newsfirstkannada.com

ಅಮೃತ್​ ಪೌಲ್​ ಇದ್ದ ಸೆಲ್​ನಲ್ಲಿ H D ರೇವಣ್ಣ.. ಸಿಂಗಲ್​ ಕೊಠಡಿ, 6 ಮಂದಿ ಎಸ್ಕಾರ್ಟ್.. ಜೈಲಿನಲ್ಲಿ ವ್ಯವಸ್ಥೆ ಹೇಗಿದೆ?

Share :

Published May 10, 2024 at 9:52am

    ಜೈಲಿನ ಮೇನು ಪ್ರಕಾರ ಇಂದು ರೇವಣ್ಣಗೆ ಟ್ಯೊಮಾಟೋ ಬಾತ್

    ನಿನ್ನೆ ಅಪ್ಸೆಟ್ ಆಗಿದ್ದ ರೇವಣ್ಣ ಇಂದು ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ

    ಪ್ರತ್ಯೇಕ ಸಿಂಗಲ್ ಕೊಠಡಿಯಲ್ಲಿ ವಾಸಿಸುತ್ತಿದ್ದಾರೆ ಎಚ್​ ಡಿ ರೇವಣ್ಣ

ಕಿಡ್ಯಾಪ್​ ಪ್ರಕರಣಕ್ಕೆ ಸಂಬಂಧಿಸಿ ಎಚ್​ ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಮಾಜಿ ಸಚಿವ ಆಹಾರ, ಅನಾರೋಗ್ಯದಿಂದ ಚಡಪಡಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ರೇವಣ್ಣ ಜೈಲಿನಲ್ಲಿದ್ದಾರೆ.

ಆಪ್ತರ ಮುಂದೆ ಬೇಸರ ಹೇಳಿಕೊಂಡ ರೇವಣ್ಣ

ಸಾಮಾನ್ಯ ವಿಚಾರಣಾದೀನ ಬಂಧಿಯಂತೆ ರೇವಣ್ಣ ದಿನ ಕಳೆಯುತ್ತಿದ್ದಾರೆ. ನಿನ್ನೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಸೆಯಾಗಿದೆ. ಬೇಲ್ ಸಿಗದ ಹಿನ್ನೆಲೆ ಮತ್ತಷ್ಟು ಮಂಕಾಗಿದ್ದಾರೆ. ಆಪ್ತರ ಭೇಟಿ ವೇಳೆ ಬೇಸರ ಹೊರ ಹಾಕಿದ್ದಾರೆ.

ಸರಿಯಾಗಿ ನಿದ್ದೆ ಮಾಡದ ರೇವಣ್ಣ

ರೇವಣ್ಣ ರಾತ್ರಿ ಊಟ ಕೂಡ ತಡವಾಗಿ ಮಾಡಿದ್ದಾರೆ. ರಾತ್ರಿ ಕೂಡ ಸರಿಯಾಗಿ ನಿದ್ರೆ ಮಾಡದೆ ಕುಳಿತಿದ್ದಾರೆ. ಜೈಲು ಸಿಬ್ಬಂದಿ ಮುದ್ದೆ, ಚಪಾತಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ನೀಡಿದ್ದಾರೆ. ಹೊಟ್ಟೆ ನೋವು ಹಿನ್ನೆಲೆ ರೇವಣ್ಣ ಮೇಲೆ ವೈದ್ಯರ ನಿಗಾ ವಹಿಸಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವೇಳೆ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಇಂದು ರೇವಣ್ಣಗೆ ಟ್ಯೊಮಾಟೋ ಬಾತ್

ಜೈಲಿನ ಮೇನು ಪ್ರಕಾರ ಇಂದು ರೇವಣ್ಣಗೆ ಟ್ಯೊಮಾಟೋ ಬಾತ್ ನೀಡಲಿದ್ದಾರೆ. ಈಗಾಗಲೇ ಜೈಲು ಸಿಬ್ಬಂದಿ ಬೆಳಗ್ಗೆ ಕಾಪಿ ನೀಡಿದ್ದಾರೆ. ಕಾಪಿ ಕುಡಿಯುತ್ತಾ ದಿನಪತ್ರಿಕೆಯಲ್ಲಿ ನಿನ್ನೆಯ ವಿದ್ಯಮಾನಗಳ ಬಗ್ಗೆ ರೇವಣ್ಣ ಕಣ್ಣಾಡಿಸಿದ್ದಾರೆ.

ಇನ್ನು ಈ ಹಿಂದೆ ಪಿಎಸ್​ಐ ಸ್ಕ್ಯಾಮ್​ನಿಂದ ಜೈಲುಪಾಲಾದ ಎಡಿಜಿಪಿ ಅಮೃತ್ ಪೌಲ್ ಇದ್ದ ಸೆಲ್ ನಲ್ಲಿ ರೇವಣ್ಣ ಇದ್ದರು. ಅವರಿಗೆ 6 ಮಂದಿ ಎಸ್ಕಾರ್ಟ್ ನೀಡಲಾಗಿದೆ. ಇಬ್ಬರು ಸೆಕ್ಯೂರಿಯ ನಿಯೋಜನೆ ಮಾಡಲಾಗಿದೆ. ಪ್ರತ್ಯೇಕ ಸಿಂಗಲ್ ಕೊಠಡಿಯನ್ನ ನೀಡಲಾಗಿದೆ.

ಇದನ್ನೂ ಓದಿ: ಅಕ್ಷಯ ತೃತೀಯ: ಜೋಸ್​ ಆಲುಕ್ಕಾಸ್ ಕಡೆಯಿಂದ ಗೋಲ್ಡ್ ಆಫರ್​..​ ಬೆಂಗಳೂರಲ್ಲಿ ಇಂದು ಎಷ್ಟಿದೆ ಗೊತ್ತಾ ಚಿನ್ನದ ರೇಟ್​?

ಇಂದು ಬೆಳಗ್ಗೆ ರೇವಣ್ಣ ಜೈಲೂಟವನ್ನ ತಿನ್ನುತ್ತಿದ್ದಾರೆ. ನಿನ್ನೆ ಅಪ್ಸೆಟ್ ಆಗಿದ್ದ ರೇವಣ್ಣ ಇಂದು ರಿಲ್ಯಾಕ್ಸ್ ಆಗಿದ್ದಾರೆ. ನಿನ್ನೆ ರಾತ್ರಿ ಅವರ ಸೆಲ್ ಲಾಕ್ ಮಾಡಿ ಬೆಳಗ್ಗೆ ಒಪನ್ ಮಾಡಿದ್ದಾರೆ. ಬೆಳಗ್ಗೆಯೇ ಪೇಪರ್ ಪಡೆದುಕೊಂಡು ಓದುತ್ತಿದ್ದಾರೆ.

ಇದನ್ನೂ ಓದಿ: ವಾರೆ ವ್ಹಾ.. ಅಂತು ಇಂತು ಬಂತು ಹೊಸ ಬಜಾಜ್​ ಪಲ್ಸರ್​ NS400Z ಬೈಕ್​.. ಫೀಚರ್ಸ್​ ಅದ್ಭುತ! ಬೆಲೆ ಎಷ್ಟಿದೆ?

ಇದಲ್ಲದೆ ರೇವಣ್ಣ ಸೆಲ್ ಕಾರಿಡಾರ್ ನಲ್ಲಿ ಬೆಳಗ್ಗೆ ವಾಕ್ ಮಾಡಿದ್ದಾರೆ. ಸದ್ಯ ಜೈಲಿನ ಆರ್ ಓ ಫಿಲ್ಟರ್ ನೀರನ್ನೇ ಕುಡಿಯುತ್ತಿದ್ದಾರೆ. ಬೆನ್ನು ನೋವಿನ ಕಾರಣಕ್ಕೆ ರೇವಣ್ಣಗೆ ಕಾಟ್ ನೀಡಲಾಗಿದೆ. ಜೈಲ್ ಡಾಕ್ಟರ್ ಹರ್ಷವರ್ಧನ್ ಅವರಿಗೆ ಟ್ರೀಟ್ಮೆಂಟ್ ನೀಡುತ್ತಿದ್ದಾರೆ. ಪ್ರತಿದಿನ ಅವರ ವಕೀಲರು ಬಂದು ಭೇಟಿ ಮಾಡ್ತಿದ್ದಾರೆ.

ಜೈಲು ಸೇರಿದ ದಿನದಿಂದ ರೇವಣ್ಣನ ಯಾರು ಭೇಟಿ ಮಾಡಿಲ್ಲ. ಅವರ ಕುಂಟುಂಬಸ್ತರು, ಸ್ನೇಹಿತರು & ಅಭಿಮಾನಿಗಳು ಕೂಡ ಬಂದಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೃತ್​ ಪೌಲ್​ ಇದ್ದ ಸೆಲ್​ನಲ್ಲಿ H D ರೇವಣ್ಣ.. ಸಿಂಗಲ್​ ಕೊಠಡಿ, 6 ಮಂದಿ ಎಸ್ಕಾರ್ಟ್.. ಜೈಲಿನಲ್ಲಿ ವ್ಯವಸ್ಥೆ ಹೇಗಿದೆ?

https://newsfirstlive.com/wp-content/uploads/2024/05/REVANNA-2-1.jpg

Load More