newsfirstkannada.com

BREAKING: ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣಗೆ ಬಿಗ್ ಶಾಕ್‌!

Share :

Published May 5, 2024 at 8:05pm

Update May 5, 2024 at 8:40pm

    17ನೇ ACMM ನ್ಯಾಯಧೀಶರ‌ ಮುಂದೆ‌ ಆರೋಪಿ ಹೆಚ್‌.ಡಿ ರೇವಣ್ಣ ಹಾಜರು

    5 ದಿನ ಕಸ್ಟಡಿಗೆ ಕೇಳಲು ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿದ SIT

    ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣಗೆ ಭಾರೀ ಸಂಕಷ್ಟ

ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಸಂಕಷ್ಟ ತಪ್ಪಿಲ್ಲ. ರೇವಣ್ಣ ಅವರನ್ನು 4 ದಿನಗಳ ಕಾಲ SIT ಕಸ್ಟಡಿಗೆ ನೀಡಲಾಗಿದೆ.

ಕೋರಮಂಗಲದ 17ನೇ ACMM ನ್ಯಾಯಾಧೀಶರ ನಿವಾಸಕ್ಕೆ ಎಸ್‌ಐಟಿ ಅಧಿಕಾರಿಗಳು ಹೆಚ್‌.ಡಿ ರೇವಣ್ಣ ಅವರನ್ನು ಕರೆದುಕೊಂಡು ಬಂದಿದ್ದರು. ನ್ಯಾಯಧೀಶರ‌ ಮುಂದೆ‌ ರೇವಣ್ಣರನ್ನು‌ ಹಾಜರುಪಡಿಸಿದ ಎಸ್‌ಐಟಿ, 5 ದಿನ‌ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದ್ದರು. ಜಡ್ಜ್‌ ಮುಂದೆ ರಿಮೈಂಡ್‌ ಕಾಪಿ‌ ಸಲ್ಲಿಕೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಕಸ್ಟಡಿಗೆ ಕೇಳಲು ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: ಕರೆ ಮಾಡಿ ಮಾಹಿತಿ ನೀಡಿ.. ಹಾಸನದ ಅಶ್ಲೀಲ ವಿಡಿಯೋ ವೈರಲ್ ಕೇಸ್‌ಗೆ SIT ರೋಚಕ ಟ್ವಿಸ್ಟ್! 

ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಕ್ಕೂ ಮುನ್ನ SIT ಅಧಿಕಾರಿಗಳು ಹೆಚ್‌.ಡಿ ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯಕೀಯ ಪರೀಕ್ಷೆಗೂ ಮುನ್ನ ಮಾತನಾಡಿದ ರೇವಣ್ಣ, ಇದು ರಾಜಕೀಯ ಷಡ್ಯಂತ್ರ. 40 ವರ್ಷದ ರಾಜಕಾರಣದಲ್ಲಿ ನನ್ನ ವಿರುದ್ಧ ಯಾವುದೇ ಆಪಾದನೆ ಇಲ್ಲ. ಯಾವುದೇ ಪುರಾವೆ ಸಿಕ್ಕಿಲ್ಲ ಅಂತ ಕಿಡ್ನಾಪ್ ಕೇಸ್ ಹಾಕಿದ್ದಾರೆ. ಎಲ್ಲಾ ಪೂರ್ತಿ ವಿಷಯ ಹೇಳ್ತೀನಿ. ಇದು ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದರು.

ರೇವಣ್ಣ ಪರ ವಕೀಲರ ವಾದ
ನ್ಯಾಯಾಧೀಶರ ಮುಂದೆ ಎಸ್‌ಐಟಿ ಮಾಡಿದ ಮನವಿಯನ್ನು ರೇವಣ್ಣ ಪರ ವಕೀಲ ಮೂರ್ತಿ‌ ಡಿ ಖಂಡಿಸಿದರು. ನಮ್ಮ ಕಕ್ಷಿದಾರರಿಗೆ ಎಸ್ಐಟಿ ಕಿರುಕುಳ ನೀಡುತ್ತಿದೆ. ಹೆಚ್‌.ಡಿ ರೇವಣ್ಣ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ರೇವಣ್ಣರವರನ್ನು ಎಸ್ಐಟಿ ಕಸ್ಟಡಿಗೆ ನೀಡಬಾರದು ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರಿನ ಮಹಿಳೆಯನ್ನ ಕಿಡ್ನ್ಯಾಪ್​ ಮಾಡಿದ​ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ರೇವಣ್ಣ ಅವರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ಇಂದು 17ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಹೆಚ್‌.ಡಿ ರೇವಣ್ಣ ಅವರ ಆರೋಗ್ಯ ತಪಾಸಣೆ ಮಾಡಿ ವರದಿ ಹಾಗೂ ಪ್ರಕರಣದ ವಿಚಾರಣೆ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶ ರವೀಂದ್ರಕುಮಾರ್ ಬಿ. ಕಟ್ಟಿಮನಿ ಅವರಿಗೆ ನೀಡಿದರು. ರೇವಣ್ಣ ಅವರನ್ನು 5 ದಿನಗಳ ಕಸ್ಟಡಿಗೆ ನೀಡುವಂತೆ ಎಸ್​​ಐಟಿ ಅಧಿಕಾರಿಗಳು ಜಡ್ಜ್‌ಗೆ ಮನವಿ ಮಾಡಿದರು.

ಇದನ್ನೂ ಓದಿ: 4 ದಿನ SIT ಕಸ್ಟಡಿಗೆ ಹೆಚ್‌.ಡಿ ರೇವಣ್ಣ; ಕಿಡ್ನ್ಯಾಪ್ ಮಹಿಳೆ ಹೇಳಿಕೆ ಮೇಲೆ ಭವಿಷ್ಯ ನಿರ್ಧಾರ; ಮುಂದೇನು?

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪರ ವಕೀಲರು ಎಸ್​ಐಟಿ ಕಸ್ಟಡಿಗೆ ನೀಡುವುದನ್ನು ವಿರೋಧಿಸಿ ಆರೋಗ್ಯ ಸಮಸ್ಯೆ ಇರುವುದರಿಂದ ಕಸ್ಟಡಿಗೆ ನೀಡದಂತೆ ವಾದಿಸಿದರು. ವಾದ ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ಅಂದ್ರೆ ಮೇ 8ವರೆಗೆ ಎಸ್​ಐಟಿ ಕಸ್ಟಡಿಗೆ ನೀಡಿ ಮಹತ್ವದ ಆದೇಶ ನೀಡಿದ್ದಾರೆ.

ನ್ಯಾ.ರವೀಂದ್ರಕುಮಾರ್​ ಬಿ ಕಟ್ಟೀಮನಿ ಅವರ ಹೆಚ್ಚಿನ ವಿಚಾರಣೆಗಾಗಿ ರೇವಣ್ಣ ಅವರನ್ನು 4 ದಿನಗಳ ಕಾಲ ಎಸ್​ಐಟಿಗೆ ನೀಡಿ ಆದೇಶ ನೀಡಿದರು. ಕಿಡ್ನ್ಯಾಪ್​ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ರೇವಣ್ಣ ಅವರ ವಿಚಾರಣೆ ಸಿಐಡಿ ಕಚೇರಿಯಲ್ಲಿ ಮುಂದುವರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣಗೆ ಬಿಗ್ ಶಾಕ್‌!

https://newsfirstlive.com/wp-content/uploads/2024/05/HD-Revanna-Bangalore.jpg

Load More