Advertisment

ಮಹಿಳೆ ಅಪಹರಣ ಆರೋಪ ಕೇಸ್​ನಲ್ಲಿ ಬಂಧನದ ಭೀತಿ.. ಕೋರ್ಟ್​ನಲ್ಲಿ ರೇವಣ್ಣ ಪರ ವಕೀಲರ ವಾದ ಏನು?

author-image
Ganesh
Updated On
ಪ್ರಜ್ವಲ್ ಫಾರಿನ್​​ಗೆ ಹೋಗಬೇಕಾಗಿತ್ತು ಹೋಗಿದ್ದಾನೆ, ಇವರೇನು FIR ಹಾಕ್ತಾರೆಂದು ಗೊತ್ತಿತ್ತಾ? -ರೇವಣ್ಣ
Advertisment
  • ಎಸ್​ಪಿಪಿ ಜಗದೀಶ್​​ ಆಕ್ಷೇಪಣೆಗೆ ಕಾಲಾವಕಾಶ ಕೇಳಿದ ಹಿನ್ನೆಲೆ
  • ವಿಚಾರಣೆ ಮುಂದೂಡಿಕೆ, ಮಧ್ಯಾಹ್ನ 2.45ಕ್ಕೆ ಮತ್ತೆ ಅರ್ಜಿ ವಿಚಾರಣೆ
  • ಎಸ್​​ಪಿಪಿ ಕೋರ್ಟ್​ಗೆ ಹೇಳಿದ್ದೇನು? ಏನಿದು ಕೇಸ್​..?

ಬೆಂಗಳೂರು: ಕೆ.ಆರ್​.ನಗರ ಮಹಿಳೆಯ ಕಿಡ್ನಾಪ್ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ. ಬಂಧನದ ಭೀತಿ ಎದುರಿಸುತ್ತಿರುವ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

Advertisment

ನಿನ್ನೆ ವಿಚಾರಣೆ ನಡೆಸಿದ್ದ ಕೋರ್ಟ್ ಇವತ್ತು ಬೆಳಗ್ಗೆ 11 ಗಂಟೆಗೆ ಮತ್ತೆ ವಿಚಾರಣೆ ಆರಂಭಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಾಹ್ನ 2.45ಕ್ಕೆ ಮತ್ತೆ ಕಲಾಪ ನಡೆಸೋದಾಗಿ ಹೇಳಿದೆ. ಈ ವೇಳೆ ರೇವಣ್ಣ ಪರ ಸಿನಿಯರ್ ಕೌನ್ಸಿಲ್ ಮೂರ್ತಿ ಡಿ ನಾಯ್ಕ್ ಹಾಜರಿದ್ದರು. ಸರ್ಕಾರದ ಪರ SPP ಬಿ.ಎನ್.ಜಗದೀಶ್ ಕೂಡ ವಾದ ಮಂಡಿಸಿದರು.

ಇದನ್ನೂ ಓದಿ:ಆರ್​ಸಿಬಿಗೆ ತನ್ನದೇ ಆಟಗಾರ ವಿಲನ್.. ಕಪ್ ಗೆಲುವಿನ ಕನಸಿಗೆ ಮುಳುವಾದ RCB ಹೀರೋ..!

publive-image

ರೇವಣ್ಣ ಪರ ವಾದ ಏನು..?
ವಿಚಾರಣೆ ಆರಂಭ ಆಗುತ್ತಿದ್ದಂತೆಯೇ ಎಸ್​ಪಿಪಿ ಜಗದೀಶ್​​ ಆಕ್ಷೇಪಣೆಗೆ ಕಾಲಾವಕಾಶ ನೀಡುವಂತೆ ಕೇಳಿಕೊಂಡರು. ಅದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪ ಸಲ್ಲಿಸಿದರು. ಇಂದು ಸಂಜೆ ಐದು ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕು. ನನಗೆ ನಿರೀಕ್ಷಣಾ ಜಾಮೀನು ಬೇಕಿದೆ ಸ್ವಾಮಿ. ಇನ್ನು ಕೆ.ಆರ್​ ನಗರ ಕೇಸ್​ನಲ್ಲಿ ಏ-2 ಬಂಧನವಾಗಿದೆ. ಈಗ ವಿಚಾರಣೆಗೆ ಹಾಜರಾಗಲು ನನಗೆ ರಕ್ಷಣೆ ಬೇಕು ಎಂದು ರೇವಣ್ಣ ಪರ ವಕೀಲರು ಕೋರ್ಟ್​ಗೆ ಮನವಿ ಮಾಡಿಕೊಂಡರು. ಇನ್ನು, ನಿನ್ನೆಯೂ ಕೂಡ ರೇವಣ್ಣ ಪರ ವಕೀಲರು ಜಾಮೀನು ನೀಡುವಂತೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದರು.

Advertisment

ಕೆ.ಆರ್.ನಗರ ಠಾಣೆಯ FIRನಲ್ಲಿ ಜಾಮೀನು ರಹಿತ ಸೆಕ್ಷನ್​ಗಳಿವೆ. ಮುಖ್ಯವಾಗಿ 364 A ಅಪಹರಣ, 364 ಅಕ್ರಮ ಬಂಧನ ಜಾಮೀನು ರಹಿತ ಸೆಕ್ಷನ್​​ ಆಗಿದೆ. ದೂರಿನಲ್ಲಿ ಮಹಿಳೆ ಹೆಸರನ್ನೇ ಉಲ್ಲೇಖಿಸಿಲ್ಲ ಎಂದು ರೇವಣ್ಣ ಪರ ವಕೀಲರು ವಾದಿಸಿದ್ದಾರೆ. ಅಲ್ಲದೇ, ಎಸ್ಐಟಿಯ ಮುಂದೆ ಹಾಜರಾಗಲು ಹೆಚ್.ಡಿ.ರೇವಣ್ಣ ಸಿದ್ಧರಿದ್ದಾರೆ. ಹೀಗಾಗಿ ಈ ಕೇಸ್​​​ನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ

publive-image

ಎಸ್​ಪಿಪಿ ವಾದ ಏನು..?
ಕೆ.ಆರ್​.ನಗರ ಕೇಸ್​ ಸಂಬಂಧ ದಾಖಲೆಗಳು ಬರಬೇಕಿದೆ. ಓರ್ವ ಆರೋಪಿಯ ಬಂಧನ ಆಗಿದೆ. ಆತನ ಹೇಳಿಕೆಯಲ್ಲಿ ಆರೋಪಿಯ ಹೆಸರಿದೆ. ಆ ದಾಖಲೆಯನ್ನು ಪಡೆದು ಆಕ್ಷೇಪಣೆ ಸಲ್ಲಿಸಬೇಕಿದೆ. ಹೀಗಾಗಿ ಸಮಯದ ಅಗತ್ಯ ಇದೆ ಎಂದು ಕೋರ್ಟ್​ನಲ್ಲಿ ಜಗದೀಶ್ ವಾದ ಮಂಡಿಸಿದರು. ನಂತರ ಕೋರ್ಟ್, ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸೋದಾಗಿ ತಿಳಿಸಿತು. ಆಗ ಮಧ್ಹಾಹ್ನ ಆಕ್ಷೇಪಣೆ ಸಲ್ಲಿಸಿ ವಾದ ಮಾಡಲಾಗುವುದು ಎಂದು ಎಸ್​ಪಿಪಿ ಕೋರ್ಟ್​ಗೆ ತಿಳಿಸಿದರು.

Advertisment

ಏನಿದು ಕೇಸ್​..?
ಈಗಾಗಲೇ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಎದುರಿಸುತ್ತಿರುವ ರೇವಣ್ಣ ವಿರುದ್ಧ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ. ಮಹಿಳೆಯೋರ್ವರನ್ನು ಅಪಹರಿಸಿದ ಆರೋಪ ರೇವಣ್ಣ ಮೇಲಿದೆ. ಈ ಸಂಬಂಧ ಸಂತ್ರಸ್ತೆಯ ಮಗ ನನ್ನ ತಾಯಿ ಕಾಣೆಯಾಗಿದ್ದಾರೆಂದು ಕೆ.ಆರ್.ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಅಶ್ಲೀಲ ವಿಡಿಯೋ ಬೆಳಕಿಗೆ ಬಂದ ಬಳಿಕ ತಾಯಿ ನಾಪತ್ತೆಯಾಗಿದ್ದಾರೆ. ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದೆ ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು

publive-image

ದೂರಿನಲ್ಲಿ ಏನಿದೆ..?
ಏಪ್ರಿಲ್ 29ರಂದು ರಾತ್ರಿ 9 ಗಂಟೆಗೆ ತಾಯಿಯ ಅಪಹರಣವಾಗಿದೆ. ಎ2 ಆರೋಪಿ ಸತೀಶ್ ತಾಯಿಯನ್ನು ಕರೆದುಕೊಂಡು ಹೋದರು. ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಒತ್ತಾಯ ಮಾಡಿ ಕರೆದುಕೊಂಡು ಹೋದರು. ಸತೀಶ್ ಹಿರೋಹೊಂಡ ಸ್ಪೈಂಡರ್ ಬೈಕ್ ನಲ್ಲಿ ಕರೆದೊಯ್ದರು‌. ನನ್ನ ತಾಯಿಯನ್ನ ಎಲ್ಲಿಗೆ ಕರೆದೊಯ್ದರು ಗೊತ್ತಿಲ್ಲ. ಮೇ. 1 ರಂದು ಗೆಳೆಯರ ಮೂಲಕ ಅಶ್ಲೀಲ ವಿಡಿಯೋ ಬಂತು. ನಿನ್ನ ಅಮ್ಮ ಕಾಲು ಕಟ್ಟಿದರು, ಪ್ರಜ್ವಲ್ ಬಲತ್ಕಾರ ಮಾಡಿದ್ದಾರೆ ಎಂದು ಗೆಳೆಯರು ತಿಳಿಸಿದರು. ಈ ಸಂಬಂಧ ದೊಡ್ಡ ಕೇಸ್ ಆಗಿದೆ ಎಂದು ಗೆಳೆಯರೇ ಮಾಹಿತಿ ನೀಡಿದರು. ನನ್ನ ತಾಯಿಯನ್ನ ಕೂಡಿಹಾಕಿದ್ದಾರೆ. ಆ ಸಂದರ್ಭದಲ್ಲಿ ನನ್ನ ತಾಯಿಯನ್ನು ವಾಪಸ್ ಕರೆತರಲು ಸತೀಶ್​ಗೆ ಹೇಳಿದೆ. ಆದರೆ ಹಲ್ಲೆ ಪ್ರಕರಣದಲ್ಲಿ ನಿಮ್ಮ ತಾಯಿ ಆರೋಪಿ ಅಂತಾ ಸುಳ್ಳು ಹೇಳಿದ್ರು‌. ನನ್ನ ತಾಯಿಯನ್ನ ಒತ್ತಾಯಪೂರ್ವಕವಾಗಿ ಕೂಡಿಹಾಕಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾನೆ. ಸದ್ಯ ಪ್ರಕರಣದಲ್ಲಿ A1 ಆರೋಪಿ ರೇವಣ್ಣ ಮತ್ತು A2 ಆರೋಪಿ ಸತೀಶ್ ಬಾಬು ವಿರುದ್ಧ ಸೆಕ್ಷನ್ 364(A) ,365, ಹಾಗು 34 ಅಡಿ ಪ್ರಕರಣ ದಾಖಲಾಗಿದೆ.

Advertisment

ಇದನ್ನೂ ಓದಿ:ಹವಾಮಾನ ಇಲಾಖೆಯಿಂದ RCB ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್​.. ಆತಂಕ ಶುರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment