newsfirstkannada.com

ನಮ್ಮ ಬಳಿಯೂ ಕೆಲವು ವಿಡಿಯೋ ಇವೆ.. ಹೆಚ್​ ಡಿ ಕುಮಾರಸ್ವಾಮಿ​ ಹೊಸ ಬಾಂಬ್

Share :

Published April 30, 2024 at 12:29pm

Update April 30, 2024 at 12:30pm

    ಪೆನ್​ ಡ್ರೈವ್​ ಹಂಚಿಕೆ ವಿಚಾರವಾಗಿ ಮಾತನಾಡಿದ ಹೆಚ್​ಡಿಕೆ

    ಇದರ ಹಿಂದೆ ಮಹಾನ್ ನಾಯಕರ ಕೈವಾಡವಿದೆ ಎಂದ ಕುಮಾರಸ್ವಾಮಿ

    ಕಾಂಗ್ರೆಸ್ ಪುಢಾರಿಗಳು ನಮ್ಮ ಮನೆ ಮುಂದೇಕೆ ಪ್ರತಿಭಟನೆ ಮಾಡಬೇಕು?

ಹುಬ್ಬಳ್ಳಿ: ನಮ್ಮ ಬಳಿಯೂ ಕೆಲ ವೀಡಿಯೋ ಇವೆ. ಎಲ್ಲ ಆಯಾಮಗಳಲ್ಲಿ ತನಿಖೆಯಾಗಬೇಕು ಎಂದು ಜೆಡಿಎಸ್​ ಅಧ್ಯಕ್ಷ ಎಚ್​ ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಪೆನ್​ಡ್ರೈವ್​ ಹಂಚಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ಮಹಾನ್ ನಾಯಕರ ಕೈವಾಡವಿದೆ. 2012 ರಲ್ಲಿ ನಡೆದ ಪ್ರಕರಣಕ್ಕೆ ಜೀವ ಕೊಟ್ಟವರು ಮಹಾನ್ ನಾಯಕ. ಮಹಿಳೆಯರ ಬಗ್ಗೆ ಮಾತಾಡೋ ಮಹಾನ್ ನಾಯಕನಿಂದ ಮಾನ ಹರಾಜು ಆಗಿದೆ ಎಂದು ಹೇಳಿದ್ದಾರೆ.

ನಾವು ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ

ಜೆಡಿಎಸ್ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಹೆಚ್​ಡಿಕೆ ಪಕ್ಷದ ಇಮೇಜ್‌ಗೆ ಧಕ್ಕೆಯಾಗಬಾರದೆಂಬ ಕಾಳಜಿ ಇದೆ. ಅದೇ ಕಾಳಜಿ ನಮ್ಮದೂ ಇದೆ. ಇಲ್ಲಿ ಯಾರನ್ನೂ ಕ್ಷಮಿಸೋ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ನಾವು ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ. ಸರಕಾರ ತನ್ನದೇ ಆದ ತನಿಖೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿನ್ನೆ ದೇವೇಗೌಡರ ನಿವಾಸದಲ್ಲೇ ವಾಸ್ತವ್ಯ.. ಇಂದು ಬೆಳಗ್ಗೆ ದೇವಸ್ಥಾನ ಸುತ್ತಿದ ರೇವಣ್ಣ

ನಾನು ಇದನ್ನು ಇಷ್ಟಕ್ಕೇ ಬಿಡೋದಿಲ್ಲ

ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯ ಹೆಚ್​ಡಿಕೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಹೇಳಿದ್ದಾರೆ?. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ ಅಂದಿದ್ದಾರೆ. ಹೊರತು ಪ್ರಜ್ವಲ್ ಪ್ರಕರಣ ಪ್ರಸ್ತಾಪಿಸಿಲ್ಲ. ಕಾಂಗ್ರೆಸ್ ಪುಡಾರಿಗಳು ನಮ್ಮ ಮನೆ ಮುಂದೇಕೆ ಪ್ರತಿಭಟನೆ ಮಾಡಬೇಕು?. ಮಹಾನ್ ನಾಯಕರ ಮನೆ ಮುಂದೆ ಪ್ರತಿಭಟಿಸಲಿ. ನಾನು ಇದನ್ನು ಇಷ್ಟಕ್ಕೇ ಬಿಡೋದಿಲ್ಲ ಎಂದು ಹೆಚ್​ಡಿಕೆ ಗರಂ ಆಗಿ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಬಳಿಯೂ ಕೆಲವು ವಿಡಿಯೋ ಇವೆ.. ಹೆಚ್​ ಡಿ ಕುಮಾರಸ್ವಾಮಿ​ ಹೊಸ ಬಾಂಬ್

https://newsfirstlive.com/wp-content/uploads/2024/04/HDK-3.jpg

Load More