Advertisment

ಸಿದ್ದು ಗರ್ವ ಭಂಗ ಆಗಬೇಕು.. ಬಹಳ ದಿನಗಳ ಬಳಿಕ ಮತ್ತೆ ಗುಡುಗಿದ ದೊಡ್ಡ ಗೌಡರು; ಹೇಳಿದ್ದೇನು?

author-image
admin
ಸಿದ್ದು ಗರ್ವ ಭಂಗ ಆಗಬೇಕು.. ಬಹಳ ದಿನಗಳ ಬಳಿಕ ಮತ್ತೆ ಗುಡುಗಿದ ದೊಡ್ಡ ಗೌಡರು; ಹೇಳಿದ್ದೇನು?
Advertisment
  • 90ರ ವಯಸ್ಸಿನಲ್ಲೂ ಜೆಡಿಎಸ್ ಎಲ್ಲಿದೆ ಅಂದವರಿಗೆ ನನ್ನ ಶಕ್ತಿ ತೋರಿಸುತ್ತೇನೆ
  • ರಾಜ್ಯದ ಮುಖ್ಯಮಂತ್ರಿ ಆ ಮಹಾನುಬಾವರಿಗೆ, ನಮೋ ನಮಃ ಎಂದ HDD
  • ಕೇವಲ ಮೋದಿ ಹೆಸರು ಸಾಕಾಗಲ್ಲ ಕಾರ್ಯಕರ್ತರು ಕೆಲಸ ಮಾಡಬೇಕು

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಸಮನ್ವಯ ಸಭೆ ನಡೆದಿದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಗರ್ವ ಭಂಗ ಆಗಬೇಕು. ಗರ್ವ ಭಂಗ ಆಗಬೇಕಾದರೆ ನಾವೆಲ್ಲರೂ ಒಟ್ಟಾಗಿ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ಕರೆ ನೀಡಿದ್ದಾರೆ.

Advertisment

ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಹೆಚ್‌.ಡಿ ದೇವೇಗೌಡರು, ಎರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ಹಿಂದೆ ಆದಂತಹ ವಿಚಾರಗಳನ್ನ ಮರೆತು ನಾವೆಲ್ಲಾ ಒಂದಾಗಬೇಕಿದೆ. ಕೇವಲ ಮೋದಿ ಹೆಸರು ಸಾಕಾಗಲ್ಲ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ಹೆಚ್‌ಡಿಡಿ ಹೇಳಿದ್ದಾರೆ.

publive-image

ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯದಲ್ಲಿ ಎಲ್ಲಿದೆ ಎಂದು ಮಾತನಾಡಿದ್ದಾರೆ. ಸಿದ್ದರಾಮಯ್ಯಗೆ ಅಧಿಕಾರದ ಮದ ಇದ್ದು, ಹೀಗಾಗಿ ಜೆಡಿಎಸ್ ಎಲ್ಲಿದೆ ಅಂತಾರೆ. 90ರ ವಯಸ್ಸಿನಲ್ಲೂ ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುವ ಸಾಮರ್ಥ್ಯ ನನಗೆ ಇದೆ. ನಾನು ತೋರಿಸ್ತೀನಿ. ನಾನು ಯಾರಿಗೂ ಭಯ ಬೀಳಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ ದೇವೇಗೌಡರು ಗುಡುಗಿದ್ದಾರೆ.

ಇದನ್ನೂ ಓದಿ: ಗಳಸ್ಯ ಗಂಟಸ್ಯ ಮೋದಿ, ದೇವೇಗೌಡ ಸುಳ್ಳುಗಾರರು.. ಕನಕಪುರದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

Advertisment

ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ. ದೇಶದ ಪ್ರಧಾನಿ ಬಹಳ ವೀಕ್ ಆಗಿರಬೇಕಂತೆ. ಅಬ್ಬಾ.. ಪ್ರಧಾನಿ ವಿರುದ್ಧ ಕೋರ್ಟಿಗೆ ಹೋಗಿದ್ದಾರೆ. ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಿ ಅಂದ್ರೆ, ನೋ ಅಂದ್ರೂ ಮನಮೋಹನ್ ಸಿಂಗ್ ಇದೆಲ್ಲಾ ಗೊತ್ತಿದ್ರೂ, ಸಿದ್ದರಾಮಯ್ಯ ಅವರೇ ಕೋರ್ಟಿಗೆ ಅರ್ಜಿ ಹಾಕ್ತೀರಾ? ಇಂತಹ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಆ ಮಹಾನುಬಾವರಿಗೆ, ನಮೋ ನಮಃ. ಮೋದಿ ಬಿಟ್ರೆ ದೇಶಕ್ಕೆ ಇನ್ಯಾರೂ ನಾಯಕರಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲ್ಲಬೇಕು. ಹೀಗಾಗಿ ಗ್ರೌಂಡ್‌ನಲ್ಲಿ ಏನೇ ಸಮಸ್ಯೆ ಇದ್ರೂ ಹೊಂದಾಣಿಕೆ ಮಾಡಿಕೊಂಡು ಹೋಗಿ. ಯಾರು ಯಾರ ಮೇಲೂ ದೂರುವುದು ಬೇಡ. ‌ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ. ಪ್ರತಿ ಕ್ಷೇತ್ರಗಳಲ್ಲೂ ಮೈತ್ರಿಗೆ ಸ್ವಂತ ಬಲ ಇದೆ ಎಂದು ದೇವೇಗೌಡರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment