newsfirstkannada.com

ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.. ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

Share :

Published May 11, 2024 at 6:46am

    ಮತ್ತಷ್ಟು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ

    ಪೆನ್​​ಡ್ರೈವ್​ ಕೇಸ್​ನಲ್ಲಿ ಮತ್ತೆ ಮೂರು ಆಡಿಯೋ ರಿಲೀಸ್

    ಈ ಆಡಿಯೋಗೂ ನನಗೂ ಸಂಬಂಧವೇ ಇಲ್ಲ ಎಂದ ಶಿವಾರಾಮೇಗೌಡ

ದೇವರಾಜೇಗೌಡ ವಶಕ್ಕೂ ಮೊದಲು ಪೆನ್​​ಡ್ರೈವ್​ ಕೇಸ್​ನಲ್ಲಿ ಮತ್ತೆ ಮೂರು ಆಡಿಯೋ ರಿಲೀಸ್​ ಆಗಿವೆ. ಪೆನ್​ಡ್ರೈವ್​ ಪ್ರಕರಣದಲ್ಲಿ ಮಾಜಿ ಸಂಸದ ಶಿವರಾಮೇಗೌಡರ ಜೊತೆ ದೇವರಾಜೇಗೌಡ ಮಾತನಾಡಿರುವ ಸಂಭಾಷಣೆ ಬಿಡುಗಡೆ ಮಾಡಲಾಗಿದೆ. ಈ ಆಡಿಯೋದಲ್ಲಿ ಏನಿದೆ ಅನ್ನೋ ಡೀಟೇಲ್ಸ್ ಇಲ್ಲಿದೆ.

ಶಿವರಾಮೇಗೌಡ ಜೊತೆ ಮಾತನಾಡಿದ ಆಡಿಯೋ ರಿಲೀಸ್​​

ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಕೀಲ ದೇವರಾಜೇಗೌಡರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಡಿಯೋ ಕಾಲ್​ನಲ್ಲಿ ಖಾಸಗಿ ಅಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ ಎಸಗಿದ್ದರು ಎಂದು ಸಂತ್ರಸ್ತೆ ಆರೋಪಿಸಿ ಏಪ್ರಿಲ್​ 1 ರಂದು ದೂರು ನೀಡಿದ್ದರು. ಇನ್ನು ಅದೇ ಮಹಿಳೆ ವಿರುದ್ಧ ದೇವರಾಜೇಗೌಡ ಕೂಡ ಹೆಬ್ಬಾಳದಲ್ಲಿ ಪ್ರತಿ ದೂರು ನೀಡಿದ್ದರು. ಇದೀಗ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೇವರಾಜೇಗೌಡನನ್ನು ಹಿರಿಯೂರು ಬಳಿಯ ಗುಯಿಳಾಳ್​ ಟೋಲ್​ ಬಳಿ ಹಿರಿಯೂರು ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ಮಾಜಿ ಸಂಸದ ಶಿವರಾಮೇಗೌಡ

ಮೂರು ಆಡಿಯೋ ರಿಲೀಸ್​

ಇನ್ನು ದೇವರಾಜೇಗೌಡ ವಶಕ್ಕೂ ಮೊದಲು ಪೆನ್​​ಡ್ರೈವ್​ ಕೇಸ್​ನಲ್ಲಿ ಮತ್ತೆ ಮೂರು ಆಡಿಯೋ ರಿಲೀಸ್​ ಆಗಿವೆ. ಪೆನ್​ಡ್ರೈವ್​ ಪ್ರಕರಣದಲ್ಲಿ ಮಾಜಿ ಸಂಸದ ಶಿವರಾಮೇಗೌಡರ ಜೊತೆ ದೇವರಾಜೇಗೌಡ ಮಾತನಾಡಿರುವ ಸಂಭಾಷಣೆ ಕೂಡ ಬಿಡುಗಡೆ ಮಾಡಲಾಗಿದೆ. ಈ ಆಡಿಯೋದಲ್ಲಿ ಎಸ್​ಐಟಿಯವರು ನಮಗೆ ನೋಟಿಸ್​ ಕೊಟ್ಟರೆ ಏನ್ಮಾಡ್ಬೇಕು ಎಂದಾಗ ಶಿವರಾಮೇಗೌಡ ಎಲ್ಲೂ ಡಿಕೆಶಿ ಬಗ್ಗೆ ಚಕಾರ ಎತ್ತದಂತೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ್ದ ಬಿಗ್​​ಬಾಸ್​ ಸ್ಪರ್ಧಿಗಳು.. ವಿಶೇಷವೇನು ಗೊತ್ತಾ?

ಆತ ರೆಕಾರ್ಡ್​ ಮಾಸ್ಟರ್

ಇನ್ನೂ ಆಡಿಯೋ ಆರೋಪವನ್ನ ಮಾಜಿ ಸಂಸದ ಶಿವಾರಾಮೇಗೌಡ ತಳ್ಳಿ ಹಾಕಿದ್ದಾರೆ. ದೇವರಾಜೇಗೌಡ ಆಡಿಯೋಗೂ ನನಗೂ ಸಂಬಂಧವೇ ಇಲ್ಲ. ಎಸ್​ಐಟಿಗೆ ಸ್ಟೇ ತರ್ತಾರೆ ಅಂತ ಆತ ನನ್ನ ಬಳಿ ಬಂದಿದ್ದು. ನಾನು ಅವನ ಬಳಿ ಮಾತಾಡಿಲ್ಲ, ಆತ ರೆಕಾರ್ಡ್​ ಮಾಸ್ಟರ್​. ಅಶ್ಲೀಲ ವಿಡಿಯೋ ಪ್ರಕರಣದ ಮಾಸ್ಟರ್​ ದೇವರಾಜೇಗೌಡ ಎಂದು ದೇವರಾಜೇಗೌಡ ವಿರುದ್ಧ ಮಾಜಿ ಸಂಸದ ಎಲ್​.ಆರ್​ ಶಿವಾರಾಮೇಗೌಡ ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

ಬ್ಯಾಕ್ ಟು ಬ್ಯಾಕ್ ಟ್ವಿಸ್ಟ್​

ಒಟ್ಟಾರೆ, ರಾಜಕೀಯ ಲಾಭಗಳಿಗಾಗಿ ಹಾಸನದ ವಿಡಿಯೋ, ಆಡಿಯೋಗಳು, ಒಂದೊಂದಾಗಿ ಹೊರ ಬರುತ್ತಿದ್ದು, ಒಂದರ ನಂತರ ಒಂದು ಟ್ವಿಸ್ಟ್​ಗಳು ಪಡೆದುಕೊಳ್ಳುತ್ತಿದ್ದಿದೆ. ಬ್ಯಾಕ್ ಟು ಬ್ಯಾಕ್ ಟ್ವಿಸ್ಟ್​ಗಳಿಗೆ ಎಸ್​ಐಟಿ ಕೂಡ ಶಾಕ್ ಆಗಿದ್ದು, ತನಿಖೆ ಎಲ್ಲಿಂದ? ಯಾರ ಬಳಿಯಿಂದ ಶುರು ಮಾಡಬೇಕು? ಅನ್ನೋ ಟನ್ಷನ್​ನಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.. ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

https://newsfirstlive.com/wp-content/uploads/2024/05/Devrajegowda-1.jpg

Load More