newsfirstkannada.com

ಮಂಡ್ಯದಲ್ಲಿ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ ಫಿಕ್ಸಾ? ದೇವೇಗೌಡರ ಮಗಳು ಕೊಟ್ರು ಹೊಸ ಟ್ವಿಸ್ಟ್‌!

Share :

Published February 21, 2024 at 5:01pm

    ಹುಟ್ಟಿದಾಗಲೇ ರಾಜಕೀಯದ ಮನೆಯಲ್ಲಿ ಹುಟ್ಟಿದವಳು ನಾನು..

    ಪದೇ ಪದೆ ಹೊರಗಡೆಯಿಂದ ಒತ್ತಡಗಳಿವೆ ಎಂದ ದೇವೇಗೌಡರ ಮಗಳು

    ಒಂದೇ ವೇದಿಕೆಯಲ್ಲಿ ಸುಮಲತಾ ಅಂಬರೀಶ್, ಡಾ.ಸಿ.ಎನ್ ಮಂಜುನಾಥ್

ಮಂಡ್ಯ: ಲೋಕಸಭಾ ಚುನಾವಣೆಗೆ ಇನ್ನು 2 ತಿಂಗಳಷ್ಟೇ ಬಾಕಿ ಇದೆ. ಮತದಾನದ ಯುದ್ಧ ಹತ್ತಿರವಾಗುತ್ತಿದ್ದಂತೆ ಮಂಡ್ಯ ಚುನಾವಣಾ ಕಣ ರಂಗೇರಿದೆ. ಅಚ್ಚರಿ ಎಂಬಂತೆ ಇಂದು ಮಂಡ್ಯ ಜಿಲ್ಲೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಸೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರು.

ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗಾಗಿ ಸಂಸದೆ ಸುಮಲತಾ ಅವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಜೆಡಿಎಸ್ ನಾಯಕರು ಮಂಡ್ಯದಿಂದ ಡಾ.ಸಿ.ಎನ್ ಮಂಜುನಾಥ್ ಅವರನ್ನೇ ಕಣಕ್ಕಿಳಿಸಲು ತೆರೆಮರೆಯ ತಯಾರಿ ನಡೆಸಿದ್ದಾರೆ. ಈ ಮಧ್ಯೆ ಮಂಡ್ಯ ಜಿಲ್ಲೆಗೆ ಡಾ.ಸಿ.ಎನ್ ಮಂಜುನಾಥ್ ಅವರು ಕುಟುಂಬ ಸಮೇತ ಆಗಮಿಸಿದ್ದು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ವಿರುದ್ಧ ನಿಲ್ತಿರಾ..? ಈ ಬಗ್ಗೆ ಡಾ. CN ಮಂಜುನಾಥ್ ಹೇಳಿದ್ದೇನು..?

ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಡಾ.ಸಿ.ಎನ್ ಮಂಜುನಾಥ್ ಹಾಗೂ ಅವರ ಪತ್ನಿ ಹೆಚ್‌.ಡಿ ಅನುಸೂಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮಂಡ್ಯದಿಂದಲೇ ಡಾ.ಸಿ.ಎನ್ ಮಂಜುನಾಥ್ ಅವರು ಸ್ಪರ್ಧಿಸುತ್ತಾರಾ ಅನ್ನೋ ಪ್ರಶ್ನೆಗೆ ದೇವೇಗೌಡರ ಮಗಳು ಪ್ರತಿಕ್ರಿಯೆ ನೀಡಿದರು.

ನೋಡಿ ಹುಟ್ಟಿದಾಗಲೇ ರಾಜಕೀಯದ ಮನೆಯಲ್ಲಿ ಹುಟ್ಟಿದವಳು ನಾನು. ನಾನು ಹುಟ್ಟಿದ ಮರು ದಿನವೇ ನಮ್ಮ ತಂದೆ ಎಂಎಲ್‌ಎ ಆದರು. ರಾಜಕೀಯದ ಏಳು-ಬೀಳುಗಳನ್ನ ನಾನು ನೋಡಿದ್ದೀನಿ. ಸದ್ಯದ ಪರಿಸ್ಥಿತಿಯಲ್ಲಿ ಡಾಕ್ಟರ್ ಸಿ.ಎನ್‌ ಮಂಜುನಾಥ್ ಅವರು ಜನ ಸೇವೆ ಮಾಡಿದ್ದಾರೆ. ಅದನ್ನ ನೆಮ್ಮದಿಯಾಗಿ ಆಲೋಚನೆ ಮಾಡೋಕೆ ನಮಗೆ ಅವಕಾಶ ಸಿಗುತ್ತಿಲ್ಲ. ಅಂದ್ರೆ ಮಾಡಿರೋ ಜನ ಸೇವೆಯನ್ನ ಸಂತೋಷದಿಂದ ಆಸ್ವಾದನೆ ಮಾಡೋಕೆ ನಮಗೆ ಆಗುತ್ತಿಲ್ಲ. ಪದೇ ಪದೆ ಹೊರಗಡೆಯಿಂದ ಒತ್ತಡಗಳಿವೆ ಎಂದು ಹೇಳಿದರು. ಇದೇ ವೇಳೆ ಡಾ.ಸಿ.ಎನ್ ಮಂಜುನಾಥ್ ಅವರು ಹೆಚ್ಚು ಸಾಧನೆ ಮಾಡಿರೋದೇ ಇವತ್ತು ನಮಗೆ ಸಮಸ್ಯೆ ಆಗಿದೆ ಅನ್ನೋ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ ಫಿಕ್ಸಾ? ದೇವೇಗೌಡರ ಮಗಳು ಕೊಟ್ರು ಹೊಸ ಟ್ವಿಸ್ಟ್‌!

https://newsfirstlive.com/wp-content/uploads/2024/02/Dr-C-N-manjunath-Wife-mandya.jpg

Load More