/newsfirstlive-kannada/media/post_attachments/wp-content/uploads/2024/06/Revanna-Suraj.jpg)
ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾದ ಸೂರಜ್ ರೇವಣ್ಣ ಕುರಿತು ತಂದೆ ಹೆಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರ ಸೂರಜ್​ ರೇವಣ್ಣ ಪ್ರಕರಣವನ್ನು ಸಿಐಡಿಗೆ ವಹಿಸಿದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ, ಮಾಡ್ಲಿ ಬಿಡಿ ಯಾರು ಬೇಡ ಅಂದೊರು, ನನಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಕಾರಂಜಿ ಆಂಜನೇಯ ದೇವಸ್ಥಾನದ ಬಳಿ ಮಾತನಾಡಿದ ಹೆಚ್​ ಡಿ ರೇವಣ್ಣ, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿದೆ. ನನಗೆ ದೇವರ ಮೇಲೆ, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಷಡ್ಯಂತ್ರಕ್ಕೆಲ್ಲ ನಾನು ಹೆದರಿ ಹೋಗಲ್ಲ. ಯಾರು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಈಗ ಹೇಳೊಲ್ಲ, ಇದನ್ನೆಲ್ಲ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮ್ಮ ಪ್ರಜ್ವಲ್​ ಬಳಿಕ ಅಣ್ಣ ಸೂರಜ್​ ಬಂಧನ.. ರೇವಣ್ಣ ಕುಟುಂಬದ ಮೇಲಿರುವ ಆರೋಪಗಳು ಹೀಗಿವೆ
ಬಳಿಕ, ನಿನ್ನೆ ಸೂರಜ್ ಹೇಳಿಲ್ವಾ, ಏನೇನು ನಡೆದಿದೆ ಎಂದು. ನಮ್ಮ ಕಡೆಯವರು ದೂರು ಕೊಡಲು ಹೋಗಿದ್ದು ನನಗೆ ಗೊತ್ತಿಲ್ಲ. ಕಾಲ ಬಂದಾಗ ಎಲ್ಲ ಹೇಳ್ತೀನಿ. ಆ ಸಮಯ ಬರಲಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us