newsfirstkannada.com

ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್​ ಟೇಕ್ ಮಾಡಿದ ವಿರಾಟ್..!

Share :

Published May 8, 2024 at 1:19pm

Update May 9, 2024 at 6:57am

  ಮಿಸ್ಟರ್ ಐಪಿಎಲ್​ ರೈನಾ ಅಲ್ಲ.. ಮತ್ಯಾರು..?

  ವಿರಾಟ್​ ಕೊಹ್ಲಿ.. ನಯಾ ಮಿಸ್ಟರ್​ ಐಪಿಎಲ್​..!

  ಇನ್ಮುಂದೆ ವಿರಾಟ್​ ಕೊಹ್ಲಿನೇ ಮಿಸ್ಟರ್​ ಐಪಿಎಲ್

ಮಿಸ್ಟರ್​ ಐಪಿಎಲ್​.. ಈ ಹೆಸರು ಕೇಳಿದಾಕ್ಷಣ ಸುರೇಶ್​ ರೈನಾ ಥಟ್ ಅಂತಾ ಕಣ್ಮುಂದೆ ಬರ್ತಾರೆ. ಇನ್ಮೇಲೆ ಮಿಸ್ಟರ್​ ಐಪಿಎಲ್ ಅಂದ್ರೆ ನಿಮಗೆ ವಿರಾಟ್​ ಕೊಹ್ಲಿ ನೆನಪಗಬೇಕು.

ಸುರೇಶ್​ ರೈನಾ. ಮಿಸ್ಟರ್ ಐಪಿಎಲ್ ಅಂತಾನೇ ಫೇಮಸ್​. ರೈನಾರ ಕನ್ಸಿಸ್ಟೆನ್ಸಿ ಆಟಕ್ಕೆ ಸಿಕ್ಕ ಬಿರುದೇ ಮಿಸ್ಟರ್ ಐಪಿಎಲ್. ಆದ್ರೀಗ ಈ ಮಿಸ್ಟರ್​ ಐಪಿಎಲ್​ ಪಟ್ಟ, ರೆಕಾರ್ಡ್​ ಬ್ರೇಕರ್​. ಹಿಸ್ಟರಿ ಕ್ರಿಯೇಟರ್​. ವಿಶ್ವ ಕ್ರಿಕೆಟ್​ನ ರೂಲರ್ ಕಿಂಗ್ ಕೊಹ್ಲಿ ಪಾಲಾಗಿದೆ. ಇದಕ್ಕೆಲ್ಲಾ ಕಾರಣ ಕಿಂಗ್ ಕೊಹ್ಲಿಯ ಕನ್ಸಿಸ್ಟೆನ್ಸಿ.

ಹೌದು! ಸದ್ಯ ಫ್ರಾಂಚೈಸಿ ಲೀಗ್​ನಲ್ಲಿ ಅಬ್ಬರಿಸ್ತಿರುವ ವಿರಾಟ್, ಇಂಡಿಯನ್ ಪ್ರೀಮಿಯರ್ ಲೀಗ್​​ನ ಅಧೀಪತಿಯಾಗಿ​ ಮೆರೆದಾಡ್ತಿದ್ದಾರೆ. ಕನ್ಸಿಸ್ಟೆನ್ಸಿ ಆಟದಿಂದ ನಾನೇ ಮಿಸ್ಟರ್​ ಐಪಿಎಲ್​ ಎಂಬ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ:ಅಪ್ಪನ ಕಳೆದುಕೊಂಡು ರಸ್ತೆಯಲ್ಲಿ ರೋಲ್​​ಗಳ ಮಾರಾಟ; 10 ವರ್ಷದ ಬಾಲಕನ ಕಣ್ಣೀರ ಬದುಕು..!

ಶ್ರೀಮಂತ ಲೀಗ್​ನಲ್ಲಿ ಕಿಂಗ್​​ ಕೊಹ್ಲಿಯ ದರ್ಬಾರ್
ದಾಖಲೆಗಳ ವೀರ ವಿರಾಟ್​, ರಿಚೆಸ್ಟ್​ ಲೀಗ್​ನ ಗರಿಷ್ಠ ರನ್​​​, ಗರಿಷ್ಠ ಸೆಂಚೂರಿ, ಹಾಫ್ ಸೆಂಚೂರಿ ಲಿಸ್ಟ್​ನ ಟಾಪರ್​. ಕಳೆದ 17 ವರ್ಷಗಳಿಂದ ಐಪಿಎಲ್​ನಲ್ಲಿ ಹಿಸ್ಟರಿ ಕ್ರಿಯೇಟ್​ ಮಾಡ್ತಿರೋ ವಿರಾಟ್, ಪ್ರಸಕ್ತ ಆವೃತ್ತಿಯಲ್ಲೂ ರನ್​ಭೇಟೆಯಾಡ್ತಿದ್ದಾರೆ. 1 ಶತಕ, 4 ಅರ್ಧಶತಕ ಸಹಿತ 542 ರನ್ ಸಿಡಿಸಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.

15 ವರ್ಷದಿಂದ ಕನ್ಸಿಸ್ಟೆನ್ಸಿ ಆಟಕ್ಕೆ ಕೊಹ್ಲಿಯೇ ಸಾಟಿ
ಸೀಸನ್-17ರಲ್ಲಿ ಅದ್ಭುತ ಆಟವಾಡ್ತಿರೋ ಕೊಹ್ಲಿ, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್​ ಕೊಹ್ಲಿಯ ಈ ಅದ್ಭುತ ಆಟ ಆರಂಭವಾಗಿದ್ದು 2010ರಿಂದ. ಅಂದಿನಿಂದ ಸತತ 15 ಸೀಸನ್​​ಗಳಲ್ಲಿ 300+ ರನ್​ ಸಿಡಿಸಿದ ಏಕೈಕ ಬ್ಯಾಟರ್​ ಅನ್ನೋ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ರಾಜಸ್ಥಾನ ಸೋಲಿನಿಂದ ಆರ್​ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ 5 ಸೀಸನ್​​​ಗಳಲ್ಲಿ 300 ಪ್ಲಸ್​ ರನ್ ದಾಖಲಿಸಿರುವ ಕೊಹ್ಲಿ, 3 ಸೀಸನ್​​​ಗಳಲ್ಲಿ 400 ಪ್ಲಸ್​ ರನ್​ ಸಿಡಿಸಿದ್ದಾರೆ. 4 ಬಾರಿ ಐನೂರಕ್ಕೂ ಅಧಿಕ ರನ್​​​​​​​​, 2 ಬಾರಿ 600ಕ್ಕೂ ಅಧಿಕ ರನ್ ಪೇರಿಸಿರುವ ವಿರಾಟ್, ಒಮ್ಮೆ ದಾಖಲೆಯ 973 ರನ್ ಪೇರಿಸಿದ್ದಾರೆ.
12 ಸೀಸನ್​​ಗಳಲ್ಲಿ 300ಕ್ಕೂ ಅಧಿಕ ರನ್ ದಾಖಲಿಸಿರುವ ರೈನಾ, 3 ಬಾರಿ 300ಕ್ಕೂ ಅಧಿಕ ರನ್ ಗಳಿಸಿದ್ರೆ. 6 ಬಾರಿ 400ಕ್ಕೂ ಅಧಿಕ ರನ್, 3 ಸಲ 500ಕ್ಕೂ ಅಧಿಕ ರನ್ ಕಲೆ ಹಾಕಿರುವುದೇ ರೈನಾ ಸಾಧನೆಯಾಗಿದೆ. ಹೀಗಾಗಿ ವಿರಾಟ್​, ಮಿಸ್ಟರ್​ ಐಪಿಎಲ್​ ಎಂಬ ಪಟ್ಟಕ್ಕೆ ಫರ್ಪೆಕ್ಟ್​ ಚಾಯ್ಸ್​ ಅನ್ನೋದ್ರಲ್ಲಿ ಡೌಟೇ ಇಲ್ಲ.

ಇದರಲ್ಲೇ ಅಲ್ಲ.. ಫೀಲ್ಡರ್​ ಆಗಿ ಅತಿ ಹೆಚ್ಚು ವಿಕೆಟ್ ಬೇಟೆಯಾಡಿರುವ ಟ್ರ್ಯಾಕ್ ರೆಕಾರ್ಡ್​ನಲ್ಲೂ ವಿರಾಟ್​ ಕೊಹ್ಲಿ ಅಗ್ರಸ್ಥಾನಿಯಾಗಿದ್ರೆ. ಸುರೇಶ್​ ರೈನಾ 2ನೇ ಪ್ಲೇಸ್​ನಲಲ್ಲಿದ್ದಾರೆ. ಈ ಅಂಕಿ-ಅಂಶಗಳನ್ನು ನೋಡಿದ್ಮೇಲೆ ನೀವೇ ಹೇಳಿ, ಈ ಇಬ್ಬರಲ್ಲಿ ಯಾರು ಮಿಸ್ಟರ್​ ಐಪಿಎಲ್​ ಅನ್ನೋದನ್ನ.

ಇದನ್ನೂ ಓದಿ:ಸುನಿಲ್ ಗವಾಸ್ಕರ್​​ ಟೀಕೆಗೆ ಕೊಹ್ಲಿ ಕೌಂಟರ್​.. ವಿರಾಟ್​​ಗೆ ಮತ್ತೆ ಮಾತಲ್ಲೇ ತಿವಿದ ಮಾಜಿ ಆಟಗಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್​ ಟೇಕ್ ಮಾಡಿದ ವಿರಾಟ್..!

https://newsfirstlive.com/wp-content/uploads/2024/04/VIRAT-KOHLI-6.jpg

Load More