newsfirstkannada.com

ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ.. ಹೆಚ್​ ಡಿ ಕುಮಾರಸ್ವಾಮಿ ಹೀಗ್ಯಾಕಂದ್ರು?

Share :

Published April 29, 2024 at 11:08am

Update April 29, 2024 at 11:10am

    ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಎಚ್​ಡಿಕೆ ಟಾಕ್​

    ನನ್ನ ಹೆಸರು, ದೇವೇಗೌಡರ ಹೆಸರು ತರಬೇಡಿ ಎಂದ ಮಾಜಿ ಸಿಎಂ

    ಅವರ ಕುಟುಂಬದ ವಿಚಾರವೇ ಬೇರೆ. ಅವರು 4 ಜನ ಬೇರೆ ಇದ್ದಾರೆ

ಶಿವಮೊಗ್ಗ: ಹೆಚ್​.ಡಿ ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ. ನಮ್ಮ ಕುಟುಂಬ ಅಂದ್ರೆ ನಾನು ಮತ್ತು ದೇವೇಗೌಡರು ಅಷ್ಟೆ ಎಂದು ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಮಾತನಾಡಿದ ಹೆಚ್​ಡಿಕೆ, ರೇವಣ್ಣ ಕುಟುಂಬದಿಂದ ಅಧಿಕೃತವಾಗಿ ಅಂತರ ಕಾಯ್ದುಕೊಂಡಿರೋದನ್ನು ಪ್ರಶ್ತಾಪಿಸಿದ್ದಾರೆ. ಜೊತೆಗೆ ತಪ್ಪು ಮಾಡಿದವರ ಮೇಲೆ ಪಕ್ಷದಿಂದ ಕ್ರಮ ಆಗುತ್ತೆ ಎಂದಿದ್ದಾರೆ.

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿ ಮೂರು ದಿನದಿಂದ ಚರ್ಚೆ ಆಗ್ತಿದೆ. ಎಸ್ ಐ ಟಿ ರಚನೆ ಯಾಗಿದೆ. ಯಾರು ತಪ್ಪು ಮಾಡಿದ್ರು ಅವರು ಕಾನೂನಿಗೆ ತಲೆ ಬಾಗಬೇಕು. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಬೇಕು ಎಂದು ಹೆಚ್​ಡಿಕೆ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕುಟುಂಬ ಅನ್ನೋದು ತರೋದು ಬೇಡ. ಇದು ವ್ಯಕ್ತಿ ಪ್ರಶ್ನೆ. ಹೀಗಾಗಿ ವ್ಯಕ್ತಿಯನ್ನ ಪ್ರಶ್ನೆ ಮಾಡಿ. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಬೇಕು. ನಾನು ವಹಿಸಿಕೊಳ್ಳುವ ಪ್ರಶ್ನೆ ಯೇ ಇಲ್ಲ. ನನ್ನ ಹೆಸರು, ದೇವೇಗೌಡರ ಹೆಸರು ತರಬೇಡಿ. ಎಫ್​ಐಆರ್ ಹಾಕಿದ್ದಾರೆ. ತನಿಖೆಯಾಗಲಿ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​​ರನ್ನ ವಿದೇಶದಿಂದ ವಾಪಸ್​ ಕರೆಸಿಕೊಳ್ಳುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವರು; ಆಮೇಲೆ ಏನ್ಮಾಡ್ತಾರಂತೆ ಗೊತ್ತಾ?

ಪ್ರಜ್ವಲ್ ಎಲ್ಲಿದ್ದಾನೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನನ್ನ ಕೇಳಿ ಹೋಗ್ತಾನಾ?. ದಿನ ನನ್ನ ಕೇಳಿ ಓಡಾಡುತ್ತಾನಾ?. ನನ್ನ ಗಮನಕ್ಕೆ ಬಂದ್ರೆ ಸರಿ ಪಡಿಸಬಹುದಿತ್ತು. ಪಕ್ಷದಿಂದ ಕ್ರಮ ತೆಗೆದುಕೊಳ್ಳುತ್ತೇನೆ. ಎಸ್​ಐಟಿ ತನಿಖೆ ಸತ್ಯಾಂಶ ಹೊರಬರಲಿ. ಪೆನ್ ಡ್ರೈ ಯಾರು ಬಿಟ್ಟಿದ್ದಾರೆ ಹೊರ ಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂತಾ ಈಗಾಗಲೇ ಹೇಳಿದ್ದೇನೆ. ಮಹಿಳೆಯರಿಗೆ ದೇವೇಗೌಡರು ಹಾಗೂ ನಾನು ಗೌರವದಿಂದ ನಡೆದುಕೊಂಡಿದ್ದೇನೆ. ಈ ರೀತಿ ಆಗಬಾರದು ಎಂದು ಹೆಚ್​ಡಿಕೆ ಹೇಳಿದ್ದಾರೆ.

ಅವರ ಕುಟುಂಬದ ವಿಚಾರ ವೇ ಬೇರೆ. ಅವರು ನಾಲ್ಕು ಜನ ಬೇರೆ ಇದ್ದಾರೆ. ಮೊದಲೇ ಹೀಗೆ ಹೇಳಿದ್ರೆ ಕ್ರಮ ತೆಗೆದುಕೊಳ್ಳುತ್ತಿದೆ. ಇವಾಗ ವಿಚಾರ ಹೊರ ಬಂದಿದೆ. ಪ್ರತಿ ಮನುಷ್ಯ ನಿಗೆ ನಮ್ಮ ಜವಾಬ್ದಾರಿ ಅನ್ನೋದು ಇರಬೇಕು ಎಂದಿದ್ದಾರೆ.

ಸುಮಲತಾ ಕುರಿತಾಗಿಗೂ ಎಚ್​ಡಿಕೆ ಮಾತನಾಡಿದ್ದು, ಸುಮಲತಾ ಬಗ್ಗೆ ದೇವೇಗೌಡರಿಗೆ ಮಾಹಿತಿ ಕೊರತೆ ಇರಬಹುದು. ಸುಮಲತಾ ನಮ್ಮ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲಿ ಬಿಜೆಪಿ ಪಕ್ಷ ಪ್ರಚಾರಕ್ಕೆ ಹೋಗಿ ಅಂತಾರೆ ಅಲ್ಲಿಗೆ ಹೋಗ್ತೇನೆ ಅಂತಾ ಸುಮಲತಾ ಹೇಳಿದ್ದಾರೆ. ಬಿಜೆಪಿ ಪಕ್ಷ ಏನು ಹೇಳುತ್ತೆ ಅದನ್ನ ಸುಮಲತಾ ಮಾಡಿದ್ದಾರೆ. ನಾನು ಅವರ ಮನೆಗೆ ಹೋಗಿದ್ದೆ ಬೆಂಬಲ ಕೋರಿದ್ದೆ. ಇದರ ಬಗ್ಗೆ ಹೆಚ್ಚು ಒತ್ತು ನೀಡೋದು ಬೇಡ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ.. ಹೆಚ್​ ಡಿ ಕುಮಾರಸ್ವಾಮಿ ಹೀಗ್ಯಾಕಂದ್ರು?

https://newsfirstlive.com/wp-content/uploads/2024/04/HDK-Shivmogga.jpg

Load More