newsfirstkannada.com

ಆನ್​​ಲೈನ್​ನಲ್ಲಿ ಏನಾದ್ರೂ ಖರೀದಿ ಮಾಡೋ ಮುನ್ನ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು!

Share :

Published February 18, 2024 at 8:54pm

    ಜನರಿಗೆ ಮೋಸ ಮಾಡೋ ಮಹಾನ್​​ ವಂಚಕರ ಪ್ಲಾನ್​ ಏನು?

    ಫಸ್ಟ್​ ಹ್ಯಾಂಡ್​ ಅಥವಾ ಸೆಕೆಂಡ್​ ಹ್ಯಾಂಡ್​ ವಾಹನ ಬೇಕಾ?

    ವಂಚಕರಿಂದ ಅಮಾಯಕರು ಬಚಾವ್‌ ಆಗೋದು ಹೇಗೆ?

ನಿಮಗೆ ಯಾವುದಾದ್ರೂ ವಸ್ತುವನ್ನು ಮಾರಾಟ ಮಾಡಬೇಕೆಂದ್ರೆ ಥಟ್​ ಅಂತ ನೆನಪಾಗೋದೇ ಓಎಲ್ಎಕ್ಸ್, ಫೇಸ್​ಬುಕ್​ ಮಾರ್ಕೆಟ್​​. ಇದು ಒಂಥರಾ ಆಲ್ ಇನ್​ ಒನ್​ ಸೈಟ್​ ಇದ್ದ ಹಾಗೆ. ನಿಮಗೆ ಫಸ್ಟ್​ ಹ್ಯಾಂಡ್​ ಅಥವಾ ಸೆಕೆಂಡ್​ ಹ್ಯಾಂಡ್​ ಯಾವುದೇ ವಸ್ತು ಬೇಕಿದ್ರೂ ಕೂಡ ನಿಮಗೆ ಇಲ್ಲಿ ಸಿಕ್ಕೇ ಸಿಗುತ್ತೆ. ನಿಮಗೆ ಯಾವ ರೀತಿ ನೀವು ಹುಡುಕುತ್ತಾ ಇರೋ ವಸ್ತು ಇಲ್ಲಿ 100% ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್​ ಇದ್ಯೋ ಹಾಗೆಯೇ ವಂಚಕರಿಗೂ ಕೂಡ ಇಲ್ಲಿ ಅಮಾಯಕರು ಸಿಕ್ಕೇ ಸಿಕ್ತಾರೆ ಅನ್ನೋದು ಪಕ್ಕಾ ಗೊತ್ತು.

ಓಎಲ್ಎಕ್ಸ್, ಫೇಸ್​ಬುಕ್​ ಮಾರ್ಕೆಟ್​ನಂತಹ ಜಾಗದಲ್ಲಿ ನಾವು ಖರೀದಿಗೆ ಅಂತ ದುಡ್ಡು ನೀಡಿದ್ರೆ ತಾನೇ ವಂಚನೆ, ಖರೀದಿನೇ ಮಾಡಿಲ್ಲ ಅಂದ್ರೆ ಏನ್​ ಮೋಸ ಮಾಡೋಕೆ ಸಾಧ್ಯ ಅಂತ ನೀವು ಅಂದುಕೊಳ್ಳಬಹುದು. ಆದರೆ ಸುಳ್ಳು ಮಾಹಿತಿ ನೀಡಿ ಫೇಕ್ ಐಡಿ ಕ್ರಿಯೇಟ್ ಮಾಡ್ತಾರೆ. ಇಂಟರ್‌ನೆಟ್‌ ಅಥವಾ ಪಾರ್ಕಿಂಗ್ ಸ್ಥಳಗಳಲ್ಲಿ ಕಂಡುಬರೋ ವಾಹನಗಳ ಫೋಟೋವನ್ನ ಸಂಗ್ರಹಿಸ್ತಾರೆ. ಸಂಗ್ರಹಿಸಿದ ಫೋಟೋವನ್ನ ಫೇಕ್ ಐಡಿ ಪ್ರಕಟಿಸಿ ಆಫರ್ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸ್ತಾರೆ. ಇದಕ್ಕಾಗಿ ಒಳ್ಳೊಳ್ಳೆ ಡಿಸ್ಕೌಂಟ್ ಹಾಗೂ ಆಫರ್​ಗಳನ್ನು ಕೊಡ್ತಾರೆ. ನಂಬರ್‌ ಕೂಡ ಕೊಟ್ಟು ಮೊದಲು ಕಾಂಟ್ಯಾಕ್ಟ್ ಮಾಡಿದವರಿಗೆ ಆದ್ಯತೆ ಅಂತ ಬರೆದಿರುತ್ತಾರೆ. ಇಂಟ್ರೆಸ್ಟಿಂಗ್‌ ಅಂದ್ರೆ ಇವ್ರು ಡಿಸ್‌ಪ್ಲೇ ಮಾಡಿದ ಸಿಮ್ ನಂಬರ್‌ ಬೇರೆ ವ್ಯಕ್ತಿ ಹೆಸರಿನಲ್ಲಿ ರಿಜಿಸ್ಟರ್‌ ಆಗಿರುತ್ತೆ. ಆ ವ್ಯಕ್ತಿಗೆ ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ದುರುಪಯೋಗ ಮಾಡ್ತಿರೋದೇ ಗೊತ್ತಿರಲ್ಲ. ಇನ್ನೂ ಕೆಲವೊಮ್ಮೆ ವಾಹನದ ನಂಬರ್ ಪ್ಲೇಟ್ ಜಾಗದಲ್ಲಿ ಬಿಳಿ ಪಟ್ಟಿಯಿಂದ ಮುಚ್ಚಿ ಆ ಜಾಗದಲ್ಲಿ ಕಾಂಟಾಕ್ಟ್‌ ನಂಬರ್‌ ಹಾಕಿರುತ್ತಾರೆ. ಇದಾದ ಮೇಲೆ ನೀವು ಆ ಆಫರ್​ಗಳಿಗೆ ಮರುಳಾಗಿ ಕಾಲ್​ ಮಾಡಿದ ಮೇಲೆ ಅಸಲಿ ಆಟ ಶುರುವಾಗೋದು. ಜೊತೆಗೆ ಜನರ ನಂಬಿಕೆ ಗಳಿಸೋಕೆ ಒಂದಷ್ಟು ಡೈಲಾಗ್​ಗಳನ್ನು ಪ್ರಯೋಗ ಮಾಡ್ತಾರೆ.

  • ದೋಖಾ ಮಾತು 1

ಸರ್‌ ಗಾಡಿ ಫಸ್ಟ್‌ ಕ್ಲಾಸ್‌ ಆಗಿದೆ ಸರ್‌. ನೀವು ತುಂಬಾ ಒಳ್ಳೆಯವರು ಅಂತ ನಿಮ್ಮ ಮಾತಿನಿಂದಾನೇ ತಿಳಿಯುತ್ತೆ. ನಿಮಗಿಂತ ಮುಂಚೆ 4 ರಿಂದ 5 ಜನ ಕಾಲ್‌ ಮಾಡಿದ್ರು. ಆದ್ರೆ ನಾನು ನಿಮಗೆ ಕಾರು ಮಾರಾಟ ಮಾಡ್ತೀನಿ. ನೀವು ತಕ್ಷಣ ನಾನ್‌ ಕಳಿಸೋ ಬ್ಯಾಂಕ್ ಅಕೌಂಟ್‌ಗೆ ಅಡ್ವಾನ್ಸ್‌ ಆಗಿ ಸ್ವಲ್ಪ ಹಣ ಹಾಕಿ ಸರ್‌. ಆಗ ಕಾರು ಬ್ಲಾಕ್ ಮಾಡಿ ಌಡ್‌ನ ತೆಗೀತೀನಿ ನಾನು.

  • ದೋಖಾ ಮಾತು 2

ನಾನು ಹೊಸದಾಗಿ ಕಾರ್‌ ಪರ್ಚೇಸ್‌ ಮಾಡಿದ್ದೀನಿ. ಬಟ್‌ ಈಗ ವಿದೇಶಕ್ಕೆ ಹೋಗ್ತಿದ್ದೀನಿ. ಹೀಗಾಗಿ ಕಡಿಮೆ ರೇಟ್‌ಗೆ ಕಾರ್‌ ಮಾರಾಟ ಮಾಡ್ತಿದ್ದೀನಿ. ಕಾರ್‌ ಡಾಕ್ಯುಮೆಂಟ್ಸ್‌ ಎಲ್ಲಾ ನಿಮಗೆ ಸೆಂಡ್‌ ಮಾಡ್ತೀನಿ. ಒಂದ್ಸಲ ಚೆಕ್‌ ಮಾಡ್ಕೊಳ್ಳಿ. ಬೇಗ ವ್ಯವಹಾರ ಮುಗಿಸಿಕೊಳ್ಳೋಣ.

  • ದೋಖಾ ಮಾತು 3

ನಾನು ಸೇನೆಯಲ್ಲಿರೋದು. ಇಲ್ಲಿ ಎಲ್ಲಾ ಟೈಮ್‌ನಲ್ಲಿ ಫೋನ್ ಬಳಕೆ ಮಾಡೋ ಹಾಗಿಲ್ಲ. ನನ್‌ ಐಡಿ ಕಳಿಸ್ತೀನಿ ನೋಡಿ. ಕಾರ್‌ ಫೋಟೋನೂ ಕಳ್ಸಿದ್ದೀನಿ. ಚೆಕ್‌ ಮಾಡಿ. ಅಡ್ವಾನ್ಸ್‌ ಕೊಟ್ರೆ ಕಾರ್‌ ಬೇಗ ಶಿಪ್‌ ಮಾಡ್ತೀನಿ. ಇದೆಲ್ಲಾ ಒಂದು ಕಡೆಯಾದ್ರೆ, ಇನ್ನೋದು ಕಡೆಯಲ್ಲಿ ನೀವು ಹಣವನ್ನು ಬೇಗ ಹಾಕಲಿ ಅಂತ ಇನ್ನೂ ಒತ್ತಡವನ್ನು ಹೇರುತ್ತಾರೆ.

ಇದನ್ನು ಓದಿ: ಸಿಕ್ಕ ಸಿಕ್ಕಲ್ಲಿ ಫೋನ್​ ಚಾರ್ಜ್​ ಹಾಕೋರೆ ಎಚ್ಚರ! ಚೂರು ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ!​

ಕಾರ್‌ನ ಫಿಫ್ಟಿ ಪರ್ಸೆಂಟ್‌ ಕೊಟ್ರೆ ನಿಮ್ಮ ಮನೆ ಬಾಗಿಲಿಗೇ ಡೆಲಿವರಿ ಮಾಡ್ತೀವಿ ಸರ್‌ ಅಂತಾರೆ. ನಂಬಿ ನೀವು ಕಳ್ಸಿದ್ರೆ ಮುಗೀತು. ಕಳ್ಸೋದು ಲೇಟಾದ್ರೆ ಲೇಟ್ ಚಾರ್ಜಸ್ ಕಟ್ಟಬೇಕು ಅಂತ ತಿಳಿಸಿ ಮತ್ತಷ್ಟು ಹಣ ಪಡೀತಾರೆ. ನಂತರ ವೆಹಿಕಲ್ ಇಂಟರ್​​ನ್ಯಾಷನಲ್ ಏರ್​​ಪೋರ್ಟ್ ಪಾರ್ಕಿಂಗ್ ಲಾಟ್‌ನಲ್ಲಿದೆ. ನೀವು ಪಾರ್ಕಿಂಗ್ ಕ್ಲಿಯೆರೆನ್ಸ್ ಚಾರ್ಜಸ್ ಕಟ್ಟಬೇಕು ಅಂತಾರೆ. ಇಲ್ದೆ ಇದ್ರೆ ಡೆಲಿವರಿ ಕಷ್ಟ ಆಗುತ್ತೆ ಅಂತ ಹೆದರಿಸ್ತಾರೆ. ಇದಾದ ನಂತರ ನೀವು ತಡವಾಗಿ ಹಣ ಕಟ್ಟಿದ್ದೀರಾ, ಪಾರ್ಕಿಂಗ್ ಲಾಟ್​​ನಿಂದ ವಾಹನ ಹೊರಗೆ ತೆಗೆಯಲು ಗೇಟ್ ಚಾರ್ಜಸ್ ಕಟ್ಟಬೇಕೆಂದು ತಿಳಿಸಿ ಹಣ ಪಡೀತಾರೆ. ಇದಾದ ನಂತರ ಬಾಕಿ ಇರುವ ಸಂಪೂರ್ಣ ಹಣ, ವಿಳಾಸ ದೃಢಿಕರಿಸುವಂತಹ ದಾಖಲಾತಿ, ವೋಟರ್ ಐಡಿ, ಆಧಾರ್ ಕಾರ್ಡ್ ಪತ್ರವನ್ನ ಕಳುಹಿಸಿ, ನಿಮ್ಮ ವಿಳಾಸಕ್ಕೆ ಗಾಡಿ ತಲುಪಿಸ್ತೀವಿ ಅಂತ ನಂಬಿಸಿ ಹಣ ಪಡೀತಾರೆ. ಇದರ ಜೊತೆಗೆ ನಿಮಗೆ ಏನಾದರೂ ಅನುಮಾನ ಬಂದು, ಹಣ ವಾಪಸ್‌ ಕಳ್ಸಿ ಅಂತ ಹೇಳಿದ್ರೆ ಅದಕ್ಕೂ ಪ್ರೊಸೆಸಿಂಗ್ ಫೀ, ರೀಫಂಡ್ ಫೀ, ಜಿಎಸ್​ಟಿ ಅಂತ್ಹೇಳಿ ಮತ್ತೆ ಕಟ್ಟಿಸಿಕೊಳ್ತಾರೆ. ಕೊನೆಯದಾಗಿ ನೀವು ಇನ್ನೂ ಹಣ ಕೊಡೋದಿಲ್ಲ ಅನ್ನೋದು ಯಾವಾಗ ಫೈನಲ್‌ ಆಗುತ್ತೋ, ಆಗ ನಂಬರ್​ ಬ್ಲಾಕ್ ಮಾಡ್ತಾರೆ, ಇಲ್ಲಾ ಕಾಲ್‌ ಪಿಕ್‌ ಮಾಡಲ್ಲ, ಅದೂ ಇಲ್ಲ ಅಂದ್ರೆ ಸಿಮ್ ಕಾರ್ಡ್ ಎತ್ತಿ ಬಿಸಾಡ್ತಾರೆ. ಬೇರೆ ಸಿಮ್ ತಗೊಂಡು ಮತ್ತದೇ ಕೆಲ್ಸ ಶುರು ಮಾಡ್ತಾರೆ.

ಇಂತಹ ವಂಚಕರಿಂದ ಅಮಾಯಕರು ಬಚಾವ್‌ ಆಗೋದು ಹೇಗೆ?

ಮೊದಲನೇದಾಗಿ ಆನ್​ಲೈನ್ ಸೇಲ್, ಪರ್ಚೇಸ್ ಪ್ಲಾಟ್​​ಫಾರಂನಲ್ಲಿ ಆಫರ್‌ ಅಥವಾ ಕಡಿಮೆ ಬೆಲೆಗೆ ಮಾರಾಟಕ್ಕಿದೆ ಅನ್ನೋ ಜಾಹೀರಾತಿಗೆ ಮರುಳಾಗಬೇಡಿ. ವೆಹಿಕಲ್, ವೆಹಿಕಲ್‌ನ ಕಂಡೀಷನ್ ಅಥವಾ ನಿಜವಾದ ವಾಹನದ ಮಾಲೀಕರನ್ನು ಸಂಪರ್ಕಿಸದೇ ವ್ಯವಹಾರ ನಡೆಸಬೇಡಿ. ವಾಹನದ ನಿಜವಾದ ಮಾಲೀಕರ ಬಗ್ಗೆ ಆರ್​ಟಿಓ ಕಚೇರಿಯಿಂದ ನಿಗಧಿತ ಶುಲ್ಕ ಪಾವತಿಸಿ ದಾಖಲಾತಿ ಪಡೆದು ಹೋಲಿಕೆ ಮಾಡಿ ತಿಳಿದುಕೊಳ್ಳಿ. ವಾಹನ ಯಾವುದಾದರೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದೆಯೇ ಅನ್ನೋದನ್ನ ಪೊಲೀಸ್ ಇಲಾಖೆಗೆ ನಿಗಧಿತ ಶುಲ್ಕ ಮತ್ತು ಅರ್ಜಿ ಸಲ್ಲಿಸಿ ರಿಪೋರ್ಟ್ ಪಡೆದುಕೊಳ್ಳಿ. ವಾಹನದ ಮೇಲೆ ಯಾವುದೇ ಸಾಲ ಅಥವಾ ಅಥವಾ ಬೇರೆ ಯಾವುದಾದ್ರೂ ಹಣ ಪಾವತಿಸಬೇಕಾಗಿದ್ಯಾ ಅನ್ನೋದನ್ನ ಪರಿಶೀಲಿಸಿ. ವಾಹನದ ಬಿಡಿ ಭಾಗಗಳು, ಇಂಜಿನ್ ನಂಬರ್, ಚಾಸಿಸ್ ನಂಬರ್ ಆರ್​​ಟಿಓ ಕಚೇರಿಯಿಂದ ಪಡೆದ ಬಿ ಫಾರಂನಲ್ಲಿನ ದಾಖಲೆಗಳಿಗೆ ಹೋಲಿಕೆ ಯಾಗುತ್ತಿದೆಯೇ ಅನ್ನೋದನ್ನ ಕ್ಲಾರಿಫೈ ಮಾಡಿಕೊಳ್ಳಿ. ಕೊನೆಯದಾಗಿ ಯಾವುದೇ ಕಾರಣಕ್ಕೂ ಮುಂಚಿತವಾಗಿ ಅವ್ರೇನಾದ್ರೂ ಹಣದ ಬೇಡಿಕೆ ಇಟ್ರೆ ವಂಚಕರು ಅನ್ನೋದನ್ನ ಕನ್ಫರ್ಮ್‌ ಮಾಡಿಕೊಳ್ಳಿ.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​​ಲೈನ್​ನಲ್ಲಿ ಏನಾದ್ರೂ ಖರೀದಿ ಮಾಡೋ ಮುನ್ನ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/02/phone-9.jpg

Load More