newsfirstkannada.com

ಜಾಮೀನು ಸಿಕ್ಕರೂ ರಾತ್ರಿ ಜೈಲಲ್ಲೇ ಕಳೆದ ರೇವಣ್ಣ.. ಕೋರ್ಟ್​ ವಿಧಿಸಿದ ಷರತ್ತುಗಳು ಏನೇನು..?

Share :

Published May 14, 2024 at 8:08am

    ಕಿಡ್ನ್ಯಾಪ್​ ಕೇಸ್​ನಲ್ಲಿ ಹೆಚ್.​ಡಿ.ರೇವಣ್ಣಗೆ ಜಾಮೀನು

    ಇವತ್ತು ಜೈಲಿನಿಂದ ಜೆಡಿಎಸ್ ಮಾಜಿ ಸಚಿವ ರಿಲೀಸ್‌

    ಮಹಿಳೆ ಅಪಹರಣ ಆರೋಪ ಹೊತ್ತು ಜೈಲು ಸೇರಿದ್ದರು

ಮಹಿಳೆ ಅಪಹರಣ ಆರೋಪ ಹೊತ್ತು ಜೈಲು ಸೇರಿದ್ದ ಮಾಜಿ ಸಚಿವ ಹೆಚ್‌.ಡಿ. ರೇವಣ್ಣಗೆ ಬಿಗ್​ ರಿಲೀಫ್​ ಸಿಕ್ಕಿದೆ. ಕಳೆದ ಐದು ದಿನಗಳಿಂದ ಜೈಲಿನಲ್ಲಿದ್ದ ರೇವಣ್ಣಗೆ ಜಾಮೀನು ಮಂಜೂರು ಆಗಿದೆ. ರೇವಣ್ಣಗೆ ಜಾಮೀನು ಸಿಕ್ತಿದ್ದಂತೆ ರೇವಣ್ಣ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಜೊತೆಗೆ ಇವತ್ತು ದಳ ನಾಯಕನ ಸೆರೆವಾಸಕ್ಕೆ ಮುಕ್ತಿ ಸಿಗಲಿದೆ. ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ, ಜಾಮೀನು ಮಂಜೂರು ಮಾಡಿದೆ. ಇದರಿಂದ ಕಳೆದ ಐದು ದಿನಗಳಿಂದ ಜೈಲಿನಲ್ಲಿರುವ ರೇವಣ್ಣಗೆ ಬಿಗ್​ ರಿಲೀಫ್​ ಸಿಕ್ಕಿದೆ.

ಹೊಳೆನರಸೀಪುರದ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಎಸ್​ಐಟಿ ಅಧಿಕಾರಿಗಳು ಮಾಜಿ ಸಚಿವ ರೇವಣ್ಣರನ್ನು ಅರೆಸ್ಟ್​ ಮಾಡಿದ್ರು. ಬಳಿಕ ನಡೆದ ತನಿಖೆ ಮತ್ತು ವಿಚಾರಣೆಯಲ್ಲಿ ಅವರನ್ನು 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇವತ್ತು ನಡೆದ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್​ ಗಜಾನನ ಭಟ್​, ಜಾಮೀನು ಅರ್ಜಿಯನ್ನು ಪುರಸ್ಕರಿಸಿ, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಇದನ್ನೂ ಓದಿ:Rain: ಮಂಡ್ಯದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದು ಭಾರೀ ಅನಾಹುತ..

ರೇವಣ್ಣಗೆ ಜಾಮೀನು

  • ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ತಾಕೀತು
  • ದೇಶ ಬಿಟ್ಟು ಹೋಗದಂತೆ ರೇವಣ್ಣಗೆ ಸೂಚನೆ
  • ಪರ್ಸನಲ್ ಬಾಂಡ್ ಶ್ಯೂರಿಟಿ ನೀಡಲು ಸೂಚನೆ
  • ಇಬ್ಬರ ಶ್ಯೂರಿಟಿ ಹಾಗೂ 5 ಲಕ್ಷ ಬಾಂಡ್ ನೀಡಬೇಕು

ಷರತ್ತುಬದ್ಧ ಜಾಮೀನು ಸಿಕ್ಕಿದ್ರೂ ನಿನ್ನೆ ರಾತ್ರಿ ಕೂಡ ರೇವಣ್ಣ ಜೈಲಿನಲ್ಲೇ ಕಾಲಕಳೆದಿದ್ದಾರೆ. ಯಾಕಂದ್ರೆ ಜೈಲು ಅಧಿಕಾರಿಗಳ ಕೈಗೆ ಆದೇಶದ​ ಕಾಪಿ ಸಿಕ್ಕಿರಲಿಲ್ಲ. ಜೊತೆಗೆ ಜೈಲು ಸಮಯ ಮುಗಿದ ಕಾರಣ ಜೆಡಿಎಸ್ ನಾಯಕ ಇವತ್ತು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಹೆಚ್​ಡಿ ರೇವಣ್ಣಗೆ ಷರತ್ತು ಬದ್ಧ ಜಾಮೀನು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಅತ್ತ ಹೊಳೆನರಸೀಪುರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ರೇವಣ್ಣ ಪರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್​ಸಿಬಿ ಪ್ಲೇ ಆಫ್​ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?

ಪರಪ್ಪನ ಅಗ್ರಹಾರ ಜೈಲು ಮುಂದೆಯೂ ರೇವಣ್ಣ ಪರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.. ಒಟ್ಟಾರೆ, ಕಿಡ್ನಾಪ್ ಕಳಂಕದಿಂದ ರೇವಣ್ಣಗೆ ಸದ್ಯಕ್ಕೆ ಮುಕ್ತಿ ಸಿಕ್ಕಿದೆ.. ಆದ್ರೆ ಪ್ರಕರಣದ ತನಿಖೆಯನ್ನ ಎಸ್‌ಐಟಿ ನಡೆಸುತ್ತಿದೆ.. ಮುಂದೆ ಕಿಡ್ನ್ಯಾಪ್‌ ಕೇಸ್‌ಗೆ ಅದ್ಯಾವ ಟ್ವಿಸ್ಟ್‌ ಸಿಗುತ್ತೋ ಕಾದು ನೋಡಬೇಕಿದೆ..

ವಿಶೇಷ ವರದಿ: ವಿಷ್ಣುಪ್ರಸಾದ್​ ನ್ಯೂಸ್​ಫಸ್ಟ್​ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾಮೀನು ಸಿಕ್ಕರೂ ರಾತ್ರಿ ಜೈಲಲ್ಲೇ ಕಳೆದ ರೇವಣ್ಣ.. ಕೋರ್ಟ್​ ವಿಧಿಸಿದ ಷರತ್ತುಗಳು ಏನೇನು..?

https://newsfirstlive.com/wp-content/uploads/2024/05/REVANNA-4.jpg

Load More