newsfirstkannada.com

ಮೋದಿ ಮುಂದೆ ದಳಪತಿ ಬಿಗ್ ಡಿಮ್ಯಾಂಡ್.. ಕೃಷಿ ಖಾತೆ ಸಿಗದಿದ್ರೆ ಯಾವ ಇಲಾಖೆ ಕೇಳ್ತಾರಂತೆ ಗೊತ್ತಾ?

Share :

Published June 6, 2024 at 10:19am

  ಕೇಂದ್ರದಲ್ಲಿ ಕೃಷಿ ಇಲಾಖೆ ಖಾತೆ ಪಡೆಯಲು ಹೆಚ್​ಡಿಕೆ ಪ್ಲಾನ್​

  ರೈತಾಭಿವೃದ್ಧಿಗೆ ಪೂರಕ ಕೆಲಸ ಮಾಡಬಹುದೆಂಬ ಲೆಕ್ಕಾಚಾರ

  ಇಸ್ರೇಲ್ ಮಾದರಿ ಕೃಷಿಗೆ ಮಾರು ಹೋಗಿರುವ ಕುಮಾರಸ್ವಾಮಿ

ಎದುರಾಳಿಗಳ ಚಕ್ರವ್ಯೂಹವನ್ನ ಬೇಧಿಸಿ ಮಂಡ್ಯದ ಮಣ್ಣಿನಲ್ಲಿ ದಳಪತಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್‌ ಸ್ಟಾರ್‌ನೇ ಚೇಂಜ್‌ ಮಾಡಿ ಸಕ್ಕರೆಯ ಸಿಹಿಯನ್ನ ಉಂಡಿದ್ದಾರೆ. ಈಗೇನಿದ್ರು ಮೋದಿ ಜೊತೆ ಸೇರಿ ಸರ್ಕಾರ ರಚನೆ ಮಾಡೋದೇ? ಕೇಂದ್ರದಲ್ಲಿ ಅಧಿಕಾರವನ್ನ ಹಿಡಿಯೋದೆ ಹೆಚ್‌ಡಿಕೆ ಗುರಿ. ಈ ಮಧ್ಯೆ ದಳಪತಿ ಕೇಂದ್ರ ಮಂತ್ರಿಯಾಗೋದು ಬಹುತೇಕ ಪಕ್ಕಾ ಆಗಿದೆ. ಅದರಲ್ಲೂ ಪವರ್‌ಫುಲ್ ಖಾತೆಗಳ ಮೇಲೆ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ.

ಭದ್ರಕೋಟೆಯಲ್ಲಿ ನೆಲಕಚ್ಚಿದ್ದ ಪಕ್ಷಕ್ಕೆ ದಳಪತಿಯೇ ಮತ್ತೆ ಆಸರೆಯಾಗಿದ್ದಾರೆ.. ಚಕ್ರವ್ಯೂಹ ಭೇಧಿಸಲು ಆಗದೇ ಪುತ್ರ ಸೋಲನ್ನಪ್ಪಿದ್ದ ಜಾಗದಲ್ಲೇ ಗೆದ್ದು ಹೆಚ್‌ಡಿಕೆ ಹಿರಿಹಿರಿ ಹಿಗ್ಗಿದ್ದಾರೆ.. ಮೊದಲ ಬಾರಿಗೆ ಹೊರಗಿನಿಂದ ಬಂದು ಮಂಡ್ಯದಲ್ಲಿ ಗೆದ್ದು ಸಾಧನೆಗೈದಿದ್ದಾರೆ.. ಕಾಂಗ್ರೆಸ್ ಸ್ವಾಭಿಮಾನ ಅಸ್ತ್ರಕ್ಕೆ ಸೊಪ್ಪು ಹಾಕದೇ ಪಂಚ ಗ್ಯಾರಂಟಿ, ಸ್ಟಾರ್​ ಪ್ರಚಾರಕ್ಕೂ ಬಗ್ಗದೇ ಮಂಡ್ಯ ಮತದಾರ ಕುಮಾರಸ್ವಾಮಿಗೆ ಬಹುಪರಾಕ್ ಹೇಳಿದ್ದಾನೆ.. ಇದೀಗ ಗೆದ್ದು ದೆಹಲಿ ರಾಜಕೀಯಕ್ಕೆ ಎಂಟ್ರಿಕೊಟ್ಟಿರೋ ದಳಪತಿ ಕೇಂದ್ರ ಸಚಿವ ಸ್ಥಾನಕ್ಕೆ ಏರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಮುಂಗಾರು ಮಳೆ ಬಿರುಸು.. ಇವತ್ತು ಈ ರಾಜ್ಯಗಳಲ್ಲಿ ಮೊದಲ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..!

ಮೋದಿ ಮುಂದೆ ‘ದಳಪತಿ’ಯಿಂದ ಬಿಗ್ ಡಿಮ್ಯಾಂಡ್
ಚುನಾವಣೆ ಬಳಿಕ ಗೆಲ್ಲೋ ಗುರಿ.. ಗೆದ್ಮೇಲೆ ಅಧಿಕಾರ ಪಡೆಯೋದೆ ಗುರಿ.. ಈಗೇನೋ ಕುಮಾರಸ್ವಾಮಿ ಗೆದ್ದಾಯ್ತು.. ಇದೀಗ ಕೇಂದ್ರದ ಕ್ಯಾಬಿನೆಟ್‌ನಲ್ಲಿ ಪ್ರಬಲ ಹುದ್ದೆ ಪಡೆಯಲು ದಳಪತಿ ಸರ್ಕಸ್ ಮಾಡ್ತಿದ್ದಾರೆ.. ಅದರಲ್ಲಿ ಫಲಕೂಡಾ ಸಿಗಬಹುದೇನೋ? ಯಾಕಂದ್ರೆ ಹೆಚ್‌ಡಿಕೆ ಮಂಡ್ಯದಿಂದ ಸ್ಪರ್ಧೆ ಮಾಡೋಕೆ ಮನವೊಲಿಸಿದ್ದೇ ಬಿಜೆಪಿ. ಅಷ್ಟೇ ಯಾಕೆ ಮಂಡ್ಯದಿಂದ ಗೆದ್ದು ಬನ್ನಿ ನಿಮಗೆ ಕೇಂದ್ರ ಸಚಿವ ಸ್ಥಾನ ಕೊಡ್ತೀವಿ ಅಂತ ಹೇಳಿದ್ದೇ ಕೇಸರಿ ಪಡೆ.. ಹೀಗಾಗಿ ಹೆಚ್‌.ಡಿ. ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ಕೋಡೋದು ಫಿಕ್ಸ್.. ದಳಪತಿ ರಾಜ್ಯದಲ್ಲಿ ‘ಕೈ‘ನ ಕಟ್ಟಿಹಾಕುವ ನಿಟ್ಟಿನಲ್ಲಿ ಪವರ್‌ ಫುಲ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ..

ಇದನ್ನೂ ಓದಿ:ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?

ದಳಪತಿಗಳ ಬಿಗ್ ಡಿಮ್ಯಾಂಡ್

 • ಕೇಂದ್ರದಲ್ಲಿ ಕೃಷಿ ಇಲಾಖೆ ಖಾತೆ ಪಡೆಯಲು ಹೆಚ್​ಡಿಕೆ ಪ್ಲಾನ್​
 • ರೈತಾಭಿವೃದ್ಧಿಗೆ ಪೂರಕ ಕೆಲಸ ಮಾಡಬಹುದೆಂಬ ಲೆಕ್ಕಾಚಾರ
 • ಇಸ್ರೇಲ್ ಮಾದರಿ ಕೃಷಿಗೆ ಮಾರು ಹೋಗಿರುವ ಕುಮಾರಸ್ವಾಮಿ
 • ಈ ಕೃಷಿ ಪದ್ಧತಿಯನ್ನ ದೇಶದಲ್ಲಿ ಅಳವಡಿಸಿದ್ರೆ ರೈತರ ಅಭಿವೃದ್ಧಿ
 • ಜಲಶಕ್ತಿ ಸಚಿವರಾದ್ರೆ ರಾಜ್ಯದ ನೀರಾವರಿ ಸರಿಪಡಿಸಲು ಪ್ಲಾನ್​
 • ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬಹುದು ಎಂಬ ಚಿಂತನೆ
 • ಕಾವೇರಿ, ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ ವಿವಾದಕ್ಕೆ ಬ್ರೇಕ್
 • ಎರಡು ಖಾತೆಗಳಿಗೆ ಹೆಚ್​ಡಿಕೆ ಡಿಮ್ಯಾಂಡ್ ಇಡುವ ಸಾಧ್ಯತೆ
 • ಮೋದಿ, ಅಮಿತ್‌ ಶಾ, ನಡ್ಡಾ ಮುಂದೆ ಕುಮಾರಸ್ವಾಮಿ ಬೇಡಿಕೆ

ಕೃಷಿ ಖಾತೆ ಮೇಲಿನ ಆಸಕ್ತಿ ಬಿಚ್ಚಿಟ್ಟ ಕುಮಾರಸ್ವಾಮಿ
ಎನ್‌ಡಿಎ ಒಕ್ಕೂಟದ ಸಭೆಯಲ್ಲಿ ಮಂಡ್ಯದಿಂದ ಆಯ್ಕೆಯಾಗಿರೋ ಸಂಸದ ಹೆಚ್‌.ಡಿ. ಕುಮಾರಸ್ವಾಮಿ ಭಾಗಿಯಾಗಿದ್ರು.. ಮೋದಿ ನೇತೃತ್ವದ ಸಭೆಯಲ್ಲೂ ಭಾಗಿಯಾಗಿದ್ರು.. ಇದಕ್ಕೂ ಮುನ್ನ ಕೇಂದ್ರದಲ್ಲಿ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ಕೃಷಿ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದೆ. ಮುಂದೇನಾಗುತ್ತೋ ನೋಡೋಣ ಎನ್ನುವ ಮೂಲಕ ಕೃಷಿ ಖಾತೆ ಮೇಲೆ ಕಣ್ಣಿಟ್ಟಿರೋ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!

ಒಟ್ಟಾರೆ, ರೈತರ ಪಕ್ಷ ಅಂತಲೇ ಕರೆಸಿಕೊಳ್ಳೋ ಜೆಡಿಎಸ್‌ ಕೇಂದ್ರದಲ್ಲಿ ಕೃಷಿ ಖಾತೆ ಪಡೆದ್ರೆ ರಾಜ್ಯಕ್ಕೆ ಕೊಂಚ ಲಾಭ ಆಗಬಹುದೇನೋ? ಜೊತೆಗೆ ಅನ್ನದಾತರ ಬಗ್ಗೆ ಕಾಳಜಿ ಹೊಂದಿರೋ ಹೆಚ್‌ಡಿಕೆ ಕೃಷಿ-ನೀರಾವರಿ ಖಾತೆ ಪಡೆದಿದ್ದೇ ಆದ್ರೆ ಕರುನಾಡಿಗೆ ಒಳಿತಾಗಲಿದೆ ಅನ್ನೋದು ಜನರ ವಿಶ್ವಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಮುಂದೆ ದಳಪತಿ ಬಿಗ್ ಡಿಮ್ಯಾಂಡ್.. ಕೃಷಿ ಖಾತೆ ಸಿಗದಿದ್ರೆ ಯಾವ ಇಲಾಖೆ ಕೇಳ್ತಾರಂತೆ ಗೊತ್ತಾ?

https://newsfirstlive.com/wp-content/uploads/2024/06/HD-KUMARA.jpg

Load More