newsfirstkannada.com

ಕಾಂಗ್ರೆಸ್​ಗೆ ಅಸ್ತ್ರವಾದ ಪ್ರಜ್ವಲ್​.. ಬಿಜೆಪಿಗೆ ಕಷ್ಟ ಕಷ್ಟ.. ಹೀಗೂ ತಿರುವು ಪಡೆದುಕೊಳ್ತಿದೆಯಾ ಪೆನ್‌ಡ್ರೈವ್ ಪ್ರಕರಣ?

Share :

Published May 6, 2024 at 7:08am

  ಪೆನ್‌ಡ್ರೈವ್ ಪ್ರಕರಣ ರಾಜಕೀಯ ಕೆಸರರಚಾಟಕ್ಕೆ ಕಾರಣ

  ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿ ರೇವಣ್ಣ

  ಪ್ರಜ್ವಲ್ ರೇವಣ್ಣ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ರೇವಣ್ಣ ಬಂಧನದ ಬಗ್ಗೆ ಕೈ-ಕಮಲ​​​ ನಡುವೆ ಮಾತಿನ ಯುದ್ಧಕ್ಕೂ ಕಾರಣವಾಗಿದೆ. ಹಾಗಾದ್ರೆ, ಯಾವ ನಾಯಕರು ಏನ್​​ ಹೇಳಿದ್ರು. ಇತ್ತ, ವಿದೇಶಕ್ಕೆ ಹಾರಿರೋ ಪ್ರಜ್ವಲ್ ವಿರುದ್ಧ ಎಲ್ಲೆಲ್ಲಿ ಪ್ರತಿಭಟನೆ ಹೇಗಿತ್ತು? ನೋಡೋಣ ಬನ್ನಿ.

ರಾಜ್ಯ ರಾಜಕಾರಣದಲ್ಲಿ ಹಾಸನ ಅಶ್ಲೀಲ ವಿಡಿಯೋಗಳ ಹರಿದಾಟ ಹಲ್‌ಚಲ್ ಎಬ್ಬಿಸಿದೆ. ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಗೌಡರ ಮಗ ಎಸ್‌ಐಟಿ ವಶದಲ್ಲಿದ್ದಾರೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಕೆಸರರಚಾಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್ – ಬಿಜೆಪಿ ನಾಯಕರ ನಡುವೆ ಮಾತಿನ ವಾಗ್ಯುದ್ಧ

ರಾಜ್ಯ ರಾಜಕೀಯದಲ್ಲಿ ಪೆನ್‌ಡ್ರೈವ್ ಪ್ರಕರಣ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಕೇಸ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮೌನಕ್ಕೆ ಜಾರಿದೆ. ಇದರ ಜೊತೆಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ವಾಗ್ಯುದ್ಧವೇ ನಡೆಯುತ್ತಿದೆ.

ಪ್ರಕರಣದಿಂದ ಸ್ಪಲ್ಪ ಅಂತರ ಕಾಯ್ದುಕೊಂಡಿರೋ ಬಿಜೆಪಿ ನಾಯಕರು, ಬ್ಯಾಲೆನ್ಸ್​​, ಡಿಫೆನ್ಸ್​ ಆಟಕ್ಕೆ ಇಳಿದಿದ್ದಾರೆ. ಪೆನ್​ಡ್ರೈವ್ ಸತ್ಯವೋ ಸುಳ್ಳೋ ಗೊತ್ತಿಲ್ಲ, ಎಸ್ಐಟಿ ತನಿಖೆಯನ್ನ ಸುಪ್ರೀಂಕೋರ್ಟ್​ ಅಥವಾ ಹೈಕೋರ್ಟ್ ಮಹಿಳಾ ನ್ಯಾಯಾಧೀಶರು ಕಣ್ಗಾವಲಲ್ಲಿ ನಡೀಬೇಕು ಅಂತ ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ರೆ, ಅರೆಸ್ಟ್ ಮಾಡಿದ ತಕ್ಷಣ ಅಪರಾಧಿ ಅನ್ನೋಕಾಗಲ್ಲ ಅಂತ ಬಿಜೆಿಪಿ ಶಾಸಕ ಟೆಂಗಿನಕಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಮುಂದುವರೆದ ಪ್ರತಿಭಟನೆ

ಇತ್ತ, ವಿದೇಶಕ್ಕೆ ಹಾರಿರೋ ಪ್ರಜ್ವಲ್ ರೇವಣ್ಣ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದಿದ್ದು, ಬಳ್ಳಾರಿಯ ರಾಯಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ನೇತೃತ್ವದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಪ್ರಜ್ವಲ್ ರೇವಣ್ಣ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು.

ಇತ್ತ ಮಂಡ್ಯದಲ್ಲಿಯೂ ಪ್ರಜ್ವಲ್ ವಿರುದ್ಧ ಪ್ರತಿಭಟನೆ ನಡೆದಿದೆ. ಸಂಜಯ್ ವೃತ್ತದಲ್ಲಿ ಪ್ರಜ್ವಲ್ ಪ್ರತಿಕೃತಿಗೆ ಚಪ್ಪಲಿಹಾರ ಹಾಕಿ, ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಪ್ರಜ್ವಲ್ ರೇವಣ್ಣ ಪ್ರತಿಕೃತಿ ದಹಿಸಿ ಸಂಸದನನ್ನು ಬಂಧಿಸುವಂತೆ ಆಗ್ರಹಿಸಿದ್ರು.

ಇದನ್ನೂ ಓದಿ: ಪ್ರಜ್ವಲ್‌ ಮೇಲೆ ಹದ್ದಿನ ಕಣ್ಣು, ಲೊಕೇಶನ್ ಪತ್ತೆಹಚ್ಚಿದ SIT; ಇಂದು ವಶಕ್ಕೆ ಪಡೆಯಲು ಸಿದ್ಧತೆ

ಒಟ್ನಲ್ಲಿ, ದಿನದಿಂದ ದಿನಕ್ಕೆ ಹಾಸನ ಪೆನ್‌ಡ್ರೈವ್ ಪ್ರಕರಣ ತಿರುವು ಪಡೆದುಕೊಳ್ತಿದೆ. ಈಗಾಗ್ಲೇ ರೇವಣ್ಣ ಎಸ್‌ಐಟಿ ವಶದಲ್ಲಿದ್ರೆ, ಪ್ರಜ್ವಲ್​ಗಾಗಿ ಚಾತಕ ಪಕ್ಷಿಯಂತೆ ಎಸ್​​ಐಟಿ ಕಾದು ಕೂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ಗೆ ಅಸ್ತ್ರವಾದ ಪ್ರಜ್ವಲ್​.. ಬಿಜೆಪಿಗೆ ಕಷ್ಟ ಕಷ್ಟ.. ಹೀಗೂ ತಿರುವು ಪಡೆದುಕೊಳ್ತಿದೆಯಾ ಪೆನ್‌ಡ್ರೈವ್ ಪ್ರಕರಣ?

https://newsfirstlive.com/wp-content/uploads/2024/05/Prajwal-Revanna-3.jpg

Load More