newsfirstkannada.com

ನಿನ್ನೆ ದೇವೇಗೌಡರ ನಿವಾಸದಲ್ಲೇ ವಾಸ್ತವ್ಯ.. ಇಂದು ಬೆಳಗ್ಗೆ ದೇವಸ್ಥಾನ ಸುತ್ತಿದ ರೇವಣ್ಣ

Share :

Published April 30, 2024 at 11:46am

    ನಿನ್ನೆ ತಂದೆ ದೇವೇಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದ ಹೆಚ್​ ಡಿ ರೇವಣ್ಣ

    ಇಂದು ಬನಶಂಕರಿಯ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರೇವಣ್ಣ

    ಪ್ರಜ್ವಲ್​ ರೇವಣ್ಣರನ್ನ ಜೆಡಿಎಸ್​ ಪಕ್ಷದಿಂದ ಉಚ್ಛಾಟನೆ ಮಾಡಲು ದೇವೇಗೌಡರು ಆದೇಶ

ಹಾಸನ ಅಶ್ಲೀಲ ವಿಡಿಯೋ ವೈರಲ್ ಆಗ್ತಿದಂತೆ ಹೆಚ್​.ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಬೆಳಗ್ಗೆ ಬನಶಂಕರಿಯ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಿನ್ನೆ ರಾತ್ರಿ ದೇವೇಗೌಡ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದ ರೇವಣ್ಣ, ಇಂದು ಬೆಳಗ್ಗೆ ದೇವೇಗೌಡರ ನಿವಾಸದಿಂದ ತೆರಳಿ ಬನಶಂಕರಿಯಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ ಬಂದಿದ್ದಾರೆ. ಬಳಿಕ ದೇವರ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಒಪ್ಪಿಕೊಳ್ಳಲಾಗಲ್ಲ; ಗೃಹ ಸಚಿವ ಅಮಿತ್​ ಶಾ

ಇನ್ನು ಹಾಸನ ಅಶ್ಲೀಲ ಈ ಪ್ರಕರಣದ ಕುರಿತು ಎಸ್​ಐಟಿ ತನಿಖೆ ನಡೆಸುತ್ತಿದೆ. ಮತ್ತೊಂದೆಡೆ ಪ್ರಜ್ವಲ್​ ಹಾಗೂ ತಂದೆ ರೇವಣ್ಣ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಅತ್ತ ಲೋಕಸಭಾ ಅಭ್ಯರ್ಥಿಯಾಗಿರುವ ಪ್ರಜ್ವಲ್​ರನ್ನ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್​ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಇಂದು ಉಚ್ಛಾಟನೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಅತ್ತ ಪ್ರಜ್ವಲ್​ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಬಳಿಕ ಜಮರ್ನಿಗೆ ಹೋಗಿದ್ದಾರೆ. ಸದ್ಯ ಈ ಪ್ರಕರಣ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆಯನ್ನು ನಡೆಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆ ದೇವೇಗೌಡರ ನಿವಾಸದಲ್ಲೇ ವಾಸ್ತವ್ಯ.. ಇಂದು ಬೆಳಗ್ಗೆ ದೇವಸ್ಥಾನ ಸುತ್ತಿದ ರೇವಣ್ಣ

https://newsfirstlive.com/wp-content/uploads/2024/04/Revanna-1.jpg

Load More