/newsfirstlive-kannada/media/post_attachments/wp-content/uploads/2024/04/HD_REVANNA.jpg)
ಹಾಸನ ಅಶ್ಲೀಲ ವಿಡಿಯೋ ಹರಿದಾಟ ಪ್ರಕಣಕ್ಕೆ ಸಂಬಂಧ ಪಟ್ಟಂತೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಹೆಚ್.​ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ವಿರುದ್ಧ ದೂರು ದಾಖಲಾಗಿದೆ. ಬಂಧನ ಭೀತಿಯಲ್ಲಿರುವ ರೇವಣ್ಣ ನಿನ್ನೆ ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅಲ್ಲದೇ ಎಸ್ಐಟಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಇಂದಿಗೆ ಅರ್ಜಿ ವಿಚಾರಣೆ ಮುಂದೂಡಿದೆ. ಅರ್ಜಿದಾರರ ವಿರುದ್ಧ ದಾಖಲಾಗಿರುವ ಕೇಸ್ ಬೆಲಬಲ್ ಆಗಿದ್ದು, ತನಿಖಾ ಸಂಸ್ಥೆ 376 ಸೇರಿಸಲು ಸಹ ಮನವಿ ಮಾಡ್ತಿರೋ ಕಾರಣ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿದೆ. ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನ ಸಹ ನೇಮಿಸಲಾಗಿದೆ.
ಇಂದು ನಿರೀಕ್ಷಣಾ ಜಾಮೀನು​ ಸಿಗದಿದ್ರೆ ರೇವಣ್ಣಗೆ ಬಂಧನ ಭೀತಿ!
ಇಂದು ಹೊಳೆನರಸೀಪುರ ಜೆಎಂಎಫ್​ಸಿ ನ್ಯಾಯಾಲಯ ಹಾಗೂ ಬೆಂಗಳೂರು ಜನಪ್ರತಿನಿಧಿ ನ್ಯಾಯಾಲಯದ ತೀರ್ಪಿನ ಮೇಲೆ ರೇವಣ್ಣ ಹಾಗೂ ಪ್ರಜ್ವಲ್​ರ ಭವಿಷ್ಯ ತೀರ್ಮಾನವಾಗಲಿದೆ. ಹೊಳೆನರಸೀಪುರ ಜೆಎಂಎಫ್​ಸಿ 376 ಸೇರಿಸಲು ಅನುಮತಿ ನೀಡಿದ್ರೆ ಇಬ್ಬರಿಗೆ ಬೇಲ್ ಸಿಗೋದು ಬಹುತೇಕ ಕಷ್ಟ ಎನ್ನಲಾಗ್ತಿದೆ. ಯಾಕೆಂದರೆ 376 ನಾನ್ ಬೆಲಬಲ್ ಸೆಕ್ಷನ್ ಆಗಿರೋ ಕಾರಣ ಬೇಲ್ ಸಿಗೋದು ಬಹುತೇಕ ಡೌಟ್​ ಎನ್ನಲಾಗ್ತಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಸಿಗದಿದ್ರೆ ರೇವಣ್ಣ ಹಾಗೂ ಪ್ರಜ್ವಲ್​ಗೆ ಬಂಧನದ ಭೀತಿ ಶುರುವಾಗಲಿದೆ.. ಒಂದು ವೇಳೆ ಬೇಲ್ ಸಿಗದಿದ್ರೆ ರೇವಣ್ಣ ಮುಂದಿರೋ ಅವಕಾಶಗಳೇನು ಅನ್ನೋ ವಿವರ ಈ ಕೆಳಗೆ ಇದೆ.
ರೇವಣ್ಣ ಮುಂದಿನ ಆಪ್ಷನ್​​!
ಇಂದು ರೇವಣ್ಣಗೆ ಬೇಲ್ ಸಿಗದಿದ್ರೆ ಹೊಳೆನರಸೀಪುರ ಜೆಎಂಎಫ್​ಸಿ ನ್ಯಾಯಾಲಯ ಹಾಗೂ ಬೆಂಗಳೂರು ಜನಪ್ರತಿನಿಧಿ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಬಹುದು.. ಹೈಕೋರ್ಟ್​ಗೂ ಜಾಮೀನು ಅರ್ಜಿ ಸಲ್ಲಿಸಬಹುದಾದ ಅವಕಾಶ ರೇವಣ್ಣಗಿದೆ.. ಅಲ್ಲದೇ ಪ್ರಕರಣ ರದ್ದು ಕೋರಿಯೂ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ನಲ್ಲಿ ಅಶ್ಲೀಲ ವಿಡಿಯೋ ಪ್ರಕಣದ ಕುಣಿಕೆಯಲ್ಲಿ ಸಿಲುಕಿರೋ ರೇವಣ್ಣಗೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ. ಸಿಕ್ಕಿದ್ರೆ ಬೇಲ್ ಇಲ್ಲಾಂದ್ರೆ ಜೈಲ್ ಅನ್ನೋ ಭಯವೂ ಇದೆ.. ಪ್ರಕರಣ ಸಂಬಂಧ ಎರಡೂ ಕೋರ್ಟ್​ಗಳು ನೀಡುವ ಆದೇಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬೇಲ್​ ಪಡೆದು ರೇವಣ್ಣ ಸೇಫ್​ ಆಗ್ತಾರಾ ಅಥವಾ ಎಸ್​ಐಟಿ ತಂಡದ ಅತಿಥಿಯಾಗ್ತಾರಾ ಅನ್ನೋ ಪ್ರಶ್ನೆಗೆ ಕೆಲವೇ ಕ್ಷಣದಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us