newsfirstkannada.com

×

ದಿನಕ್ಕೆ 24, ತಿಂಗಳಿಗೆ 720 ಮೊಟ್ಟೆ ತಿಂದ ಹಾರ್ವರ್ಡ್​ ಮೆಡಿಕಲ್ ವಿದ್ಯಾರ್ಥಿ! ಆಮೇಲೆ ಏನಾಯ್ತು?

Share :

Published September 26, 2024 at 6:29pm

Update September 26, 2024 at 6:36pm

    720 ಮೊಟ್ಟೆ ಒಂದೇ ತಿಂಗಳಲ್ಲಿ ಗುಳುಂ ಮಾಡಿದ ಹಾರ್ವರ್ಡ್​ ಮೆಡಿಕಲ್ ವಿದ್ಯಾರ್ಥಿ

    ಅಧ್ಯಯನಕ್ಕೆಂದು ಸ್ವಯಂ ತನ್ನನ್ನು ತಾನೇ ಪ್ರಯೋಗಕ್ಕೆ ಒಳಡಿಸಿಕೊಂಡ ಸ್ಟೂಡೆಂಟ್​

    ದಿನಕ್ಕೆ 24 ಮೊಟ್ಟೆ ತಿಂದ ನಿಕ್ ನೊರವಿಟ್ಜ್​ ಸಾಬೀತುಪಡಿಸಿದ ವಿಷಯ ಯಾವುದು?

ಹಾರ್ವರ್ಡ್​ ಮೆಡಿಕಲ್ ಕಾಲೇಜ್​ನ ವಿದ್ಯಾರ್ಥಿ ಡಾ ನಿಕ್ ನೊರವಿಟ್ಜ್​ ದೊಡ್ಡದೊಂದು ಸಾಹಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ. ಒಂದು ತಿಂಗಳಿಗೆ 700ಕ್ಕೂ ಅಧಿಕ ಮೊಟ್ಟೆಯನ್ನು ತಿನ್ನುವ ಮೂಲಕ ಹೊಸ ಅಧ್ಯಯನವೊಂದನ್ನು ತೆರೆದಿಟ್ಟಿದ್ದಾರೆ. ಮೊಟ್ಟೆಯಿಂದ ದೇಹದಲ್ಲಿನ ಕೊಲೆಸ್ಟ್ರಾಲ್​ ಲೆವಲ್ ಹೇಗೆ ಕಡಿಮೆಯಾಗುತ್ತೆ ಅನ್ನೋನ್ನ ತಿಳಿಸಲು ಅವರು ಈ ಒಂದು ಪ್ರಯೋಗವನ್ನು ಮಾಡಿದ್ದಾರೆ.

ಡಾ.ನೊರವಿಟ್ಜ್​ ತಮ್ಮ ಈ ಒಂದು ತಿಂಗಳ ಜರ್ನಿಯನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ತಿಂಗಳಲ್ಲಿ 720 ಮೊಟ್ಟೆ ತಿಂದಿರುವ ಇವರು, ಮೊಟ್ಟೆ ದೇಹದಲ್ಲಿರುವ ಕೊಲೆಸ್ಟ್ರಾಲ್ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ತಿಳಿಯಲು ಸ್ವಯಂ ತಮ್ಮನ್ನೇ ತಾವು ಪ್ರಯೋಗಕ್ಕೆ ಒಳಪಡಿಸಿಕೊಂಡಿದ್ದಾರೆ. ಈ ಒಂದು ಅಧ್ಯಯನದಿಂದಾಗಿ ಮೊಟ್ಟೆಯನ್ನು ಹೆಚ್ಚು ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್​ (Bad cholesterol) ಅಂಶ ಶೇಕಡಾ 20ರಷ್ಟು ಕಡಿಮೆಯಾಗಿದೆ ಎಂಬುದು ಕೂಡ ತಿಳಿದು ಬಂದಿದೆ.

ಇದನ್ನೂ ಓದಿ: Myopia; ಕೋವಿಡ್ ಲಾಕ್​ ಡೌನ್​ ಬಳಿಕ ಮಕ್ಕಳಲ್ಲಿ ಸೃಷ್ಟಿಯಾಗಿದೆ ಹೊಸ ಸಮಸ್ಯೆ, ಏನದು?

ಈ ಒಂದು ಪರೀಕ್ಷೆಯಲ್ಲಿ ನೊರವಿಟ್ಜ್ ಅವರ ಎಲ್​ಎಲ್​ಡಿ (low-density lipoprotein)ಇಳಿಕೆ ಕಂಡು ಬಂದಿದ್ದು. ಇದರ ಜೊತೆಗೆ ಬ್ಯಾಡ್ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿರುವುದು ಕಂಡು ಬಂದಿದೆ. ಈ ಪ್ರಯೋಗಕ್ಕೆ ಒಳಗಾಗುವ ಮುನ್ನ ನೊರವಿಟ್ಜ್​ ಅವರ ಎಲ್​ಎಲ್​ಡಿ ಸುಮಾರು 90 ಎಂಜಿಯಷ್ಟಿತ್ತು. ನಿತ್ಯ 24 ಮೊಟ್ಟೆ ತಿನ್ನಲು ಇವರು ಆರಂಭಿಸಿದ ಮೇಲೆ ಮೊದಲ ವಾರದಲ್ಲಿ ಎಲ್​ಎಲ್​ಡಿ ಪ್ರಮಾಣ 2 ಪರ್ಸೆಂಟ್​ನಷ್ಟು ಇಳಿಕೆ ಕಂಡಿತ್ತು. ಒಂದು ತಿಂಗಳ ಬಳಿಕ ಅದು ಇಳಿಕೆಯಾದ ಪ್ರಮಾಣ ಶೇಕಡಾ 18ರಷ್ಟು ಎಂದು ನೊರವಿಟ್ಜ್​ ಹೇಳಿದ್ದಾರೆ.

ಇದನ್ನೂ ಓದಿ: ಹೆಂಡತಿ ಬಿಕನಿಯಲ್ಲಿ ಓಡಾಡಲಿ ಅಂತ ಈ ದುಬೈ ಗಂಡ ಮಾಡಿದ್ದೇನು ಅಂತ ಕೇಳಿದ್ರೆ ಶಾಕ್ ಆಗ್ತಿರಾ!

ನುರಿತ ಆರೋಗ್ಯ ತಜ್ಞರು ಹೇಳುವ ಪ್ರಕಾರ ನಿತ್ಯ ಎರಡು ಮೊಟ್ಟೆ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸುವುದಿಲ್ಲ. ವಾರಕ್ಕೆ 6 ರಿಂದ 12 ಮೊಟ್ಟೆಗಳ ಸೇವನೆಯಿಂದಲೂ ಕೂಡ ಏನೂ ಸಮಸ್ಯೆ ಆಗೋದಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ ಅತಿಹೆಚ್ಚು ಮೊಟ್ಟೆ ತಿನ್ನುವುದರಿಂದ ಡಯಾಬಿಟಿಸ್​ನಂತ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು ಇರುತ್ತದೆ ಎಂಬ ವಾದವೂ ಕೂಡ ಇದೆ.

ಒಟ್ಟಿನಲ್ಲಿ ನಿಕ್ ನೊರವಿಟ್ಜ್​ ಮಾಡಿರುವ ಈ ಸಾಹಸ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿದೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನೊರವಿಟ್ಜ್​, ಮೊಟ್ಟೆ ಸೇವನೆಯಿಂದಾದ ಪ್ರಯೋಜನಗಳನ್ನು ತೆರೆದಿಟ್ಟಿದ್ದಾರೆ. ಅದು ಈಗ ಎಲ್ಲಾ ಕಡೆ ಹರಿದಾಡುತ್ತಿದ್ದು. ತಿಂಗಳಿಗೆ 720 ಮೊಟ್ಟೆ ಅಂದ್ರೆ ದಿನಕ್ಕೆ 24 ಮೊಟ್ಟೆ, ಇಷ್ಟು ತಿಂದು ಆರೋಗ್ಯವಾಗಿರಲು ಸಾಧ್ಯವಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿನಕ್ಕೆ 24, ತಿಂಗಳಿಗೆ 720 ಮೊಟ್ಟೆ ತಿಂದ ಹಾರ್ವರ್ಡ್​ ಮೆಡಿಕಲ್ ವಿದ್ಯಾರ್ಥಿ! ಆಮೇಲೆ ಏನಾಯ್ತು?

https://newsfirstlive.com/wp-content/uploads/2024/09/nick-norwitz-700-Eggs.jpg

Load More