newsfirstkannada.com

ರಾಜಸ್ಥಾನ ಸೋಲಿನಿಂದ ಆರ್​ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!

Share :

Published May 8, 2024 at 11:42am

    ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಪಂತ್ ಪಡೆ

    ರಾಜಸ್ಥಾನ್ ರಾಯಲ್ಸ್ ಸೋಲಿನಿಂದ ಆರ್​ಸಿಬಿಗೆ ಹಿನ್ನಡೆ

    ಆರ್​ಸಿಬಿ ಪ್ಲೇ-ಆಫ್ ಪ್ರವೇಶಕ್ಕೆ ಇರುವ ದಾರಿಗಳು ಏನೇನು..?

ಐಪಿಎಲ್ 2024ರ 56ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋತಿದೆ. ರಾಜಸ್ಥಾನ ತಂಡಕ್ಕೆ ಈ ಸೋಲು ಹೆಚ್ಚಿನ ವ್ಯತ್ಯಾಸ ಉಂಟು ಮಾಡುವುದಿಲ್ಲ. ಏಕೆಂದರೆ ತಂಡವು 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜೊತೆಗೆ ಪ್ಲೇ-ಆಫ್ ಪ್ರವೇಶಕ್ಕೆ ಕೇವಲ ಒಂದು ಗೆಲುವು ಮಾತ್ರ ಅಗತ್ಯವಿದೆ.

ರಾಜಸ್ಥಾನದ ಈ ಸೋಲು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ನಷ್ಟವನ್ನು ಉಂಟುಮಾಡಬಹುದು. ರಾಜಸ್ಥಾನ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಡೆಲ್ಲಿ 12 ಅಂಕಗಳನ್ನು ಗಳಿಸಿದೆ. ಇದು RCBಗೆ ಎಚ್ಚರಿಕೆಯ ಗಂಟೆಯಾಗಿದೆ.

ಇದನ್ನೂ ಓದಿ:ಸುನಿಲ್ ಗವಾಸ್ಕರ್​​ ಟೀಕೆಗೆ ಕೊಹ್ಲಿ ಕೌಂಟರ್​.. ವಿರಾಟ್​​ಗೆ ಮತ್ತೆ ಮಾತಲ್ಲೇ ತಿವಿದ ಮಾಜಿ ಆಟಗಾರ..!

ದೆಹಲಿಯ ಸೋಲು ಬೆಂಗಳೂರಿಗೆ ಪ್ರಯೋಜನಕಾರಿಯಾಗಬಹುದಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಅದು ಆಗಲಿಲ್ಲ. ಇನ್ಮುಂದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ-3 ರಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದು ಆರ್‌ಸಿಬಿಗೆ ಪ್ಲೇಆಫ್‌ನ ಹಾದಿಯನ್ನು ತೆರವುಗೊಳಿಸುತ್ತದೆ.

ಟಾಪ್-3 ತಂಡಗಳ ಗೆಲುವಿನ ಹೊರತಾಗಿ RCB ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಿದೆ. ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು 14 ಅಂಕಗಳನ್ನು ಮೀರಿ ಮುಂದೆ ಹೋಗುವಂತಿಲ್ಲ. ಹೈದರಾಬಾದ್, ದೆಹಲಿ ಮತ್ತು ಲಕ್ನೋ ತಲಾ 12 ಅಂಕಗಳನ್ನು ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ ಮೂರು ತಂಡಗಳು ಉಳಿದ ಪಂದ್ಯಗಳಲ್ಲಿ 1 ಕ್ಕಿಂತ ಹೆಚ್ಚು ಗೆಲುವು ದಾಖಲಿಸುವಂತಿಲ್ಲ. ಹೈದರಾಬಾದ್ ಮತ್ತು ಲಕ್ನೋ ಇನ್ನೂ ತಲಾ 3 ಪಂದ್ಯಗಳನ್ನು ಆಡಬೇಕಾಗಿದೆ. ಮತ್ತು ದೆಹಲಿ 2 ಪಂದ್ಯಗಳನ್ನು ಆಡಬೇಕಾಗಿದೆ.

ಇದನ್ನೂ ಓದಿ: 48 ಗಂಟೆಯಲ್ಲಿ.. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಎಚ್ಚರಿಕೆ

ಈ ಎಲ್ಲಾ ಸಮೀಕರಣಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿದಿರುವ ಮೂರು ಪಂದ್ಯಗಳನ್ನು ಸೋಲದೆ ಗೆಲ್ಲಲೇಬೇಕಾಗಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದಾದರೂ ಆರ್‌ಸಿಬಿ ಸೋತರೆ ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವುದು ಖಚಿತ. ಆರ್‌ಸಿಬಿ ಟಾಪ್-4 ರೊಳಗೆ ಸ್ಥಾನ ಪಡೆಯುವ ಮೂಲಕ ಪ್ಲೇಆಫ್‌ಗೆ ತಲುಪಬಹುದೇ ಅಥವಾ ಇಲ್ಲವೇ ಎಂಬುವುದು ಈಗ ಕುತೂಹಲಕಾರಿ. ಈ ಋತುವಿನಲ್ಲಿ ಇದುವರೆಗೆ RCB 11 ಪಂದ್ಯಗಳನ್ನು ಆಡಿದೆ. ಅದರಲ್ಲಿ 4 ಪಂದ್ಯಗಳನ್ನು ಗೆದ್ದುಕೊಂಡು 7ರಲ್ಲಿ ಸೋತಿದೆ. ಆರ್​ಸಿಬಿ 8 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಸ್ಥಾನ ಸೋಲಿನಿಂದ ಆರ್​ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!

https://newsfirstlive.com/wp-content/uploads/2024/05/ASHWIN-1.jpg

Load More