newsfirstkannada.com

‘ಅಂದು ಸಿದ್ದು ಮರ್ಯಾದೆ ಉಳಿಸಿದ್ದು ಮೋದಿ’- ರಾಕೇಶ್​ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ HDK

Share :

Published April 30, 2024 at 9:00pm

    ಸಿದ್ದು ಕುಟುಂಬದ ಮರ್ಯಾದೆ ಉಳಿಸಿದ್ದು ನರೇಂದ್ರ ಮೋದಿನಾ?

    2016ರಲ್ಲಿ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ರಾಕೇಶ್ ಸಿದ್ದರಾಮಯ್ಯ

    ಹೆಚ್‌.ಡಿ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರ SIT ತನಿಖೆಗೆ ಆದೇಶಿಸಿದ್ದು, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರೂ ಸಹ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿಕೆ ನೀಡಿದ್ದರು.

ಹಾಸನ ವಿಡಿಯೋ ವೈರಲ್‌ ಪ್ರಕರಣ ಸಖತ್ ಸದ್ದು ಮಾಡುತ್ತಿದ್ದಂತೆ ಜೆಡಿಎಸ್, ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಹೆಚ್‌.ಡಿ ಕುಮಾರಸ್ವಾಮಿ ಅವರು ಇವತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ‘2000 ಮಹಿಳೆಯರ ಕೇಸ್.. MP ಪ್ರಜ್ವಲ್ ರೇವಣ್ಣ ಬೇರೆ ಕೆಲಸನೇ ಮಾಡಿಲ್ಲ ಹಾಗಿದ್ರೆ’- HDK ಯಾಕೆ ಹೀಗಂದ್ರು? 

ಸುದ್ದಿಗೋಷ್ಟಿಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವ್ರೇ ನಿಮ್ಮ ಕುಟುಂಬದಲ್ಲಿ ನಡೀತಲ್ಲಾ ಒಂದು ದುರ್ಘಟನೆ. ಅದನ್ನು ಈಗ ನಾನು ಬಳಕೆ ಮಾಡಿಕೊಳ್ಳಲು ಹೋಗಲ್ಲ. ಅವತ್ತು ನಿಮ್ಮ ಕುಟುಂಬದ ಮಾನ ಮರ್ಯಾದೆ ಉಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದು ವಿದೇಶಾಂಗ ಇಲಾಖೆ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಎಂದಿದ್ದಾರೆ.

ಹಾಸನದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ ಕುಮಾರಸ್ವಾಮಿ ಅವರು ಇದಾ ನಿಮ್ಮ ಸೌಜನ್ಯ. ಅಂದು ನಿಮ್ಮ ಕುಟುಂಬದ ಮಾನ ಮರ್ಯಾದೆ ಉಳಿಸಿದ್ದು ನರೇಂದ್ರ ಮೋದಿ ಅವರಲ್ವಾ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಗೂ ಪ್ರಜ್ವಲ್ ರೇವಣ್ಣ ಅವರಿಗೂ ಸಂಬಂಧ ಇದ್ಯಾ ಸಿದ್ದರಾಮಣ್ಣ. ಪ್ರಜ್ವಲ್ ರೇವಣ್ಣ ಅವರನ್ನ ಅಭ್ಯರ್ಥಿ ಮಾಡಿದ್ದು ನಾವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಈ ಪ್ರಕರಣದ ಎಲ್ಲಾ ವರದಿಯನ್ನು ಕೊಟ್ಟಿದ್ದೇನೆ. ಇಂತಹ ನೀಚ ರಾಜಕೀಯ ಮಾಡಬಾರದು. ವೈರಲ್‌ ವಿಡಿಯೋದಲ್ಲಿರುವ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ್ರೆ ರಾಜ್ಯ ಸರ್ಕಾರವೇ ನೇರ ಜವಾಬ್ದಾರಿ ಎಂದು ಹೆಚ್‌ಡಿಕೆ ಎಚ್ಚರಿಸಿದ್ದಾರೆ.

‘ವಿದೇಶದಿಂದ ಮೃತದೇಹ ತಂದಿದ್ದೇವೆ’
ಮಾಜಿ ಸಿಎಂ ಕುಮಾರಸ್ವಾಮಿ ಅವರು ಕುಟುಂಬದ ಮಾನ ಮರ್ಯಾದೆ ಬಗ್ಗೆ ಮಾತನಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಹೇಳ್ತಿರುವುದು ಎಲ್ಲವೂ ಸುಳ್ಳು. ನಾನು ಮೋದಿ ಜೊತೆಗೆ ಮಾತನಾಡಿಯೇ ಇಲ್ಲ. ನನ್ನ ಮಗ ಸತ್ತಿರುವುದು ಹೊರ ದೇಶದಲ್ಲಿ. ವಿದೇಶದಿಂದ ಮೃತದೇಹ ತಂದಿದ್ದೇವೆ. ಕುಮಾರಸ್ವಾಮಿ ಆರೋಪ ಎಲ್ಲವೂ ಸುಳ್ಳು ಸುಳ್ಳು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: HD ಅಂದ್ರೆ ಏನು ಬ್ರದರ್‌.. ಕುಮಾರಸ್ವಾಮಿ ಶೈಲಿಯಲ್ಲೇ ಖಡಕ್ ಟಾಂಗ್ ಕೊಟ್ಟ ಡಿಕೆಶಿ; ಹೇಳಿದ್ದೇನು? 

ಅಸಲಿಗೆ ಅಂದು ಆಗಿದ್ದೇನು? 
ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ ಅವರು 2016ರಲ್ಲಿ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದರು. 39 ವರ್ಷದ ರಾಕೇಶ್ ಸಿದ್ದರಾಮಯ್ಯ ಅವರು ಬೆಲ್ಜಿಯಂ ಆಸ್ಪತ್ರೆಯಲ್ಲಿ ಜುಲೈ 30, 2016ರಲ್ಲಿ ಸಾವನ್ನಪ್ಪಿದ್ದರು. ರಾಕೇಶ್ ಮೃತದೇಹವನ್ನು ಬೆಲ್ಜಿಯಂ ಸರ್ಕಾರ ಭಾರತಕ್ಕೆ ಹಸ್ತಾಂತರ ಮಾಡಿತ್ತು. ಕೇಂದ್ರ ಸರ್ಕಾರದ ನೆರವಿನಿಂದ ಅಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆಯನ್ನು ಆಗಸ್ಟ್ 01, 2016ರಲ್ಲಿ ನೆರವೇರಿಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಂದು ಸಿದ್ದು ಮರ್ಯಾದೆ ಉಳಿಸಿದ್ದು ಮೋದಿ’- ರಾಕೇಶ್​ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ HDK

https://newsfirstlive.com/wp-content/uploads/2024/04/Hd-kumaraswamy-On-Siddaramaiah.jpg

Load More