newsfirstkannada.com

ಟಿಟಿ ಅಪಘಾತದಲ್ಲಿ 13 ಮಂದಿ ಸಾವು.. ಅಸಲಿಗೆ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್​ ಡೀಟೈಲ್ಸ್​​!

Share :

Published June 29, 2024 at 6:18am

  ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ ವಾಹನ

  ಎರಡು ಕುಟುಂಬಗಳ ತಲಾ ನಾಲ್ವರು ಅಪಘಾತಕ್ಕೆ ಬಲಿ

  3 ಹಾಗೂ 4 ವರ್ಷದ ಇಬ್ಬರು ಕಂದಮ್ಮಗಳೂ ದಾರುಣ ಸಾವು

ಹಾವೇರಿಯ ಗುಂಡೆನಹಳ್ಳಿ ಕ್ರಾಸ್​​ನಲ್ಲಿ ಬೆಳ್ಳಂಬೆಳಗ್ಗೆಯೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ದೇವರ ದರ್ಶನ ಮುಗಿಸಿಕೊಂಡು ಬರ್ತಿದ್ದ ಕುಟುಂಬವೊಂದು ಇನ್ನೇನು ಕೆಲವೇ ಘಂಟೆಗಳಲ್ಲಿ ತಮ್ಮೂರು ಬಂದೇ ಬಿಡ್ತು ಅನ್ನುವಷ್ಟರಲ್ಲಿ ದಾರುಣವಾಗಿ ಅಂತ್ಯ ಕಂಡಿದೆ. ದಾರಿ ಮಧ್ಯೆಯೇ ಪಾಶ ಹಿಡಿದು ಪ್ರತ್ಯಕ್ಷನಾಗಿದ್ದ ಯಮ ಕೆಲವೇ ನಿಮಿಷಗಳಲ್ಲಿ 13 ಮಂದಿಯನ್ನ ಬಲಿ ತೆಗೆದುಕೊಂಡಿದ್ದಾನೆ.

ಇದನ್ನೂ ಓದಿ: ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

ಸಾವು ಯಾವಾಗ ಹೇಗೆ ಬೇಕಾದ್ರು ಬರಬಹುದು. ಸವದತ್ತಿ ಎಲ್ಲಮ್ಮನ ದರ್ಶನ ಪಡೆದುಕೊಂಡು ಮುಂಜಾನೆ 4 ಗಂಟೆ ಸುಮಾರಿಗೆ ಹಾವೇರಿಯ ಗುಂಡೆನಹಳ್ಳಿ ಕ್ರಾಸ್​​ ಬಳಿ ಬರ್ತಿದ್ದಂತೆ ಟಿಟಿ ವಾಹನ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಚಾಲಕ ಸೇರಿ 13 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು, ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ ಇನ್ನುಳಿದ ಮೂವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ, ಮೃತರು ಶಿವಮೊಗ್ಗ ಜಿಲ್ಲೆಯ ಭದ್ರವಾತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ವಿಷಯ ತಿಳಿಯುತ್ತಿದ್ದಂತೆ ಇತ್ತ ಸ್ವಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಟಿಟಿ ಮಾಲಿಕ ನಾಗೇಶ್ ಕುಟುಂಬದಲ್ಲಿ ನಾಲ್ಕು ಜನ ಸೇರಿದಂತೆ ಸಂಬಂಧಿಕರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮನೆದೇವರ ಪೂಜೆಗೆಂದು ಎಮ್ಮೆಹಟ್ಟಿಯ ಒಟ್ಟು ನಾಲ್ಕು ಕುಟುಂಬಗಳು ಪ್ರವಾಸಕ್ಕೆ ತೆರಳಿದ್ದವು. ಅಪಘಾತದಲ್ಲಿ ಪರಶುರಾಮ್, 65 ವರ್ಷದ ಸುಭದ್ರಾಬಾಯಿ, 29 ವರ್ಷದ ಮಾನಸ, 50 ವರ್ಷದ ಮಂಜುಳಾ, 21 ವರ್ಷದ ಆದರ್ಶ , 4 ವರ್ಷದ ಆರ್ಯ, 50 ವರ್ಷದ ವಿಶಾಲಾಕ್ಷಿ, 35 ವರ್ಷದ ರೂಪಾಬಾಯಿ, 3 ವರ್ಷದ ನಂದನ, 30 ವರ್ಷದ ಅಂಜಲಿ, 51 ವರ್ಷದ ನಾಗೇಶರಾವ್, 27 ವರ್ಷದ ಅರುಣಕುಮಾರ, 55 ವರ್ಷದ ಮಂಜುಳಾಬಾಯಿ, 45 ವರ್ಷದ ಭ್ಮಾಗ್ಯಾಬಾಯಿ ಮೃತ ದುರ್ಧೈವಿಗಳು.

ಇದನ್ನೂ ಓದಿ: ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ

ಘಟನೆ ಬಗ್ಗೆ ತಿಳಿದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ದೇವರ ದರ್ಶನ ಮುಗಿಸಿ ವಾಪಸ್​ ಬರ್ತಿದ್ದವರು ಮಸಣ ಸೇರಿದ್ದು, ನಿಜಕ್ಕೂ ದುರಂತವೇ ಸರಿ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಸಾಮೂಹಿಕ ಸಾವು ಶಿವಮೊಗ್ಗದ ಎಮ್ಮೆ ಹಟ್ಟಿಯಲ್ಲಿ ಶೋಕದ ಜೊತೆ ಜೊತೆಗೆ ಆಘಾತವನ್ನೂ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಟಿ ಅಪಘಾತದಲ್ಲಿ 13 ಮಂದಿ ಸಾವು.. ಅಸಲಿಗೆ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್​ ಡೀಟೈಲ್ಸ್​​!

https://newsfirstlive.com/wp-content/uploads/2024/06/HVR-ACCIDENT-5.jpg

Load More