/newsfirstlive-kannada/media/post_attachments/wp-content/uploads/2024/06/haveri-Accident.jpg)
ಹಾವೇರಿ: ಟಿಟಿ ವಾಹನ ಅಪಘಾತದಲ್ಲಿ ಒಂದೇ ಕುಟುಂಬದ 13 ಜನರು ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಮೃತರ ಸಂಬಂಧಿಕರು ಭದ್ರಾವತಿಯಿಂದ ಆಗಮಿಸಿದ್ದು, ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ: ಕಬಿನಿ ಜಲಾಶಯ ಸಂಪೂರ್ಣ ಭರ್ತಿಗೆ 12 ಅಡಿಗಳು ಬಾಕಿ! ಒಳಹರಿವಿನ ಪ್ರಮಾಣ ಎಷ್ಟಿದೆ ಗೊತ್ತಾ?
ನ್ಯೂಸ್ ಫಸ್ಟ್ ಗೆ ಮರಾಟ ಸಮುದಾಯದ ಅಧ್ಯಕ್ಷರು ಹಾಗೂ ಲೋಕೆಶ್ವರರಾವ್ ಮತ್ತು ಸಂಗಡಿಗರು ಘಟನೆ, ಮೃತರ ಕುರಿತು ಮಾತನಾಡಿದ್ದಾರೆ. ಮೃತ ಹದಿಮೂರು ಜನರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರು ಕಡುಬಡತನ ಕುಟುಂಬದವರು. ಅವರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ತಲಾ ಒಬ್ಬೊಬ್ಬರಿಗೆ 15-20 ಲಕ್ಷ ಹಣ ಘೋಷಣೆ ಮಾಡಬೇಕು. ಇಲ್ಲವಾದರೆ ನಾವು ಅಂತ್ಯಕ್ರಿಯೆ ಮಾಡೊಲ್ಲ. ಮೃತದೇಹಗಳನ್ನು ತೆಗೆದುಕೊಂಡು ಹೊಗೊಲ್ಲಾ ಎಂದು ಬಿಗಿಪಟ್ಟು ಹಿಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮನೆಯೇ ನಾಶವಾಯಿತು.. ಟಿಟಿ ವಾಹನ ಅಪಘಾತದಲ್ಲಿ ಅಣ್ಣನ ಮೃತದೇಹ ಕಂಡು ತಮ್ಮನ ಆಕ್ರಂದನ
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಹೇಗೆ ಜೀವನ ಸಾಗಿಸಬೇಕು. ಕೂಡಲೆ ಶಿವಮೊಗ್ಗ ಹಾಗೂ ಹಾವೇರಿ ಸಂಸದರು ಧ್ವನಿ ಎತ್ತಬೇಕು. ಪರಿಹಾರ ಕೊಡಿಸುವ ಕೆಲಸ ಮಾಡಬೇಕೆಂದು ಮೃತರ ಸಂಬಂಧಿಕರು ಹಾಗೂ ಸಮುದಾಯದ ಅಧ್ಯಕ್ಷ ಒತ್ತಡ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ