newsfirstkannada.com

ರೇವಣ್ಣ ನಿವಾಸಕ್ಕೆ 2 ಜೀಪಿನಲ್ಲಿ ಸಂತ್ರಸ್ತರ ಕರ್ಕೊಂಡು ಬಂದ SIT; ಮುಂದೇನಾಯ್ತು..?

Share :

Published May 11, 2024 at 8:20am

    ಕಿಡ್ನಾಪ್ ಕೇಸ್​​ನಲ್ಲಿ ಬಂಧಿ.. ಜೈಲಿನಲ್ಲಿ ರೇವಣ್ಣ ಮೌನಿ

    ಜಾಮೀನಿಗಾಗಿ ನಿರೀಕ್ಷೆಯಲ್ಲಿ ಜೆಡಿಎಸ್‌ ಮಾಜಿ ಸಚಿವ

    4 ದಿನಗಳಿಂದ ಸೆರೆವಾಸ ಅನುಭವಿಸುತ್ತಿರೋ ಹೆಚ್‌.ಡಿ. ರೇವಣ್ಣ

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯ ಅಪಹರಣ ಆರೋಪ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಜೈಲು ಸೇರಿದ್ದಾರೆ. ಬೇಲ್ ಸಿಗದ ಕಾರಣ ಕೋರ್ಟ್​ ಆವರಣದಲ್ಲೇ ಕಣ್ಣೀರಿಟ್ಟಿದ್ದ ರೇವಣ್ಣ ಜೈಲಿನಲ್ಲೂ ಚಡಪಡಿಸಿದ್ದಾರೆ. ಜಾಮೀನು ಯಾವಾಗ ಸಿಗುತ್ತೆ ಅಂತ ಚಿಂತೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆ ರೇವಣ್ಣರ ಮನೆಯಲ್ಲಿ ಸಂತ್ರಸ್ತೆಯರಿಂದ ಮತ್ತೊಮ್ಮೆ ಸ್ಥಳ ಮಹಜರು ನಡೆದಿದೆ.
ಜೈಲಿನಲ್ಲಿ ರೇವಣ್ಣ ಮೌನಿ!

ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್​ ಕೇಸ್​​​ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮೊನ್ನೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರೇವಣ್ಣಗೆ ಕೋರ್ಟ್ ನಿರಾಸೆ ಉಂಟು ಮಾಡಿದೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಬಂಧ ಮುಕ್ತ ಆಗೋವರೆಗೂ ರೇವಣ್ಣ ಸೆರೆವಾಸ ಮುಂದುವರಿದಿದೆ. ಒಂದ್ಕಡೆ ಪುತ್ರ ವಿದೇಶದಲ್ಲಿದ್ದಾನೆ. ಮತ್ತೊಂದೆಡೆ ಜಾಮೀನು ಸಿಗದ ಕಾರಣ ರೇವಣ್ಣ ಮತ್ತಷ್ಟು ಮಂಕಾಗಿದ್ದಾರೆ. ಜಾಮೀನು ಸಿಕ್ಕು ಯಾವಾಗ ಜೈಲಿನಿಂದ ಮುಕ್ತಿ ಸಿಗುತ್ತೋ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

ಕಳೆದ 4 ದಿನಗಳಿಂದ ಹೆಚ್‌.ಡಿ. ರೇವಣ್ಣ ಸೆರೆವಾಸ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ. ಮೇ 14ರವರೆಗೆ ನ್ಯಾಯಾಂಗ ಬಂಧನ ಆದೇಶದಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಲ್ಲಿ ನಿನ್ನೆಯೂ ಜೈಲು ಅಧಿಕಾರಿಗಳು ಕೊಟ್ಟ ಊಟವನ್ನೇ ರೇವಣ್ಣ ಸೇವಿಸಿದ್ದಾರೆ. ಮೇ 13ರಂದು ಕೋರ್ಟ್​ನಿಂದ ಜಾಮೀನು ಸಿಗುತ್ತೆ ಎಂಬ ಯೋಚನೆಯಲ್ಲಿ ರೇವಣ್ಣ ಕಾಲಕಳೆಯುತ್ತಿದ್ದಾರೆ.. ಒಂದ್ವೇಳೆ ಬೇಲ್ ಸಿಕ್ರೇ ಸೋಮವಾರ ಜೈಲಿನಿಂದ ಹೆಚ್‌್.ಡಿ ರೇವಣ್ಣ ರಿಲೀಸ್ ಆಗಲಿದ್ದಾರೆ. ಜಾಮೀನು ಸಿಗದೇ ಹೋದರೆ ಮೇ 14ರವರೆಗೆ ಜೈಲುವಾಸ ಫಿಕ್ಸ್‌ ಆಗಿದೆ.

ಹೆಚ್‌.ಡಿ. ರೇವಣ್ಣ ನಿವಾಸದಲ್ಲಿ ಎರಡನೇ ಬಾರಿ ಮಹಜರು
ಬೆಂಗಳೂರಿನಲ್ಲಿರೋ ಮಾಜಿ ಸಚಿವ ರೇವಣ್ಣ ನಿವಾಸದಲ್ಲಿ ಎರಡನೇ ಬಾರಿಗೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಎರಡು ಜೀಪಿನಲ್ಲಿ ಸಂತ್ರಸ್ತೆಯರನ್ನ ಕರೆತಂದ ಅಧಿಕಾರಿಗಲು ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ವಿಡಿಯೋಗ್ರಫಿ ಮೂಲಕ ಸಂತ್ರಸ್ತೆಯ ಹೇಳಿಕೆಗಳನ್ನ ದಾಖಲಿಸಿದ್ದಾರೆ. ಮನೆಯ ಹಾಲ್, ಪಾರ್ಕಿಂಗ್, ಅಡುಗೆ ಮನೆ, ಬಾಲ್ಕನಿ, ಸೇರಿ ಹಲವು ಕಡೆ ಮಹಜರು ಮಾಡಿದ್ದು, ಫೋಟೋ ಎವಿಡೆನ್ಸ್ ಕೂಡಾ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

ಒಟ್ಟಾರೆ, ಐಷಾರಾಮಿ ಜೀವನ ಕಳೆದಿರೋ ರೇವಣ್ಣ ಇದೀಗ ಕತ್ತಲಕೋಣೆಯಲ್ಲಿ ದಿನಕಳೆಯುವಂತಾಗಿದೆ.. ಮಗ ಮಾಡಿದ ತಪ್ಪಿಗೂ ತಮಗೂ ಸಂಕಷ್ಟ ಬಂದೊದಗಿದೆ.. ಇದೀಗ ರೇವಣ್ಣಗೆ ಮುಂದಿನ ವಿಚಾರಣೆಯಲ್ಲಿ ಜೈಲಾ? ಅಥವಾ ಜಾಮೀನಾ? ಅನ್ನೋದೆ ಬಿಗ್ ಸಸ್ಪೆನ್ಸ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣ ನಿವಾಸಕ್ಕೆ 2 ಜೀಪಿನಲ್ಲಿ ಸಂತ್ರಸ್ತರ ಕರ್ಕೊಂಡು ಬಂದ SIT; ಮುಂದೇನಾಯ್ತು..?

https://newsfirstlive.com/wp-content/uploads/2024/05/REVANNA-4-1.jpg

Load More