/newsfirstlive-kannada/media/post_attachments/wp-content/uploads/2024/10/hasanambe-1.jpg)
ಆ ತಾಯಿಯ ದರ್ಶನ ವರುಷಕ್ಕೊಮ್ಮೆ ಮಾತ್ರ. ಒಮ್ಮೆ ಹಚ್ಚಿಟ್ಟ ಮಹಾದೀಪ ವರ್ಷಪೂರ್ತಿಯೂ ಉರಿಯುತ್ತೆ. ಮುಡಿಸಿದ ಹೂಗಳು ಬಾಡಲ್ಲ. ಇಂತಹ ಪವಾಡಗಳನ್ನ ಸೃಷ್ಟಿಸಿ ಬೇಡಿದ ವರವನ್ನ ನೀಡುವ ಹಾಸನಾಂಬೆಯ ದರ್ಶನ ಇವತ್ತಿನಿಂದ ಆರಂಭವಾಗಲಿದೆ. ಲಕ್ಷಾಂತರ ಭಕ್ತರು ಹರಿದು ಬರಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ. ವರ್ಷಪೂರ್ತಿ ಉರಿಯುವ ದೀಪದ ಮಹಿಮೆ. ಮುಡಿಸಿದ ಹೂಗಳು ವರ್ಷವಾದ್ರೂ ಬಾಡೋದಿಲ್ಲ, ನೈವೇದ್ಯ ಕೂಡ ಹಾಳಾಗಲ್ಲ.. ಇಂತಹ ಹಲವು ಮಹಿಮೆಗಳನ್ನ ಹೊಂದಿರುವ ಹಾಸನದ ಅಧಿದೇವತೆ, ಹಲವು ಪವಾಡಗಳನ್ನ ಸೃಷ್ಟಿಸಿ ಭಕ್ತರನ್ನ ತನ್ನೆಡೆಗೆ ಸೆಳೆದು, ಬೇಡಿದ್ದನ್ನ ನೀಡುವ ಹಾಸನಾಂಬೆ.
/newsfirstlive-kannada/media/post_attachments/wp-content/uploads/2024/10/HSN.jpg)
ಹಾಸನದಲ್ಲಿ ನೆಲೆಸಿರೋ ಈ ಶಕ್ತಿದೇವತೆಯ ದೇವಸ್ಥಾನದ ಗರ್ಭಗುಡಿ ದ್ವಾರ ಬಾಗಿಲು ಇವತ್ತಿನಿಂದ ತೆರೆಯಲಿದೆ. ಇಂದಿನಿಂದ ನವೆಂಬರ್ 3ರವರೆಗೆ ದೇವಸ್ಥಾನ ಓಪನ್ ಇರಲಿದೆ. ಜಿಲ್ಲಾಡಳಿತ ಮತ್ತು ಅರ್ಚಕರ ಸಮ್ಮುಖದಲ್ಲಿ ಮಧ್ಯಾಹ್ನ 12.30ಕ್ಕೆ ಬಾಗಿಲನ್ನ ತೆಗೆಯಲಾಗುತ್ತದೆ. ಒಟ್ಟು 9 ದಿನಗಳ ಕಾಲ ಈ ಬಾರಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡುತ್ತಿದ್ದು, ಮೊದಲನೆಯ ಮತ್ತು ಕಡೆಯ 2 ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ. ಇನ್ನೂ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಉದ್ದದ ಸಾಲುಗಳನ್ನ ನಿರ್ಮಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ಮಾಡಿಕೊಂಡಿದೆ. ಅಲ್ಲದೇ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಪ್ರತ್ಯೇಕ ಮಳಿಗೆಗಳನ್ನ ಮಾಡಿದೆ.
/newsfirstlive-kannada/media/post_attachments/wp-content/uploads/2024/10/HSN-1.jpg)
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಎದುರಾಳಿ ಯಾರು? ಜೆಡಿಎಸ್ ಲೆಕ್ಕಾಚಾರ ಏನು? ನಾಲ್ವರಲ್ಲಿ ಯಾರಿಗೆ ಟಿಕೆಟ್?
ಭಕ್ತಿಯಿಂದ ಬೇಡಿದ ವರವನ್ನ ಕರುಣಿಸುವ ಶಕ್ತಿದೇವತೆ ಹಾಸನಾಂಬೆ ದರ್ಶನ ಪಡೆಯಲು ಬೇರೆ ಜಿಲ್ಲೆಗಳಿಂದ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಆಗಮಿಸುತ್ತಾರೆ. ಪ್ರತಿ ವರ್ಷ ಅಶ್ವೀಜ ಮಾಸದ ಮೊದಲನೇ ಗುರುವಾರ ತಾಯಿಯ ಬಾಗಿಲು ತೆರೆಯಲಾಗುತ್ತದೆ. ದೀಪಾವಳಿಯ ಮರುದಿನ ಬಾಗಿಲನ್ನ ಮುಚ್ಚಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ದರುಶನ ಭಾಗ್ಯ ನೀಡುವ ತಾಯಿಯ ಮಹಿಮೆಯೂ ಅಪಾರವಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ತನ್ನ ಅಪಾರ ಕೀರ್ತಿ, ಮಹಿಮೆ, ಪವಾಡಗಳಿಂದ ಬೇಡಿದ್ದನ್ನ ನೀಡುವ ಮಹಾತಾಯಿ ದರ್ಶನಕ್ಕೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಸದ್ಯ ತಾಯಿಯ ಎಲ್ಲಾ ಆಭರಣಗಳನ್ನ ಜಿಲ್ಲಾ ಖಜಾನೆಯಿಂದ ತರಲಾಗಿದೆ. ರಾತ್ರಿಯಿಂದಲೇ ತಾಯಿಗೆ ವಿಶೇಷ ಪೂಜಾ ಕೈಂಕರ್ಯಗಳಿಗೆ ಬೇಕಾದ ಎಲ್ಲ ವ್ಯವ್ಯಸ್ಥೆನ್ನ ಮಾಡಿಕೊಳ್ಳಲಾಗಿದೆ. ಒಟ್ಟಾರೆ, ಹಾಸನದ ಶಕ್ತಿ ದೇವತೆ ಇವತ್ತಿನಿಂದ ದರ್ಶನ ನೀಡಲಿದ್ದಾಳೆ. ಭಕ್ತರು ದೇವಿಯ ಕೃಪೆಗೆ ಪಾತ್ರರಾಗಾಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us