಾವುದೇ ನಿರ್ಬಂಧಗಳಿಲ್ಲದೇ ಜೀವನವನ್ನ ಎಂಜಾಯ್ ಮಾಡ್ತಾರೆ. ಇದಕ್ಕೆ ಕೆರಿಬಿಯನ್ INFLUENCE ಕಾರಣ ಅಂದ್ರು ತಪ್ಪಲ್ಲ.
ಕಾರಣ ನಂ.2- ಕೆರಿಬಿಯನ್ನರಂತೆ ಕೇಶವಿನ್ಯಾಸ
ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಆಟಗಾರರಂತೆ ಭಿನ್ನ-ವಿಭಿನ್ನ ಹೇರ್ಸ್ಟೈಲ್ಗೆ ಹೆಸರುವಾಸಿ. ಸರಣಿಯೊಂದು ಹೇರ್ಸ್ಟೈಲ್, ಅದಕ್ಕೆ ಬಗೆಬಗೆಯ ಕಲರ್ ಹಾಕಿಸಿಕೊಳ್ತಾರೆ. ಇದಕ್ಕೆ ಕೆರಿಬಿಯನ್ ಟ್ರೆಂಡ್ಸ್, ಕಾರಣ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಕೇಶ ವಿನ್ಯಾಸದ ಕಾರಣಕ್ಕಾಗಿ ಹಾರ್ದಿಕ್ರನ್ನ ಟೀಮ್ ಇಂಡಿಯಾದ ಆಂಡ್ರೆ ರಸೆಲ್ ಅನ್ನೋ ಮಾತಿದೆ.
ಕಾರಣ ನಂ.3- ಬದುಕಿನ ಮಂತ್ರ
ಹಾರ್ದಿಕ್ ಪಾಂಡ್ಯ ಬದುಕಿನ ಮಂತ್ರ ಹಾಗೂ ಕೆರಿಬಿಯನ್ನರ ಬದುಕಿನ ಮಂತ್ರವೂ ಎರಡೂ ಒಂದೇ ಆಗಿದೆ. ಫಿಲಾಸಫಿಗೆ ಹೆಚ್ಚು ಜೋತು ಬೀಳಲ್ಲ. ಲೈಫ್ ಅನ್ನ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದೇ ಪ್ರತಿ ಮೂಮೆಂಟ್ ಅನ್ನು ಸಂಭ್ರಮಿಸ್ತಾರೆ. ಆನ್ ಹಾಗೂ ಆಫ್ ದಿ ಫೀಲ್ಡ್ನಲ್ಲಿ ಎಷ್ಟೇ ಕಷ್ಟವಿದ್ರೂ ಮೊಗದಲ್ಲಿ ಸದಾ ನಗುವು ತುಂಬಿಕೊಂಡಿರುತ್ತೆ.
ಕಾರಣ ನಂ.4- ಗಟ್ಟಿಯಾದ ಧ್ವನಿ
ಇದನ್ನು ಎಲ್ಲರೂ ಒಪ್ಪದಿರಬಹುದು. ಆದರೆ ಹಾರ್ದಿಕ್ ಪಾಂಡ್ಯ ಇಂಗ್ಲೀಷ್ ಉಚ್ಛಾರಣೆ, ವೆಸ್ಟ್ಇಂಡೀಸ್ ಆಟಗಾರರನ್ನೂ ಹೋಲುತ್ತೆ. ಅವರ ಗಟ್ಟಿಯಾದ ಧ್ವನಿ ಪ್ರತಿಯೊಬ್ಬರನ್ನ ಆಕರ್ಷಿಸುವಂತೆ ಮಾಡುತ್ತೆ.
ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?
ಕಾರಣ ನಂ.5- ಆಟದ ವೈಖರಿ
ಹಾರ್ದಿಕ್ ಹಾಗೂ ವೆಸ್ಟ್ ಇಂಡೀಸ್ ಆಟಗಾರರ ಆಟದ ವೈಖರಿಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ಇದುವರೆಗೆ ಪಾಂಡ್ಯಗೆ ಬದಲಿ ಆಟಗಾರನಾಗಿ ಭಾರತಕ್ಕೆ ಪೇಸ್ ಆಲ್ರೌಂಡರ್ ಸಿಕ್ಕಿಲ್ಲ. ಇಂತಹ ಆಟಗಾರರು ಸಿಗೋದು ಬಹಳ ವಿರಳ. ವಿಂಡೀಸ್ ತಂಡದಲ್ಲಿ ಸತತವಾಗಿ ಬೌಲಿಂಗ್ ಮಾಡೋದ್ರ ಜೊತೆ ಬ್ಯಾಟಿಂಗ್ ಮಾಡುವ ಆಟಗಾರರು ಇರುತ್ತಾರೆ. ಪಾಂಡ್ಯ ಕೂಡ ಥೇಟ್ ಅದೇ ಥರಾ.
ಇದನ್ನೂ ಓದಿ: ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.. ಧಾರಾಕಾರ ಮಳೆ, ಪ್ರವಾಸಿಗರಿಗೆ ಎಚ್ಚರಿಕೆ..!
ಈಗ ನಿಮಗೆ ಅರ್ಥ ಆಗಿರಬೇಕು ಅಲ್ವಾ ? ನಾವ್ಯಾಕೆ ಆರಂಭದಲ್ಲಿ ಇಂಡಿಯನ್ ಹಾರ್ದಿಕ್ ಅಲ್ಲ, ಕರಿಬಿಯನ್ ಹಾರ್ದಿಕ್ ಎಂದು ಹೇಳಿದ್ವಿ ಅಂತ. ಏನೇ ಹೇಳಿ ಹಾರ್ದಿಕ್ ಓರ್ವ ಅಪ್ಪಟ ಭಾರತೀಯ. ಅವರ ಲೈಫ್ ಸ್ಟೈಲ್ ಮೇಲೆ ಯಾವ ದೇಶದ ಸಂಸ್ಕೃತಿ ಆದ್ರೂ ಪ್ರಭಾವ ಬೀರಲಿ. ಅದು ಅವರ ವೈಯಕ್ತಿಕ ವಿಚಾರ. ಭಾರತ ತಂಡದ ಪ್ರತಿನಿಧಿಯಾಗಿ ತಂಡದ ಗೆಲುವಿಗೆ ಕಾಣಿಕೆ ನೀಡ್ತಿರೋದು ಹೆಮ್ಮೆಯ ವಿಚಾರವೇ.
ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ