ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.. ಹಾಸನದ ಡ್ರೈವರ್‌ ಕಾರ್ತಿಕ್‌ ಗೌಡ ಬಂಧನ?

author-image
admin
Updated On
ಹಾಸನ ಸೆಕ್ಸ್​ ಸ್ಕ್ಯಾಂಡಲ್​​​ ಕೇಸಲ್ಲಿ ನಿಜವಾಗ್ಲೂ ಪ್ರಜ್ವಲ್​ಗೆ ಶಿಕ್ಷೆ ಆಗುತ್ತಾ? ನಿಜಕ್ಕೂ ಸಿಕ್ಕಿ ಬೀಳೋದ್ಯಾರು?
Advertisment
  • ಹಾಸನದಲ್ಲಿ ಪೆನ್‌ಡ್ರೈವ್‌ ವಿಡಿಯೋ ವೈರಲ್ ಮಾಡಿದ ಆರೋಪ
  • ಪ್ರಜ್ವಲ್ ರೇವಣ್ಣ ಮಾಜಿ ಡ್ರೈವರ್ ಕಾರ್ತಿಕ್ ಗೌಡ ಬಂಧಿಸಲು ಸಿದ್ಧತೆ
  • ಏಪ್ರಿಲ್ 30ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ಕಾರ್ತಿಕ್ ಗೌಡ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಪೊಲೀಸರ ತನಿಖೆ ಮುಂದುವರಿದಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಪೆನ್‌ಡ್ರೈವ್‌ ವಿಡಿಯೋ ವೈರಲ್ ಮಾಡಿದ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ಅವರ ಮಾಜಿ ಡ್ರೈವರ್ ಕಾರ್ತಿಕ್ ಗೌಡ ಅವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ.

publive-image

ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ FIR ದಾಖಲಾದ ಬಳಿಕ ಡ್ರೈವರ್ ಕಾರ್ತಿಕ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಕಳೆದ ಏಪ್ರಿಲ್ 30ರಂದು ಎಸ್‌ಐಟಿ ವಿಚಾರಣೆಗೆ ಕಾರ್ತಿಕ್ ಗೌಡ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಹಾಸನದ ಪೆನ್‌ಡ್ರೈವ್‌ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಯಾವುದೇ ಹೇಳಿಕೆ, ದಾಖಲೆಯನ್ನು ಬಹಿರಂಗ ಪಡಿಸಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ.. ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ 

SIT ವಾರ್ನಿಂಗ್‌ಗೆ ಡೋಂಟ್‌ ಕೇರ್‌!
ಪ್ರಜ್ವಲ್ ರೇವಣ್ಣ ಅವರ ಮಾಜಿ ಡ್ರೈವರ್ ಕಾರ್ತಿಕ್ ಗೌಡ ಅವರು ಎಸ್‌ಐಟಿ ಕೊಟ್ಟ ವಾರ್ನಿಂಗ್‌ಗೇ ತಲೆ ಕೆಡಿಸಿಕೊಂಡಿಲ್ಲ. ಈ ಡೋಂಟ್ ಕೇರ್ ಮನಃಸ್ಥಿತಿಯೇ ಕಾರ್ತಿಕ್‌ ಗೌಡ ಅವರ ಬಂಧನಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಪೆನ್‌ಡ್ರೈವ್‌ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಯಾವುದೇ ಹೇಳಿಕೆ, ದಾಖಲೆ ಬಹಿರಂಗ ಪಡಿಸಬಾರದು. ಇದರಿಂದ ತನಿಖೆಗೆ ಹಿನ್ನೆಡೆಯಾಗುತ್ತೆ ಎಂದು ಕಾರ್ತಿಕ್ ಗೌಡಗೆ ಎಸ್‌ಐಟಿ ಸೂಚಿಸಿತ್ತು. ಆದರೆ ಕಾರ್ತಿಕ್ ಗೌಡ ಅವರು ಸಂದರ್ಶನಗಳನ್ನು ನೀಡಿದ್ದು, ಕೆಲವು ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಪೋಟೋ, ವಿಡಿಯೋ ವೈರಲ್ ಆಗಿರಬಹುದಾದ ಬಗ್ಗೆ ಆರೋಪಿಯ ಬಗ್ಗೆ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಡ್ರೈವರ್ ಕಾರ್ತಿಕ್ ಗೌಡ ಅವರು ಮೊದಲ ವಿಚಾರಣೆಯಲ್ಲಿ ಫೋಟೋ ವಿಡಿಯೋ ಮೊದಲು ನನಗೆ ಸಿಕ್ಕಿದ್ದು ನಂತರ ದೇವರಾಜೇಗೌಡರಿಗೆ ಕೊಟ್ಟಿದ್ದೆ. ಅವರೇ ಪೆನ್‌ಡ್ರೈವ್ ವಿಡಿಯೋ ವೈರಲ್ ಮಾಡಿರಬಹುದು ಎಂದಿದ್ದರು.

publive-image

ಆದ್ರೀಗ ಪೋಟೋ, ವಿಡಿಯೋಗಳನ್ನು ಪ್ರಜ್ವಲ್ ಸ್ನೇಹಿತ ಮೊದಲು ನನಗೆ ಕೊಟ್ಟಿತ್ತು. ಪ್ರಜ್ವಲ್ ಸ್ನೇಹಿತ ಬ್ಲೂ ಟೂತ್‌ನಲ್ಲಿ ನನ್ನ ಮೊಬೈಲ್‌ಗೆ ಕಳಿಸಿದ್ದ. ಅದರಲ್ಲಿ ಕೆಲ ಫೋಟೋಗಳನ್ನ ನಾನು ಭವಾನಿ ರೇವಣ್ಣ ಅವರಿಗೆ ಕಳಿಸಿ ಪ್ರಜ್ವಲ್ ಕೃತ್ಯದ ಬಗ್ಗೆ ಹೇಳಿದ್ದೆ ಎಂದಿದ್ದಾರೆ. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಡ್ರೈವರ್‌ ಕಾರ್ತಿಕ್ ಅವರನ್ನು ವಶಕ್ಕೆ ಪಡೆಯಲು ಎಸ್.ಐ.ಟಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ:SIT ಸತತ ವಿಚಾರಣೆ, ಆರೋಗ್ಯದಲ್ಲಿ ಏರುಪೇರು; ಚಿಕಿತ್ಸೆ ಜೊತೆಗೆ ರೇವಣ್ಣನಿಗೆ ಜಾಮೀನಿನದ್ದೇ ಚಿಂತೆ 

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಬಯಲಾದ ಮೇಲೆ ಹೊಳೆನರಸೀಪುರದ ಕಾರ್ತಿಕ್ ಮನೆಗೂ ಪೊಲೀಸ್ ಭದ್ರತೆ ನೀಡಲಾಗಿದೆ. ಹೊಳೆನರಸೀಪುರದ ಕಡುವಿನಕೋಟೆಯಲ್ಲಿರುವ ಕಾರ್ತಿಕ್ ಗೌಡ ನಿವಾಸಕ್ಕೆ ಭದ್ರತೆ ನೀಡಲಾಗಿದೆ. ಆದರೆ ನಿನ್ನೆ ಸಂಜೆ ಮನೆಯಿಂದ ಕಾರ್ತಿಕ್ ತೆರಳಿದ್ದು, ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment