Advertisment

ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?

author-image
Ganesh
Updated On
ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?
Advertisment
  • ಹಾರ್ದಿಕ್ ಪಾಂಡ್ಯ-ನತಾಶಾ ಡಿವೋರ್ಸ್​ ವದಂತಿ ಜೋರಾಗಿದೆ
  • ವದಂತಿ ಜೋರಾಗಿದ್ದರೂ ಇದುವರೆಗೆ ಯಾರೂ ಸ್ಪಷ್ಟನೆ ನೀಡಿಲ್ಲ
  • ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಮಾಡಿದ ನತಾಶಾ

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಡಿವೋರ್ಸ್​ ಸಾಧ್ಯತೆಯ ವದಂತಿ ಜೋರಾಗಿದೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ವೈರಲ್ ಬೆನ್ನಲ್ಲೇ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.

Advertisment

ಈ ಬೆನ್ನಲ್ಲೇ ಪಾಂಡ್ಯ ಪತ್ನಿ ನತಾಶಾ ನಿಗೂಢ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸರ್ಬಿಯನ್ ಮಾಡೆಲ್ ನತಾಶಾ ಅವರು.. ಜೀಸಸ್ ಮತ್ತು ಕುರಿ ಮರಿ ಒಳಗೊಂಡ ಫೋಟೋವನ್ನು ಶೇರ್ ಮಾಡಿದ್ದಾರೆ. ಇವರ ಈ ರಹಸ್ಯ ಪೋಸ್ಟ್ ನೋಡಿದ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಊಹಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಒಬ್ಬರ ಎಂಟ್ರಿಯಿಂದ ಎಲ್ಲವೂ ಬದಲಾಯ್ತು.. KKRಗೆ ದುಬಾರಿ ಆಗಿದ್ದ ಸ್ಟಾರ್ಕ್​​ ಕಂಬ್ಯಾಕ್ ಮಾಡಿದ್ದು ಈಕೆ ಬಂದ್ಮೇಲೆ..!

publive-image

ಕೆಲವು ತಿಂಗಳುಗಳಿಂದ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. ಇದನ್ನು ಗಮನಿಸಿದ ನೆಟ್ಟಿಗರು ಇಬ್ಬರ ಪ್ರತ್ಯೇಕತೆ ಬಗ್ಗೆ ಊಹಿಸಿದ್ದಾರೆ. ಹಾರ್ದಿಕ್ ಆಡುತ್ತಿದ್ದ ಐಪಿಎಲ್ ಪಂದ್ಯಗಳಿಗೆ ನತಾಸಾ ಬರಲಿಲ್ಲ. ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ.

Advertisment

Natasa's cryptic post

ಡಿವೋರ್ಸ್ ವದಂತಿ ಬೆನ್ನಲ್ಲೇ ಮೇ 25 ರಂದು ನತಾಸಾ ಕಾಣಿಸಿಕೊಂಡರು. ಪಾಪರಾಜಿಗಳಿಗೆ ಪೋಸ್ ನೀಡಿದರು. ವಿಚ್ಛೇದನದ ವದಂತಿ ಬಗ್ಗೆ ಕೇಳಿದಾಗ, ಮುಗುಳ್ನಕ್ಕು, ‘ಧನ್ಯವಾದಗಳು’ ಎಂದು ಹೇಳಿದರು. ವಿಚಾರ ವೈರಲ್ ಆಗುತ್ತಿದ್ದರೂ ದಂಪತಿ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ. ದಂಪತಿ ತಮ್ಮ ಮಗ ಅಗಸ್ತ್ಯ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಿದ್ದಾರೆ.

ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment