‘2000 ಮಹಿಳೆಯರ ಕೇಸ್.. MP ಪ್ರಜ್ವಲ್ ರೇವಣ್ಣ ಬೇರೆ ಕೆಲಸನೇ ಮಾಡಿಲ್ಲ ಹಾಗಿದ್ರೆ’- HDK ಯಾಕೆ ಹೀಗಂದ್ರು?

author-image
admin
Updated On
ಎಸ್‌ಐಟಿ ತನಿಖೆ ಬಗ್ಗೆ ಕೇಳಿ ಬರುತ್ತಿದೆ ಅಪಸ್ವರ.. ಪ್ರಜ್ವಲ್​ ರೇವಣ್ಣ ವಿಡಿಯೋ ಕೇಸ್‌ ತನಿಖೆ ಸಿಬಿಐಗೆ? 
Advertisment
  • ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ರೆ ಅವನು ತಲೆ ಬಾಗಲೇ ಬೇಕು- HDK
  • ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಪೆನ್ ಡ್ರೈವ್ ಬಿಡುಗಡೆ
  • 2000 ಅಂದ್ರೆ ಎಷ್ಟು ವರ್ಷಗಳು ಪಾಪ ಅದೇ ಕೆಲಸದಲ್ಲಿರಬೇಕು ಅವನು

ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ ಹೆಚ್‌ಡಿಕೆ ಅವರು ಎಸ್‌ಐಟಿ ತನಿಖೆಗೆ ಕೊಟ್ಟಿದ್ದೀರಿ. ತನಿಖೆ ಆಗಲಿ ನಾನು ಪ್ರಜ್ವಲ್ ರೇವಣ್ಣ ಅವರನ್ನು ವಹಿಸಿಕೊಂಡು ಬರುವುದಿಲ್ಲ. ಆದರೆ 2000 ವಿಡಿಯೋ ಅಂದ್ರೆ ಹೆಣ್ಣು ಮಕ್ಕಳ ಕುಟುಂಬಕ್ಕೆ ರಕ್ಷಣೆ ಕೊಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಕುಮಾರಸ್ವಾಮಿ, ನಾನು ಕಾಂಗ್ರೆಸ್‌ನ ಮುಖ್ಯಮಂತ್ರಿಗಳಿಗೆ ಕೇಳಲು ಬಯಸುತ್ತೇನೆ. ನೀವು ವಕೀಲರಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನೇ ಪ್ರಶ್ನೆ ಮಾಡಿದರು.
ಕಾರ್ತಿಕ್ ಎನ್ನುವ ವ್ಯಕ್ತಿ ಹೆಚ್‌.ಡಿ ರೇವಣ್ಣ ಅವರ ಮನೆಯಲ್ಲಿ ಕಾರು ಚಾಲಕ ಆಗಿದ್ದವನು. 8-10 ವರ್ಷ ಅವರ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಮನೆ ಬಿಟ್ಟು 5 ವರ್ಷ ಆಗಿದೆ. ದೂರು ಕೊಟ್ಟಿರುವ ಸಂತ್ರಸ್ತೆಯು ಕೂಡ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವರು. ಇಂದು ಡ್ರೈವರ್‌ ಕಾರ್ತಿಕ್ ಕಡೆಯಿಂದ ತರಾತುರಿಯಲ್ಲಿ ಹೇಳಿಕೆ ಕೊಡಿಸಿದ್ದಾರೆ. ಡ್ರೈವರ್ ಪೆನ್‌ಡ್ರೈವ್ ಅನ್ನು ಬಿಜೆಪಿ ನಾಯಕ ದೇವರಾಜೇಗೌಡರಿಗೆ ಕೊಟ್ಟಿದ್ದೆ ಎಂದಿದ್ದಾನೆ. ತನಿಖೆಯಲ್ಲಿ ಸತ್ಯಾಂಶ ಬಯಲಾಗಲಿ ಎಂದಿದ್ದಾರೆ.

ಇದನ್ನೂ ಓದಿ:‘ಡ್ರೈವರ್ ಪೆನ್‌ಡ್ರೈವ್‌ ಕೊಟ್ಟಿದ್ದು ಸತ್ಯ’- ಹಾಸನ ವಿಡಿಯೋ ಲೀಕ್‌ನ ಅಸಲಿ ರಹಸ್ಯ ಬಿಚ್ಚಿಟ್ಟ ದೇವರಾಜೇಗೌಡ

ಸಿದ್ದರಾಮಣ್ಣ ಅವರಿಗೆ ಹೇಳಲು ಬಯಸುತ್ತೇನೆ ಎಂದ ಕುಮಾರಸ್ವಾಮಿ, ಎಸ್‌ಐಟಿ ರಚನೆ ಮಾಡಿದ್ದೀರಿ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದಾರೆ. ಆ ಹೆಣ್ಣು ಮಕ್ಕಳು ಏನು ಅನ್ಯಾಯ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ನಾವು ವಹಿಸಿಕೊಳ್ಳುವ ಪ್ರಶ್ನೆಯಿಲ್ಲ. ಅವನು ತಪ್ಪು ಮಾಡಿದ್ರೆ ಅವನು ತಲೆ ಬಾಗಲೇ ಬೇಕು. ನಿಮ್ಮ ಎಸ್‌ಐಟಿಯಲ್ಲಿ ತನಿಖೆ ಮಾಡಿ ಎಂದು ಹೇಳಿದರು.

publive-image

ಇದೇ ವೇಳೆ 2000 ವಿಡಿಯೋಗಳನ್ನು ಯಾವ ಫ್ಯಾಕ್ಟರಿಯಲ್ಲಿ ತಯಾರು ಮಾಡಿದ್ದೀರಿ. ಪ್ರಜ್ವಲ್ ರೇವಣ್ಣ ಅವರೇ ಇದರಲ್ಲಿ ಭಾಗಿಯಾಗಿದ್ದರೆ 2000 ಅಂದ್ರೆ ಎಷ್ಟು ವರ್ಷಗಳು ಪಾಪ ಅದೇ ಕೆಲಸದಲ್ಲಿರಬೇಕು ಅವನು. ಎಂಪಿ ಆಗಿದ್ದು 5 ವರ್ಷ ಎಂಪಿ ಕೆಲಸವೇ ಮಾಡಿಲ್ಲ ಆಗಿದ್ದರೆ ಎಂದು ನಗುತ್ತಲೇ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. 2000 ಕೇಸ್ ಇದರಲ್ಲಿ ಭಾಗಿಯಾಗಿದೆ ಅಂದ್ರೆ 2000 ಹೆಣ್ಣು ಮಕ್ಕಳ ಕುಟುಂಬಕ್ಕೆ ರಕ್ಷಣೆ ಕೊಡುವವರು ಯಾರು? ಯಾವುದೇ ವ್ಯಕ್ತಿಯ ಖಾಸಗಿ ವಿಡಿಯೋಗಳು ಸಾರ್ವಜನಿಕವಾಗ ಪ್ರಕಟ ಮಾಡುವುದು ಕಾನೂನಿನಲ್ಲಿ ಅಪರಾಧ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment