Advertisment

‘ಪ್ರೀತಿ ಎಂದಿಗೂ ವಿಫಲವಾಗಲ್ಲ’.. ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಬ್ರೇಕ್‌ ಅಪ್‌ಗೆ ಹೊಸ ಟ್ವಿಸ್ಟ್‌!

author-image
Bheemappa
Updated On
‘ಪ್ರೀತಿ ಎಂದಿಗೂ ವಿಫಲವಾಗಲ್ಲ’.. ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಬ್ರೇಕ್‌ ಅಪ್‌ಗೆ ಹೊಸ ಟ್ವಿಸ್ಟ್‌!
Advertisment
  • ಮಗನ ಜೊತೆ ಟೂರ್ ಮಾಡುತ್ತಿರುವ ನತಾಶಾ ಸ್ಟಾಂಕೋವಿಕ್
  • ದೂರವಾದರೂ ಹಾರ್ದಿಕ್ ಪಾಂಡ್ಯ ನೆನಪಲ್ಲಿರೋ ಮಾಜಿ ಪತ್ನಿ
  • ಪ್ರೀತಿ ಯಾವಾಗಲೂ ತಪ್ಪು ಕಲ್ಪನೆಗಳಿಂದ ಕೂಡಿರಲ್ಲ- ನತಾಶಾ

ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ದಾಂಪತ್ಯ ಜೀವನದಿಂದ ಬೇರೆ ಬೇರೆಯಾಗಿದ್ದಾರೆ. ಈ ಇಬ್ಬರು ಬೇರೆ ಬೇರೆಯಾದರೂ ಪ್ರೀತಿ ಮಾತ್ರ ಹಾಗೇ ಇದೆಯಾ ಎನ್ನುವ ಪ್ರಶ್ನೆ ಮೂಡಿದೆ. ಪಾಂಡ್ಯರಿಂದ ಬೇರೆಯಾದರೂ ಮಾಜಿ ಪತ್ನಿ ನತಾಶಾ ಪ್ರೀತಿ ಈಗಲೂ ಪ್ರೀತಿ ಹಾಗೂ ಭಾವನೆಗಳನ್ನ ಹಂಚಿಕೊಳ್ಳುತ್ತಿದ್ದಾರೆ.

Advertisment

ಇದನ್ನೂ ಓದಿ:ಕನ್ನಡಿಗ KL ರಾಹುಲ್​ಗೆ ಬಿಗ್ ಶಾಕ್​.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?

ತಮ್ಮ ಇನ್​ಸ್ಟಾ ಸ್ಟೇಟಸ್​ ಶೇರ್ ಮಾಡಿರುವ ಪಾಂಡ್ಯ ಮಾಜಿ ಪತ್ನಿ ನತಾಶಾ ಅವರು ನಿಜವಾದ ಪ್ರೀತಿ ಸ್ವಾರ್ಥ ಅಲ್ಲ, ಅದು ಯಾವತ್ತೂ ವಿಫಲವಾಗುವುದಿಲ್ಲ. ಪ್ರೀತಿ ಯಾವಾಗಲೂ ತಪ್ಪು ಕಲ್ಪನೆಗಳಿಂದ ಕೂಡಿರಲ್ಲ ಎಂದು ಹೇಳಿದ್ದಾರೆ. ಹೌದು ನತಾಶಾ ಅವರು ಹಾರ್ದಿಕ್ ಪಾಂಡ್ಯರಿಂದ ಬೇರೆಯಾದ ಮೇಲೆ ಪ್ರೀತಿ, ಭಾವನೆಗಳಿಗೆ ಸಂಬಂಧಿಸಿದಂತ ಹೆಚ್ಚು ಪೋಸ್ಟ್​ಗಳನ್ನು ಶೇರ್ ಮಾಡುತ್ತಿದ್ದಾರೆ. ಅದರಲ್ಲಿ ಇದು ಒಂದು ಆಗಿದೆ.

ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?

Advertisment

publive-image

ನತಾಶಾ ಶೇರ್ ಮಾಡಿರುವ ಇನ್​ಸ್ಟಾ ಸ್ಟೇಟಸ್​ನಲ್ಲಿ, ಪ್ರೀತಿ ತಾಳ್ಮೆ, ದಯೆಯಿಂದ ಕೂಡಿದ್ದು ಅದು ಅಸೂಯೆ ಪಡಲ್ಲ. ಪ್ರೀತಿ ಯಾವಾಗಲೂ ಹೆಮ್ಮೆ ಪಡುವುದಿಲ್ಲ, ಯಾರನ್ನೂ ಅವಮಾನಿಸುವುದಿಲ್ಲ. ಸ್ವಾರ್ಥಿಯಂತೂ ಅಲ್ಲವೇ ಅಲ್ಲ. ಪ್ರೀತಿ ಸುಲಭವಾಗಿ ಕೋಪಿಸಿಕೊಳ್ಳಲ್ಲ, ಯಾವತ್ತೂ ತಪ್ಪುಗಳ ಬಗ್ಗೆ ದಾಖಲೆಗಳನ್ನು ಇಡಲ್ಲ. ಕೆಡುಕು ಇದ್ದರೆ ಪ್ರೀತಿ ಸಂತೋಷಪಡುವುದಿಲ್ಲ. ಬದಲಿಗೆ ಅದು ನಮ್ಮನ್ನು ನಂಬಿ ರಕ್ಷಣೆ ಮಾಡುತ್ತಿರುತ್ತದೆ. ಜೀವನ, ಬದುಕಿಗೆ ದೊಡ್ಡ ಭರವಸೆ ಕೊಟ್ಟು ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯರಿಂದ ತಾವು ಬೇರೆ ಆಗುತ್ತಿದ್ದಾಗ ಇನ್​ಸ್ಟಾದಲ್ಲಿ ಮಾಹಿತಿ ಶೇರ್ ಮಾಡಿ ತಿಳಿಸಿದ್ದರು. 4 ವರ್ಷಗಳ ಒಟ್ಟಿಗೆ ಇದ್ದು ಒಂದಾಗಿ ಇರಲು ಪ್ರಯತ್ನಿಸಿದೇವು. ಆದರೆ ಆಗಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಹಾಗೂ ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಆದರೆ ಅಂತಿಮ ನಿರ್ಧಾರವಾಗಿ ಬೇರೆಯಾಗುತ್ತಿದ್ದೇವೆ ಎಂದು ತಿಳಿಸಿದ್ದರು. ಸದ್ಯ ನತಾಶಾ ಅವರು ವಿದೇಶದಲ್ಲಿದ್ದು ಮಗ ಅಗಸ್ತ್ಯ ಜೊತೆ ಟೂರ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment