newsfirstkannada.com

ಹಾಸನದಲ್ಲಿ ದಾಖಲಾಗಿದ್ದು ಒಂದಲ್ಲ, 2 ಕೇಸ್‌.. SIT ತನಿಖೆಗೆ ಸವಾಲ್‌; ಕಾನೂನು ತಜ್ಞರು ಹೇಳೋದೇನು?

Share :

Published May 1, 2024 at 9:08pm

    ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಬಿಗ್​ ಟ್ವಿಸ್ಟ್​

    ಲೀಡ್ ಸಿಗದೇ ಪರದಾಟ, ಮತ್ತೊಂದರಲ್ಲಿ ಟೆಕ್ನಿಕಲ್ ಸಮಸ್ಯೆ ಕಂಡು SIT ಕಂಗಾಲು

    ಎಸ್​ಐಟಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ ಎರಡು ಕೇಸ್​ಗಳು

ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಎಸ್​ಐಟಿಗೆ ದೊಡ್ಡ ಸವಾಲಾಗಿದೆ. ಪ್ರಕರಣ ಸಂಬಂಧ ಸದ್ಯ ಎರಡು ಕೇಸ್​ಗಳು ದಾಖಲಾಗಿದ್ದು, ಎಸ್​ಐಟಿ ಎರಡೂ ಪ್ರಕರಣದ ತನಿಖೆ ನಡೆಸುತ್ತಿದೆ. ಆದ್ರೆ, ಎರಡೂ ಪ್ರಕರಣದಲ್ಲೂ ಎಸ್​ಐಟಿಗೆ ತನಿಖೆ ತಲೆನೋವಾಗಿದೆ. ದೇಶಾದ್ಯಂತ ಹಲ್​ಚಲ್​ ಎಬ್ಬಿಸ್ತಿರೋ ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಸಂಬಂಧ ಒಂದಲ್ಲ, ಎರಡೂ ಪ್ರಕರಣಗಳೂ ದಾಖಲಾಗಿದ್ದು, ಎಸ್​ಐಟಿ ಅಧಿಕಾರಿಗಳಿಗೆ ಎರಡೂ ಪ್ರಕರಣ ಬೇಧಿಸೋದು ದೊಡ್ಡ ತಲೆನೋವಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

ರೇವಣ್ಣ & ಪ್ರಜ್ವಲ್ ವಿರುದ್ಧ 1, ನವೀನ್ ಗೌಡ ವಿರುದ್ಧ ಕೇಸ್​

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಒಟ್ಟು ಎರಡೂ ಪ್ರಕರಣಗಳು ದಾಖಲಾಗಿದೆ. ಒಂದು ರೇವಣ್ಣ ಮತ್ತು ಪಜ್ವಲ್​ ವಿರುದ್ಧ ದಾಖಲಾಗಿದ್ರೆ, ಮತ್ತೊಂದು ನವೀನ್​ ಗೌಡ ವಿರುದ್ಧ ಕೇಸ್​ ದಾಖಲಾಗಿದೆ. ಸದ್ಯ ಎಸ್​ಐಟಿ ತಂಡ ಈ ಎರಡೂ ಪ್ರಕರಣದ ತನಿಖೆ ನಡೆಸುತ್ತಿದೆ. ಆದ್ರೆ, ಪ್ರಕರಣದಲ್ಲಿ ತನಿಖೆಯೇ ಎಸ್ಐಟಿಗೆ ದೊಡ್ಡ ಸವಾಲ್ ಆಗಿದೆ. ಯಾಕಂದ್ರೆ, ಒಂದು ಪ್ರಕರಣದಲ್ಲಿ ಲೀಡ್ ಸಿಗದೇ ಪರದಾಟ, ಮತ್ತೊಂದರಲ್ಲಿ ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ.

ಕಾನೂನು ತಜ್ಞರ ಅಭಿಪ್ರಾಯವೇನು?

ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಇನ್ನೂ ಸರಿಯಾಗಿ ಹೇಳಿಕೆ ಸಿಕ್ಕಿಲ್ಲ. ಸಂತ್ರಸ್ಥರು ಕೊಡುವ ಹೇಳಿಕೆಯ ಮೇಲೆ ಕೇಸ್ ಭವಿಷ್ಯ ನಿರ್ಧಾರವಾಗಲಿದೆ. ಸಂತ್ರಸ್ಥರ ಸರಿಯಾದ ಹೇಳಿಕೆ ಸಿಗುವ ತನಕ ಕೇಸ್ ವೀಕ್, ಯಾಕಂದ್ರೆ ಭಾರತದಲ್ಲಿ ಅಡಲ್ಟ್ ಸೆಕ್ಸ್ ಅಪರಾಧವಾಗುವುದಿಲ್ಲ. ಐಪಿಸಿ ಸೆಕ್ಷನ್​ 497 ಅಡಿ ಅಡಲ್ಟ್ ಸೆಕ್ಸ್ ಅಪರಾಧವಲ್ಲ ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್​ ಹೇಳಿದೆ. ಹರಿದಾಟದ ವಿಡಿಯೋದಲ್ಲಿ ಸಮ್ಮತಿ ಸೆಕ್ಸ್ ಮೇಲ್ನೋಟಕ್ಕೆ ಪತ್ತೆಯಾಗಿದ್ದು, ಈಗಾಗಲೇ ಈ ಘಟನೆ ನಡೆದು ತುಂಬಾ ದಿನ ಆಗಿರುವ ಹಿನ್ನಲೆ, ಸಂತ್ರಸ್ಥ ಮಹಿಳೆ ಕೊಡುವ ಹೇಳಿಕೆ ಮೇಲೆ ಪ್ರಕರಣದ ನಿಲುವು ನಿಂತಿದೆ.

ಸಂತ್ರಸ್ತರು ಏನು ಹೇಳಿದ್ರೆ ಪ್ರಜ್ವಲ್​ಗೆ ಸಂಕಷ್ಟ?
ನಾಲ್ಕು ಮಾದರಿಯ ಹೇಳಿಕೆ ಕೊಟ್ಟರೆ ಪ್ರಜ್ವಲ್​​ಗೆ ಸಂಕಷ್ಟ ಎದುರಾಗಲಿದೆ. ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾರೆಂಬ ಹೇಳಿಕೆ ನೀಡಿದ್ರೆ, ಅಥವಾ ಜೀವ ಬೆದರಿಕೆ ಹಾಕಿ ಬಳಸಿಕೊಂಡಿದ್ದರೆಂಬ ಹೇಳಿಕೆ ನೀಡಿದ್ರೆ ಪ್ರಜ್ವಲ್​ಗೆ ಸಂಕಷ್ಟ ಎದುರಾಗಲಿದೆ. ಅಲ್ಲದೆ, ಸಂತ್ರಸ್ಥೆಗೆ ಆಮಿಷ ನೀಡಿ ಆಕೆಯನ್ನ ಬಳಸಿಕೊಂಡಿದ್ದರೆಂಬ ಹೇಳಿಕೆ ಮತ್ತು ಕುಟುಬಂದವರನ್ನ ಒತ್ತೆ ಇಟ್ಟುಕೊಂಡು ಬಳಕೆ ಮಾಡಿಕೊಂಡ ಆರೋಪ ಮಾಡಿದ್ರೆ ಪ್ರಜ್ವಲ್​ಗೆ ಸಮನ್ಸ್​ ಜಾರಿಯಾಗೋ ಸಾಧ್ಯತೆ ಇದೆ. ಎರಡೂ ಪ್ರಕರಣದ ತನಿಖೆಯಲ್ಲಿ ಎಸ್​ಐಟಿಗೆ ತಲೆನೋವು ಎದುರಾಗಿದೆ. ಒಂದು ವೇಳೆ ಸಂತ್ರಸ್ತೆಯರು ಪ್ರಜ್ವಲ್​​ ವಿರುದ್ಧ ಮೇಲಿನ ನಾಲ್ಕು ಹೇಳಿಕೆಗಳನ್ನ ನೀಡಿದ್ರೆ, ಸಂಕಷ್ಟ ಕಟ್ಟಿಟ್ಟ ಬುತ್ತಿ. ಅಥವಾ ಸಂತ್ರಸ್ತೆಯರು ಸರಿಯಾದ ಹೇಳಿಕೆ ನೀಡದಿದ್ರೆ, ಕೇಸ್​ ವೀಕ್​ ಆಗಲಿದೆ. ತನಿಖೆ ಬಳಿಕ ಎಲ್ಲಾ ಸತ್ಯ ಹೊರಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಿ ದಾಖಲಾಗಿದ್ದು ಒಂದಲ್ಲ, 2 ಕೇಸ್‌.. SIT ತನಿಖೆಗೆ ಸವಾಲ್‌; ಕಾನೂನು ತಜ್ಞರು ಹೇಳೋದೇನು?

https://newsfirstlive.com/wp-content/uploads/2024/05/prajwal-revanna6-1.jpg

Load More