‘ವ್ಯವಸ್ಥಿತ ಸಂಚು’! ನಾಗಮಂಗಲ ಪ್ರಕರಣಕ್ಕೆ ಚನ್ನಪಟ್ಟಣ ಬೈಎಲೆಕ್ಷನ್ ಲಿಂಕ್ ಕೊಟ್ಟ ಕುಮಾರಸ್ವಾಮಿ

author-image
Ganesh
Updated On
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕುಮಾರಸ್ವಾಮಿ ಆಣೆ ಪ್ರಮಾಣ ಮಾಡಲಿ -ಸವಾಲ್ ಹಾಕಿದ ಹಳೇ ಸ್ನೇಹಿತ
Advertisment
  • ‘ಹಿಂದುತ್ವ’ ಅಸ್ತ್ರ ಹಿಡಿದ ಕುಮಾರಸ್ವಾಮಿ ಮಹಾ ಆರೋಪ
  • ಕಲ್ಲು ಎಲ್ಲಿಂದ ಬಂತು? ಜೆಲ್ಲಿ ಹಾಕಿದ್ದರಾ? 10 ನಿಮಿಷದಲ್ಲಿ ಬಂತಾ?
  • ಸರ್ಕಾರದ ವೈಫಲ್ಯ ಇದಕ್ಕೆಲ್ಲ ಕಾರಣ ಎಂದ ಕುಮಾರಸ್ವಾಮಿ

ಮಂಡ್ಯದ ನಾಗಮಂಗಲ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಅದರಂತೆ ಇಂದು ಬೆಳಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಅಹಿತಕರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.

ಸ್ಥಳ ಪರಿಶೀಲನೆ ನಂತರ ಮಾಹಿತಿ ಪಡೆದು ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ.. ಈಗ ಚನ್ನಪಟ್ಟಣದಲ್ಲೂ ಚುನಾವಣೆ ನಡೆಸಬೇಕಲ್ವ. ಈ ಹಿನ್ನೆಲೆಯಲ್ಲಿ ವೋಲೈಸಿಕೊಳ್ಳುವ ಪದ್ಧತಿ ಶುರುಮಾಡಿಬಿಟ್ರಲ್ಲ. ಈ ಭಾಗದಲ್ಲಿ ಇರೋದು ಕಾಂಗ್ರೆಸ್, ಜೆಡಿಎಸ್ ರಾಜಕಾಣ. ಈ ರಾಜಕಾರಣದಲ್ಲಿ ಕಳೆದ 50 ವರ್ಷಗಳಿಂದಲೂ, ಸ್ವಾತಂತ್ರ್ಯ ಬಂದ ದಿನದಿಂದಲೂ ಮುಸಲ್ಮಾನ ಜನರು ಜೆಡಿಎಸ್​ಗೆ ಮತ ನೀಡುವ ಸಾಂಪ್ರದಾಯ ಇತ್ತು. ಈ ಹಿಂದೆ ಇತ್ತು.

ಇದನ್ನೂ ಓದಿ:ಅಂಗಡಿಗೆ ಬೆಂಕಿ ಇಟ್ರು, 1.5 ಕೋಟಿ ಹೋಯ್ತು.. ಜೀವ ಉಳಿಸಿಕೊಂಡಿದ್ದೇ ದೊಡ್ಡದು -ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು

ಆದರೆ ಕಾಂಗ್ರೆಸ್​ನವರು ವೋಲೈಕೆಯ ರಾಜಕಾರಣವನ್ನು ಪ್ರಯೋಗ ಮಾಡಿಕೊಂಡು ಹೋಗ್ತಿದ್ದಾರೆ. ಈ ಪ್ರಯೋಗಕ್ಕೆ ನಾವು ಅವಕಾಶ ಕೊಡುವುದಿಲ್ಲ. ಕಲ್ಲು ತೂರಾಟದಿಂದ ಪ್ರಾರಂಭ ಆಯಿತು ಅನ್ನೋ ಮಾಹಿತಿ ಇದೆ. ಮೊದಲೇ ಭದ್ರತೆ ನೀಡಿದ್ದರೆ ಇದು ನಡೆಯುತ್ತಿರಲಿಲ್ಲ. ಅಲ್ಲಿ ಕಲ್ಲು ಎಲ್ಲಿತ್ತು..? ರಸ್ತೆಯಲ್ಲಿ ಕಲ್ಲಿತ್ತಾ? ಅದು ಹೈವೇ. ಅಲ್ಲಿ ಜೆಲ್ಲಿ-ಗಿಲ್ಲಿ ಹಾಕಿದ್ದರಾ? ಕಲ್ಲು ಎಲ್ಲಿಂದ ಬಂತು? ಎಲ್ಲಿಂದ ಬಂತು ತಲವಾರು? ಎಲ್ಲಿಂದ ಬಂತು ಪೆಟ್ರೋಲ್ ಬಾಂಬ್. ಎಲ್ಲಿಂದ ಬಂತು ಆ್ಯಸಿಡ್ ಬಾಟಲ್? ಇವೆಲ್ಲ ಹತ್ತು ನಿಮಿಷದಲ್ಲಿ ರೆಡಿ ಆಯ್ತಾ? ವ್ಯವಸ್ಥಿತವಾಗಿ ಇದು ಮಾಡದಿದ್ದರೆ ಇಂತಹ ಒಂದು ಘಟನೆ ನಡೆಯುತ್ತಿರಲಿಲ್ಲ. ಒಂದು ಸಮಾಜಕ್ಕೆ ದೌರ್ಜನ್ಯ ಆಯಿತು ಎಂದು ನಾನು ಹೇಳಲ್ಲ. ಇಷ್ಟಕ್ಕೆಲ್ಲ ಕಾರಣ ಸರ್ಕಾರದ ವೈಫಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment