ಚನ್ನಪಟ್ಟಣ ಟಿಕೆಟ್ ಯಾರಿಗೆ..? ಹೆಚ್​.ಡಿ ಕುಮಾರಸ್ವಾಮಿ, ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

author-image
Bheemappa
Updated On
ಹೆಚ್​ಡಿಕೆಯನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ.. ಭೇಟಿ ಬಳಿಕ ಬಿ. ವೈ. ವಿಜಯೇಂದ್ರ ಏನಂದ್ರು ಗೊತ್ತಾ?
Advertisment
  • ಮೂರು ಕ್ಷೇತ್ರಗಳಲ್ಲಿ ಮೈತ್ರಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಯಾರು?
  • ಈಗ ಹೆಚ್​​.ಡಿ ದೇವೇಗೌಡ ಕುಟುಂಬವಲ್ಲ, ನಮ್ಮದು ಎನ್​ಡಿಎ ಕುಟುಂಬ
  • ಚನ್ನಪಟ್ಟಣ ಟಿಕೆಟ್ ಬಗ್ಗೆ ಸಿ.ಪಿ ಯೋಗೇಶ್ವರ್, ನಿಖಿಲ್ ಹೇಳಿದ್ದು ಏನು?

ರಾಜ್ಯದಲ್ಲಿ 3 ಕ್ಷೇತ್ರಗಳ ಉಪಕದನಕ್ಕೆ ಮುಹೂರ್ತ ಫಿಕ್ಸ್ ಆಗಿಯಾಗಿದೆ. ಯುದ್ಧದ ಅಖಾಡವೇನೋ ರೆಡಿಯಾಗಿದೆ. ಮೂರು ಕ್ಷೇತ್ರಗಲ್ಲೂ ಕಾಂಗ್ರೆಸ್​ ವರ್ಸಸ್ ಮೈತ್ರಿ ಕಾದಾಟ ಕನ್ಫರ್ಮ್. ಆದ್ರೆ ದೋಸ್ತಿಗಳ ನಡುವೆ ಯಾವ ಕ್ಷೇತ್ರಕ್ಕೆ ಯಾರು ಕ್ಯಾಂಡಿಡೇಟ್ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿ ಹಲವರು ಸಭೆ ನಡೆಸಲಿದ್ದಾರೆ.

ಯುದ್ಧ ಕಾಲ.. ಇದು ಉಪ ಚುನಾವಣೆಯ ಯುದ್ಧ ಕಾಲ.. ಈ ಯುದ್ಧ ಕಾಲದೊಳ್ ತಂತ್ರ.. ಪ್ರತಿತಂತ್ರ ಸಾಮಾನ್ಯ. ಆದ್ರೆ, ಸಮರಭೂಮಿಯಲ್ಲಿ ಹೋರಾಡಲು ಒಬ್ಬ ಕದನ ಕಲಿಬೇಕು. ಈ ಕದನ ಕಲಿ ಆಯ್ಕೆ ಕಮಲದಳ ದೋಸ್ತಿಗಳಿಗೆ ಈ ಕ್ಷಣದ ಸವಾಲು. ಈ ಸವಾಲು ಮೆಟ್ಟಿ ನಿಲ್ಲಲು ಒಂದು ಮಹತ್ವದ ಸಭೆ ನಿಗದಿಯಾಗಿದೆ.

ಇದನ್ನೂ ಓದಿ: ಕಾಲೇಜು 3ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ.. ಪ್ರೇಮಾ ಸಾವಿನ ರಹಸ್ಯ ಬಯಲು; ಅಸಲಿಗೆ ಆಗಿದ್ದೇನು?

publive-image

‘ತ್ರಿ’ಕ್ಷೇತ್ರಗಳ ಅಭ್ಯರ್ಥಿ ಫೈನಲ್​ಗೆ ದೋಸ್ತಿ ಮಂತ್ರ.. ರಣತಂತ್ರ!

ನವೆಂಬರ್ 13 ರಂದು ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಬೈ ಎಲೆಕ್ಷನ್ ನಡೀತಿದೆ. ಕ್ಷೇತ್ರ ಮೂರೇ ಆದ್ರೆ ಟೆನ್ಷನ್ ನೂರಿದೆ. ಅದಕ್ಕೆ ಕಾರಣ ದೋಸ್ತಿಯ 2 ದೋಣಿ ಒಗ್ಗೂಡಿ ಹೋಗಬೇಕಿರೋದು. ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲು ಸಮರ್ಥ ಅಭ್ಯರ್ಥಿ ಅಗತ್ಯ ಇದೆ. ಈ ನಿಟ್ಟಿನಲ್ಲಿ ಚರ್ಚಿಸಲು ಸಂಜೆ 6 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಲಾಗ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ದೋಸ್ತಿ ನಾಯಕರ ಮೀಟಿಂಗ್ ನಡೆಯಲಿದೆ. ಅದರಲ್ಲೂ ಪ್ರಮುಖ ಚರ್ಚೆಯೇ ಚನ್ನಪಟ್ಟಣದ ಚುನಾವಣಾ ಕಣ.

ಚನ್ನಪಟ್ಟಣ ಚಟಪಟ!

  • ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರು ಎಂಬ ಗೊಂದಲ
  • ಜೆಡಿಎಸ್ ಬಿಜೆಪಿ ಟಿಕೆಟ್ ಫೈಟ್ ಕಾಂಗ್ರೆಸ್​ಗೆ ಲಾಭವಾಗುವ ಭೀತಿ
  • ಚನ್ನಪಟ್ಟಣದಲ್ಲಿ ನನಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿರೋ ಸೈನಿಕ
  • ಇನ್ನೊಂದೆಡೆ ಚನ್ನಪಟ್ಟಣ ನಮ್ಮದೇ ಅಂತಾ ದಳಪತಿ ಸಿದ್ಧತೆ ಆರಂಭ
  • ಅಭ್ಯರ್ಥಿ ಯಾರೆಂದು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಸಭೆಯಲ್ಲಿ ಚರ್ಚೆ
  • ಸಿ.ಪಿ ಯೋಗೇಶ್ವರ್ ಜೊತೆ ಚರ್ಚಿಸಿರುವ ಜೆಡಿಎಸ್ ನಾಯಕರು
  • ಸಭೆಯಲ್ಲಿ ಕುಮಾರಸ್ವಾಮಿ, ವಿಜಯೇಂದ್ರ ನೇತೃತ್ವದಲ್ಲಿ ಅಭ್ಯರ್ಥಿ ಫೈನಲ್

ಅಂತಿಮವಾಗಿ ತೀರ್ಮಾನ ಆಗಬೇಕಿದೆ. ಮೈತ್ರಿಯ ಹಿರಿಯ ನಾಯಕರಿಂದ ತೀರ್ಮಾನ ಆಗಬೇಕಿದೆ. ನಿಖಿಲ್ ಕುಮಾರಸ್ವಾಮಿ ಅಷ್ಟೇ ಅಲ್ಲ, ಎನ್​ಡಿಎದಿಂದ ಯಾವುದೇ ಸಣ್ಣ ಕಾರ್ಯಕರ್ತನನ್ನ ಅಭ್ಯರ್ಥಿ ಮಾಡಿದರು ನಮ್ಮ ಸಹಕಾರ ಪಕ್ಷದ ಪರವಾಗಿಯೇ ಇರುತ್ತದೆ. ಕ್ಷೇತ್ರದ ಅಭಿವೃದ್ಧಿ ಪರವಾಗಿ ಇರುತ್ತೆ.

ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವಘಟಕದ ಅಧ್ಯಕ್ಷ

ನಾವು, ಎರಡು ಪಕ್ಷದ ಹಿರಿಯರು ಕುಳಿತು ಮಾತನಾಡಿದ್ದೇವೆ. ವ್ಯಕ್ತಿಗತವಾಗಿ ನನಗು ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ನನ್ನ ಕಾರ್ಯಕರ್ತರನ್ನ ಹಿಡಿದುಕೊಳ್ಳಬೇಕಾದರೆ ನಾನು ಎಲೆಕ್ಷನ್​ಗೆ ನಿಲ್ಲಬೇಕು. ನನ್ನ ಕಾರ್ಯಕರ್ತರು, ಮುಖಂಡರು ಕೇಳುತ್ತಿದ್ದಾರೆ. ಆದರೆ ಪಕ್ಷದ ಹಿರಿಯರ ಮಾತಿಗೆ ಬದ್ಧವಾಗಿ ಇರುತ್ತೇನೆ.

ಸಿ.ಪಿ ಯೋಗೇಶ್ವರ್, ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ

ಇಬ್ಬರು ನಾಯಕರ ಮಾತಿನಿಂದಲೇ ಗೊತ್ತಾಗ್ತಿದೆ ಚನ್ನಪಟ್ಟಣ ಟಿಕೆಟ್ ವಿಚಾರ ಸುಲಭವಾಗಿ ನಿರ್ಧಾರವಾಗುವಂತದ್ದಲ್ಲ ಎಂದು. ಹೀಗಾಗಿಯೇ ಇಂದು ಮಹತ್ವದ ಚರ್ಚೆ ನಡೆಯಲಿದೆ. ಅಲ್ಲದೇ ಸಂಡೂರು, ಶಿಗ್ಗಾಂವಿ ಚುನಾವಣೆ ಸಿದ್ಧತೆ ಬಗ್ಗೆ ಕೂಡ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಈ ಮೀಟಿಂಗ್​ನಲ್ಲಾದ ತೀರ್ಮಾನಗಳ ಬಗ್ಗೆ ಹೈಕಮಾಂಡ್​ಗೆ ಮಾಹಿತಿ ಕಳಿಸಿಕೊಡಲಾಗುತ್ತೆ. ಅಂತಿಮವಾಗಿ ಅಭ್ಯರ್ಥಿ ಆಯ್ಕೆಯನ್ನ ಕೇಂದ್ರ ನಾಯಕರಿಗೆ ಬಿಡಲು ತೀರ್ಮಾನ ಮಾಡೋ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಹೊಸ ಲುಕ್​ನಲ್ಲಿ ರಾಮಾಚಾರಿ ಚಾರು ಮಿಂಚಿಂಗ್​​; ಮೌನ ಗುಡ್ಡೆಮನೆ ಅಂದಕ್ಕೆ ಮನಸೋತ ಫ್ಯಾನ್ಸ್​

publive-image

ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಮಾಜಿ ಸಿಎಂ ಬೊಮ್ಮಾಯಿ ಅವರು ಇದ್ದಾರೆ. ಅವರ ಅಭಿಫ್ರಾಯ ಹಾಗೂ ಪಕ್ಷದ ಸಂಘಟನೆಯಲ್ಲಿ ಇರುವ ಪ್ರಮುಖರ ಅಭಿಪ್ರಾಯ ತೆಗೆದುಕೊಂಡು ಅಂತಿಮವಾಗಿ ದೆಹಲಿಗೆ ಹೋಗಿ ನಿರ್ಧಾರ ಮಾಡುತ್ತೇವೆ.

ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ನನಗೆ ನನ್ನ ಕಾರ್ಯಕರ್ತರೇ ಅಭ್ಯರ್ಥಿಗಳು. ಎನ್​ಡಿಎದಿಂದ ಅಭ್ಯರ್ಥಿ ಇರುತ್ತಾರೆ. ಈಗ ಹೆಚ್​​.ಡಿ ದೇವೇಗೌಡರ ಕುಟುಂಬ ಅಲ್ಲ, ಎನ್​ಡಿಎ ಕುಟುಂಬ ನಮ್ಮದು. ಎನ್​ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ.

ಹೆಚ್​.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ

ಹೀಗೆ ನಮ್ಮ ಎನ್‌ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ ಅಂತ ದೋಸ್ತಿ ದಿಗ್ಗಜರು ಹೇಳ್ತಿದ್ರೂ, ಈ ಕುಟುಂಬವನ್ನ ಗಟ್ಟಿ ಹಿಡಿದುಕೊಳ್ಳೋ ಸವಾಲು ಇದ್ದೇ ಇದೆ. ಈ ನಿಟ್ಟಿನಲ್ಲಿ ಇವತ್ತಿನ ಮೀಟಿಂಗ್ ತುಂಬಾ ಮಹತ್ವದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment