newsfirstkannada.com

ಸುನಿಲ್ ಗವಾಸ್ಕರ್​​ ಟೀಕೆಗೆ ಕೊಹ್ಲಿ ಕೌಂಟರ್​.. ವಿರಾಟ್​​ಗೆ ಮತ್ತೆ ಮಾತಲ್ಲೇ ತಿವಿದ ಮಾಜಿ ಆಟಗಾರ..!

Share :

Published May 8, 2024 at 10:25am

  ವಿರಾಟ್​ ಕೊಹ್ಲಿ vs ಸುನಿಲ್​ ಗವಾಸ್ಕರ್ ಫೈಟ್

  ಕೊಹ್ಲಿ ವಿರುದ್ಧ ಸಿಡಿದೆದ್ದ ಸುನಿಲ್​ ಗವಾಸ್ಕರ್​​

  ವಿರಾಟ್​​ ಕೊಹ್ಲಿ ಸ್ಟ್ರೈಕ್​ರೇಟ್​ ಬಗ್ಗೆ ತೀವ್ರ ಟೀಕೆ

ಕಿಂಗ್​ ಕೊಹ್ಲಿ, ಲೆಜೆಂಡ್​​ ಸುನಿಲ್​ ಗವಾಸ್ಕರ್​​​ ನಡುವೆ ವಾಕ್ಸಮರ ತಾರಕಕ್ಕೇರಿದೆ. ಕೆಲ ದಿನಗಳ ಹಿಂದೆ ಸ್ಟ್ರೈಕ್​ರೇಟ್​​ ಬಗ್ಗೆ ಟೀಕಿಸಿದ ಕಾಮೆಂಟೇಟರ್ಸ್​ಗೆ ಕೊಹ್ಲಿ, ಖಡಕ್ ಉತ್ತರ ಕೊಟ್ಟಿದ್ರು. ಇದ್ರ ಬೆನ್ನಲ್ಲೇ ಸುನಿಲ್​ ಗವಾಸ್ಕರ್​​​ ಸಿಡಿದೆದ್ದಿದ್ದಾರೆ. ಮಾತಿನ ಬಾಣವನ್ನ ಪ್ರಯೋಗಿಸಿರುವ ಗವಾಸ್ಕರ್​ ಚುಚ್ಚು ಮಾತುಗಳಿಂದ ಕೊಹ್ಲಿಯನ್ನ ತಿವಿದಿದ್ದಾರೆ.

T20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾದ ಸೆಲೆಕ್ಷನ್​ ಮುಗಿದಿದೆ. ವಿರಾಟ್​ ಕೊಹ್ಲಿಯ ಸ್ಟ್ರೈಕ್​ರೇಟ್​​ ಬಗೆಗಿನ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಈ ಐಪಿಎಲ್​ ಆರಂಭಕ್ಕೂ ಮುನ್ನ ಕೊಹ್ಲಿ ಸ್ಟ್ರೈಕ್​ರೇಟ್​ನ ಚರ್ಚೆ ಜೋರಾಗಿ ನಡೆದಿತ್ತು. ಸ್ಲೋ ಬ್ಯಾಟಿಂಗ್​ ನಡೆಸೋ ಕೊಹ್ಲಿಯನ್ನ ಟಿ20 ವಿಶ್ವಕಪ್​ ತಂಡಕ್ಕೆ ಸೆಲೆಕ್ಟ್​ ಮಾಡಬಾರದು ಎಂಬ ಚರ್ಚೆ ನಡೆದಿತ್ತು. ಹಲ ಮಾಜಿ ಕ್ರಿಕೆಟರ್ಸ್​, ಕ್ರಿಕೆಟ್​​ ಎಕ್ಸ್​ಪರ್ಟ್ಸ್​ ಕೊಹ್ಲಿ ಸೆಲೆಕ್ಷನ್​ ಬಗ್ಗೆ ಅಪಸ್ವರ ಎತ್ತಿದ್ರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹೃದಯ ವಿದ್ರಾವಕ ಘಟನೆ.. ಮಳೆಗೆ ಗೋಡೆ ಕುಸಿದು 4 ವರ್ಷದ ಮಗು ಸೇರಿ 7 ಸಾವು

ಐಪಿಎಲ್​​ ಬ್ಯಾಟಲ್​ ಫೀಲ್ಡ್​ನಲ್ಲಿ ಕೊಹ್ಲಿ ಕಮಾಲ್​
ಸ್ಟ್ರೈಕ್​ರೇಟ್​​ ಬಗೆಗಿನ ಟೀಕೆಗಳಿಗೆ ವಿರಾಟ್​ ಕೊಹ್ಲಿ ಐಪಿಎಲ್​ ಅಖಾಡದಲ್ಲಿ ಬ್ಯಾಟ್​​ನಿಂದಲೇ ಆನ್ಸರ್​ ಕೊಟ್ಟಿದ್ದಾರೆ. ಅಬ್ಬರದ ಬ್ಯಾಟಿಂಗ್​ ನಡೆಸ್ತಿರೋ ವಿರಾಟ್​, ಬೌಲರ್​​ಗಳ ಮೇಲೆ ಸವಾರಿ ಮಾಡ್ತಿದ್ದಾರೆ. ಪೇಸರ್ಸ್​-ಸ್ಪಿನ್ನರ್ಸ್​ ಯಾರೇ ಬರಲಿ, ಹಿಂದೆ ಮುಂದೆ ನೋಡದೆ ಚಚ್ಚಿ ಬಿಸಾಕ್ತಿದ್ದಾರೆ. ಈ ಮೂಲಕ ಸ್ಟ್ರೈಕ್​ರೇಟ್​ ಕಡಿಮೆಯಿದೆ, ಟಿ20ಗೆ ಸೂಟ್​ ಆಗಲ್ಲ, ಸ್ಪಿನ್​ ಎದುರು ತಡಬಡಾಯಿಸ್ತಾರೆ ಎಂದು ಟೀಕಿಸಿದ್ದವರಿಗೆ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

ಟೀಕೆಗಳಿಗೆ ಕೊಹ್ಲಿ ಕೆಂಡ.. ನೇರ ಮಾತುಗಳಲ್ಲಿ ತಿರುಗೇಟು
ಟೀಕಿಸಿದವರಿಗೆ ಕೇವಲ ಬ್ಯಾಟ್​ನಿಂದ ಮಾತ್ರ ಉತ್ತರ ಕೊಡಲಿಲ್ಲ. ಗುಜರಾತ್​​ ಟೈಟನ್ಸ್​​ ವಿರುದ್ಧ ನಮೋ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸ್ಪಿನ್ನರ್ಸ್​ಗಳ ಪರಾಕ್ರಮ ಮೆರೆದಿದ್ರು. ಆ ಪರ್ಫಾಮೆನ್ಸ್​ನ ಬಳಿಕ ನೇರ ಮಾತುಗಳಲ್ಲಿ ತಿರುಗೇಟು ಕೊಟ್ಟಿದ್ರು.

ಹಲವರು ನನ್ನ ಸ್ಟ್ರೈಕ್​ರೇಟ್​ ಬಗ್ಗೆ ಹಾಗೂ ಸ್ಪಿನ್​ಗೆ ಚೆನ್ನಾಗಿ ಆಡಲ್ಲ ಅಂತ ಮಾತನಾಡುತ್ತಾರೆ. ನನಗೆ ತಂಡವನ್ನ ಗೆಲ್ಲಿಸೋದು ಮುಖ್ಯ. ಕಳೆದ 15 ವರ್ಷಗಳಿಂದ ಇದನ್ನೇ ಮಾಡಿದ್ದೇನೆ. ಮೈದಾನದಲ್ಲಿ ಆಡುವ ನನಗೆ ಪಂದ್ಯದ ಪರಿಸ್ಥಿತಿ ಗೊತ್ತಿರುತ್ತೆ. ಕಾಮೆಂಟೇಟರಿ ಬಾಕ್ಸ್​​​​​​​​​​​ ಅಲ್ಲಿ ಕುಳಿತಿರುವವರಿಗೆ ಅಲ್ಲ. ಟೀಮ್​​​​​​​ ಗೆಲ್ಲಿಸೋದಷ್ಟೇ ನನ್ನ ಜವಾಬ್ದಾರಿ-ವಿರಾಟ್ ಕೊಹ್ಲಿ. RCB ಬ್ಯಾಟ್ಸ್​ಮನ್​
ವಿರಾಟ್​​ ಕೊಹ್ಲಿ ಮಾತಿಗೆ ಗವಾಸ್ಕರ್​​ ಗರಂ

ಕೊಹ್ಲಿ ನೇರವಾದ ಮಾತುಗಳಲ್ಲಿ ಕಾಮೆಂಟೇಟರ್ಸ್​ನ ಟೀಕಿಸಿದ್ದೇ ಟೀಕಿಸಿದ್ದು, ಬ್ಯಾಟಿಂಗ್​ ದಿಗ್ಗಜ, ಮಾಜಿ ಕ್ರಿಕೆಟರ್​​​ ಸುನಿಲ್​ ಗವಾಸ್ಕರ್​ ಕೆರಳಿ ಕೆಂಡವಾಗಿದ್ದಾರೆ. ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತವರಿಗೆ ಏನು ಗೊತ್ತು ಎಂದು ಪ್ರಶ್ನಿಸಿದ ಕೊಹ್ಲಿ ವಿರುದ್ಧ ಮಾತಿನ ಬಾಣ ಪ್ರಯೋಗಿಸಿದ್ದಾರೆ. ನಿಮ್ಮಷ್ಟು ಅಲ್ಲದಿದ್ರೂ, ನಾವು ಸ್ವಲ್ಪ ಕ್ರಿಕೆಟ್​ ಆಡಿದ್ದೇವೆ ಎಂದು ಚುಚ್ಚು ಮಾತಿನಿಂದ ತಿವಿದಿದ್ದಾರೆ.

ಈ ಎಲ್ಲಾ ಆಟಗಾರರು ನಾವು ಹೊರಗಿನ ಚರ್ಚೆಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತಾರೆ. ಮತ್ಯಾಕೆ ನೀವು ಉತ್ತರ ಕೊಡ್ತಿದ್ದೀರಿ. ಅದೇನೆ ಇರಲಿ. ನಾವೆಲ್ಲಾ ಸ್ವಲ್ಪ ಕ್ರಿಕೆಟ್​ ಆಡಿದ್ದೇವೆ, ತುಂಬಾ ಆಡಿಲ್ಲ. ನಮಗೆ ಯಾವುದೇ ಅಜೆಂಡಾ ಇಲ್ಲ. ನಾವು ಏನು ನೋಡುತ್ತೇವೋ ಅದನ್ನ ಮಾತನಾಡುತ್ತೇವೆ. ನಮಗೆ ಇಷ್ಟ, ಕಷ್ಟ ಅಂತಿಲ್ಲ. ಏನು ಆಗುತ್ತಿದ್ಯೂ ಅದ್ರ ಬಗ್ಗೆ ಮಾತನಾಡುತ್ತೇವೆ-ಸುನಿಲ್​ ಗವಾಸ್ಕರ್​ ಮಾಜಿ ಕ್ರಿಕೆಟಿಗ

ಸೋಷಿಯಲ್​ ಮೀಡಿಯಾದಲ್ಲಿ ಪರ-ವಿರೋಧ ಜೋರು..!
ಸುನಿಲ್​ ಗವಾಸ್ಕರ್​​, ವಿರಾಟ್​ ಕೊಹ್ಲಿ ಹೆಸರತ್ತದೇ ಮಾತಿನ ಬಾಣ ಪ್ರಯೋಗಿಸಿದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾ ಹಲ್​ಚಲ್​ ಎದ್ದಿದೆ. ಕೊಹ್ಲಿ ಅಭಿಮಾನಿಗಳು ಸುನಿಲ್​ ಗವಾಸ್ಕರ್​ ವಿರುದ್ಧ ಮುಗಿಬಿದ್ದಿದ್ದಾರೆ. ಇನ್ನು ಕೆಲವರು ಲೆಜೆಂಡ್​ ಗವಾಸ್ಕರ್​ ಬೆನ್ನಿಗೆ ನಿಂತಿದ್ದಾರೆ. ಈ ಪರ-ವಿರೋದದ ಚರ್ಚೆ ಸದ್ಯಕ್ಕಂತೂ ನಿಲ್ಲೋ ತರ ಕಾಣ್ತಿಲ್ಲ.

ಸುನಿಲ್​ ಗವಾಸ್ಕರ್​​ VS ವಿರಾಟ್​ ಕೊಹ್ಲಿ ನಡುವಿನ ಮಾತಿನ ಯುದ್ಧ ಇದೇನು ಮೊದಲಲ್ಲ. ಈ ಹಿಂದೆಯೂ ಇಬ್ಬರು ಹಲವು ಬಾರಿ ಮಾತಿನ ಸಮರ ನಡೆಸಿದ್ದಾರೆ. ಆದರ ಹೊರತಾಗಿಯೂ ವಿರಾಟ್​ ಕೊಹ್ಲಿ, ಸುನಿಲ್​ ಗವಾಸ್ಕರ್​ರನ್ನ ತುಂಬಾ ಗೌರವಿಸ್ತಾರೆ. ಕೊಹ್ಲಿ ಆಟವನ್ನ ಸಖತ್​ ಎಂಜಾಯ್​ ಮಾಡೋ ಗವಾಸ್ಕರ್​​ ಕೂಡ ವಿರಾಟ್​​ರನ್ನ ಪ್ರೀತಿಯಿಂದಲೇ ಕಾಣ್ತಾರೆ. ಇದನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: 48 ಗಂಟೆಯಲ್ಲಿ.. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಎಚ್ಚರಿಕೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸುನಿಲ್ ಗವಾಸ್ಕರ್​​ ಟೀಕೆಗೆ ಕೊಹ್ಲಿ ಕೌಂಟರ್​.. ವಿರಾಟ್​​ಗೆ ಮತ್ತೆ ಮಾತಲ್ಲೇ ತಿವಿದ ಮಾಜಿ ಆಟಗಾರ..!

https://newsfirstlive.com/wp-content/uploads/2024/05/GAVASAKAR.jpg

Load More