Advertisment

ವಿಚಾರಣಾಧೀನ ಕೈದಿ ನಂಬರ್​ 4567; ನಿನ್ನೆ ರಾತ್ರಿ ರೇವಣ್ಣರ ಜೈಲಿನ ದಿನಚರಿ ಹೇಗಿತ್ತು..?

author-image
Ganesh
Updated On
ವಿಚಾರಣಾಧೀನ ಕೈದಿ ನಂಬರ್​ 4567; ನಿನ್ನೆ ರಾತ್ರಿ ರೇವಣ್ಣರ ಜೈಲಿನ ದಿನಚರಿ ಹೇಗಿತ್ತು..?
Advertisment
  • ಕಿಡ್ನ್ಯಾಪ್ ಕೇಸ್​ನಲ್ಲಿ ಮಾಜಿ ಸಚಿವ ರೇವಣ್ಣಗೆ ಸೆರೆವಾಸ
  • 7 ದಿನಗಳ ಕಾಲ ನ್ಯಾಯಾಂಗ ಬಂಧನ ಹಿನ್ನೆಲೆ ಜೈಲು ವಾಸ
  • ಕ್ವಾರೆಂಟೈನ್ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿರೋ ರೇವಣ್ಣ

ಮಹಿಳೆಯ ಅಪಹರಣ ಪ್ರಕರಣದಲ್ಲಿ ಹೊಳೆನರಸೀಪುರ ಶಾಸಕ ಹೆಚ್​.ಡಿ.ರೇವಣ್ಣ ಜೈಲುವಾಸಕ್ಕೆ ಗುರಿಯಾಗಿದ್ದಾರೆ. ಎಸ್​ಐಟಿ ಕಸ್ಟಡಿ ಅಂತ್ಯದ ಬೆನ್ನಲ್ಲೇ ರೇವಣ್ಣಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದರ ಬೆನ್ನಲ್ಲೇ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಜೆಡಿಎಸ್‌ ಮಾಜಿ ಸಚಿವ ಸಾಮಾನ್ಯ ಕೈದಿಯಂತೆ ನಂಬರ್ ಪಡೆದು ಇಡೀ ರಾತ್ರಿಯನ್ನ ಜೈಲಿನಲ್ಲಿ ಕಳೆದಿದ್ದಾರೆ.

Advertisment

ಪುತ್ರ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ತಂದೆ ಹೆಚ್​.ಡಿ.ರೇವಣ್ಣಗೂ ಮುಳುವಾಗಿದೆ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಮಹಿಳೆ ಅಪಹರಣ ಆರೋಪ ಕೇಸ್ ದಾಖಲಾಗಿದ್ದು ಸಂಕಷ್ಟಗಳ ಸರಮಾಲೆಯೇ ಸುತ್ತಿಕೊಂಡಿದೆ.

publive-image

ಕಿಡ್ನ್ಯಾಪ್ ಕೇಸ್​ನಲ್ಲಿ ಮಾಜಿ ಸಚಿವ ರೇವಣ್ಣಗೆ ಸೆರೆವಾಸ
ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ಅಪಹರಣದ ಕೇಸ್ ದಾಖಲಾಗಿತ್ತು. ಹೊಳೆನರಸೀಪುರದಲ್ಲಿ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್​.ಡಿ.ರೇವಣ್ಣ ಮೊದಲೇ ಆರೋಪಿಯಾಗಿದ್ದಾರೆ. ಇನ್ನು ಕೆ.ಆರ್​.ನಗರ ಠಾಣೆಯಲ್ಲಿ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದ್ದು ಮೊದಲನೇ ಆರೋಪಿಯಾಗಿದ್ದಾರೆ. ಕಳೆದ ಮೇ 4ರಂದು ಜನಪ್ರತಿನಿಧಿಗಳ ಕೋರ್ಟ್ ರೇವಣ್ಣ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಎಸ್​ಐಟಿ ಕಸ್ಟಡಿಗೆ ವಹಿಸಿತ್ತು. ಈ ನಡುವೆ ಕಿಡ್ನಾಪ್ ಕೇಸ್​​ ವಿಚಾರಣೆ ನಡೆಸಿದ 17ನೇ ಎಸಿಎಂಎಂ ನ್ಯಾಯಾಲಯ​​​ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಬೆನ್ನಲ್ಲೇ ಹೆಚ್‌.ಡಿ. ರೇವಣ್ಣರನ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ:ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದ್ವೆ, ಹೈಡ್ರಾಮಾ.. ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾರ್ಜ್..!\

Advertisment

publive-image

ರೇವಣ್ಣಗೆ ಸೆರೆವಾಸ

  • ಕಿಡ್ನ್ಯಾಪ್ ಕೇಸ್​ನಲ್ಲಿ ಮಾಜಿ ಸಚಿವ ರೇವಣ್ಣಗೆ ಸೆರೆವಾಸ
  • 7 ದಿನಗಳ ಕಾಲ ನ್ಯಾಯಾಂಗ ಬಂಧನ ಹಿನ್ನೆಲೆ ಜೈಲು ವಾಸ
  • ಪರಪ್ಪನ ಅಗ್ರಹಾರದಲ್ಲಿ ರೇವಣ್ಣಗೆ ಸಿಕ್ತು ‘4567’ ನಂಬರ್​
  • ಯುಟಿಪಿ ನಂಬರ್ ‘4567’ ನೀಡಿದ ಜೈಲು ಅಧಿಕಾರಿಗಳು
  • ಕ್ವಾರೆಂಟೈನ್ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿರೋ ರೇವಣ್ಣ

ರಾತ್ರಿ ಜೈಲಿನಲ್ಲಿ ಊಟ ಮಾಡಲು ರೇವಣ್ಣ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ಕೊಡುವ ಊಟ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ರು ಅಂತ ತಿಳಿದುಬಂದಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

Advertisment

publive-image

ರೇವಣ್ಣಗೆ ಜೈಲೂಟ!
ಮನೆಯವರು ತಂದು ಕೊಟ್ಟ ಬಟ್ಟೆಯನ್ನ ಪಡೆದಿರೋ ರೇವಣ್ಣ ಅದನ್ನೇ ಧರಿಸಿ ರಾತ್ರಿ ಕಳೆದಿದ್ದಾರೆ. ಆದ್ರೆ, ಜೈಲಿನಲ್ಲಿ ರೇವಣ್ಣಗೆ ಜೈಲೂಟವನ್ನೇ ಕೊಡಲಾಗಿತ್ತು.. ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ರೈಸ್ ಸಾಂಬಾರ್ ನೀಡಲಾಗಿತ್ತು.. ಊಟ ನೀಡಿದ ಮೇಲೆ ಊಟವನ್ನ ಮಾಡದೇ ರೇವಣ್ಣ ಸೈಲೆಂಟ್ ಆಗಿದ್ರಂತೆ. ಕೈದಿಗಳಿಗೆ ನೀಡುವ ಊಟವನ್ನೇ ನೀಡಿದ್ದಕ್ಕೆ ಬೇಸರಗೊಂಡಿದ್ರು ಅಂತ ತಿಳಿದುಬಂದಿದೆ.. ರಾಜಕಾರಣಿಯಾಗಿ ರೇವಣ್ಣ ಐಷಾರಾಮಿ ಜೀವನ ನಡೆಸಿದವರು. ಆದ್ರೀಗ ಕಿಡ್ನ್ಯಾಪ್​ ಪ್ರಕರಣದಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಎದುರಾಯ್ತಲ್ಲ ಅಂತ ಬೇಸರಗೊಂಡಿದ್ರಂತೆ.. ಇವತ್ತು ರೇವಣ್ಣಗೆ ಜೈಲಿನ ಮೆನುವಿನಂತೆ ಪುಳಿಯೊಗರೆ ಮತ್ತು ಕಾಫಿ ಬ್ರೇಕ್‌ ಫಾಸ್ಟ್‌ ಆಗಿ ಫಿಕ್ಸ್​ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್​ ಟೇಕ್ ಮಾಡಿದ ವಿರಾಟ್..!

ಇವತ್ತು ಕೋರ್ಟ್‌ನಲ್ಲಿ ರೇವಣ್ಣ ಸಲ್ಲಿಸಿರೋ ಬೇಲ್ ಅರ್ಜಿಯ ವಿಚಾರಣೆ ನಡೆಯಲಿದೆ. ಒಂದ್ವೇಳೆ ಇವತ್ತು ಜಾಮೀನು ಸಿಕ್ರೆ ರೇವಣ್ಣ ಬಚಾವ್.. ಇಲ್ಲದಿದ್ರೆ ಮೇ 14ರವರೆಗೆ ಮಾಜಿ ಸಚಿವನಿಗೆ ಸೆರೆವಾಸ ಫಿಕ್ಸ್‌.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment