ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪತ್ನಿ ಟ್ರೋಲ್
ಕೆಟ್ಟದಾಗಿ ಕಮೆಂಟ್ ಮಾಡಿ ಅವಮಾನಿಸ್ತಿರುವ ಟ್ರೋಲಿಗರು
ಆಡಿದ ಎರಡೂ ಪಂದ್ಯದಲ್ಲೂ ಸೋತಿರುವ ಮುಂಬೈ ಇಂಡಿಯನ್ಸ್
ಐಪಿಎಲ್ ಜಾತ್ರೆಯಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೆಲವು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ. ರೋಹಿತ್ ಶರ್ಮಾ ಅಭಿಮಾನಿಗಳ ಅಸಮಾಧಾನ ಒಂದು ಕಡೆಯಾದರೆ, ಅಪ್ಪಟ ಕ್ರಿಕೆಟ್ ಅಭಿಮಾನಿಗಳು ಕೂಡ ಹಾರ್ದಿಕ್ ಪಾಂಡ್ಯರ ವಿರುದ್ಧ ಟೀಕೆಗಳನ್ನು ಮಾಡ್ತಿದ್ದಾರೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯರ ಪತ್ನಿ ನಟಾಶಾ ಸ್ಟಾಂಕೋವಿಕ್ (Natasa Stankovic) ಅವರನ್ನೂ ಟಾರ್ಗೆಟ್ ಮಾಡಲಾಗ್ತಿದೆ. ಇತ್ತೀಚೆಗೆ ಅವರು ಶೇರ್ ಮಾಡಿರುವ ಸೋಶಿಯಲ್ ಮಿಡಿಯಾ ಪೋಸ್ಟ್ಗಳಿಗೆ ಕಟ್ಟದಾಗಿ ಕಮೆಂಟ್ ಮಾಡ್ತಿದ್ದಾರೆ.
ಇಷ್ಟಕ್ಕೆಲ್ಲ ಕಾರಣ ಏನು..?
ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದಿದ್ದ ಹಾರ್ದಿಕ್ ಪಾಂಡ್ಯ, ಕಳೆದ ಎರಡು ಆವೃತ್ತಿಯಲ್ಲಿ ಗುಜರಾತ್ ತಂಡದ ಕ್ಯಾಪ್ಟನ್ ಆಗಿ ಮುನ್ನಡೆಸಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಮತ್ತೆ ಖರೀದಿಸಿ ಕ್ಯಾಪ್ಟನ್ಸಿ ಕೊಟ್ಟಿದೆ. ಇದು ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮಾ ಅವರ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಈ ಬಾರಿಯ ಮೊದಲ ಐಪಿಎಲ್ ಪಂದ್ಯದ ವೇಳೆ, ಮೈದಾನದಲ್ಲಿ ರೋಹಿತ್ ಶರ್ಮಾ ಅವರಿಗೆ ಹಾರ್ದಿಕ್ ಅವಮಾನ ಮಾಡಿದ್ದಾರೆ ಎನ್ನಲಾಗಿರುವ ವಿಡಿಯೋಗಳು ವೈರಲ್ ಆಗಿದ್ದವು.
ಇದನ್ನೂ ಓದಿ: ಕಾರ್ತಿಕ್ಗಿರೋ ಹಸಿವು, ಹಂಬಲಕ್ಕೆ ಸಲಾಂ ಹೇಳಲೇಬೇಕು; ಅವರ ತಂದೆ ಬಿಚ್ಚಿಟ್ರು DK ಸಕ್ಸಸ್ ಹಿಂದಿನ ಸತ್ಯ
ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಎಲ್ಲಾ ಟೀಕೆಗಳು ಬಿಸಿಯಾಗಿರುವಾಗಲೇ ಮೊನ್ನೆ ನಡೆದ ಎರಡನೇ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತಿದೆ. ಅದರಲ್ಲೂ ಹೈದ್ರಾಬಾದ್ ತಂಡ 277 ರನ್ಗಳನ್ನು ಬಾರಿಸಿ ಮುಂಬೈ ಇಂಡಿಯನ್ಸ್ಗೆ ಬಿಗ್ ಟಾರ್ಗೆಟ್ ನೀಡಿತ್ತು. ಹೈದ್ರಾಬಾದ್ ತಂಡ ಇಷ್ಟೊಂದು ರನ್ ಹೊಡೆಯಲು ಕಾರಣ, ಮುಂಬೈ ಇಂಡಿಯನ್ಸ್ನ ಕೆಟ್ಟ ಕ್ಯಾಪ್ಟನ್ಸಿ ಅನ್ನೋದು ಕೆಲವು ಅಸಮಾಧಾನಿ ಅಭಿಮಾನಿಗಳ ವಾದವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್