newsfirstkannada.com

4 ದಿನ SIT ಕಸ್ಟಡಿಗೆ ಹೆಚ್‌.ಡಿ ರೇವಣ್ಣ; ಕಿಡ್ನ್ಯಾಪ್ ಮಹಿಳೆ ಹೇಳಿಕೆ ಮೇಲೆ ಭವಿಷ್ಯ ನಿರ್ಧಾರ; ಮುಂದೇನು?

Share :

Published May 5, 2024 at 8:30pm

Update May 5, 2024 at 8:31pm

    ಮೇ 8ವರೆಗೆ ಎಸ್​ಐಟಿ ಕಸ್ಟಡಿಗೆ ನೀಡಿ ಕೋರ್ಟ್‌ ಮಹತ್ವದ ಆದೇಶ

    ಕಿಡ್ನ್ಯಾಪ್​ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ರೇವಣ್ಣ 4 ದಿನ ಸಂಕಷ್ಟ

    ರೇವಣ್ಣ ಭವಿಷ್ಯ ಈಗ ಕಿಡ್ನ್ಯಾಪ್ ಸಂತ್ರಸ್ತೆ ಹೇಳಿಕೆಯ ಮೇಲೆ ನಿರ್ಧಾರ

ಬೆಂಗಳೂರು: ಮೈಸೂರು ಜಿಲ್ಲೆ ಹುಣಸೂರಿನ ಮಹಿಳೆಯನ್ನ ಕಿಡ್ನ್ಯಾಪ್​ ಮಾಡಿದ​ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ರೇವಣ್ಣ ಅವರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ಇಂದು 17ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಹೆಚ್‌.ಡಿ ರೇವಣ್ಣ ಅವರ ಆರೋಗ್ಯ ತಪಾಸಣೆ ಮಾಡಿ ವರದಿ ಹಾಗೂ ಪ್ರಕರಣದ ವಿಚಾರಣೆ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶ ರವೀಂದ್ರಕುಮಾರ್ ಬಿ. ಕಟ್ಟಿಮನಿ ಅವರಿಗೆ ನೀಡಿದರು. ರೇವಣ್ಣ ಅವರನ್ನು 5 ದಿನಗಳ ಕಸ್ಟಡಿಗೆ ನೀಡುವಂತೆ ಎಸ್​​ಐಟಿ ಅಧಿಕಾರಿಗಳು ಜಡ್ಜ್‌ಗೆ ಮನವಿ ಮಾಡಿದರು.

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪರ ವಕೀಲರು ಎಸ್​ಐಟಿ ಕಸ್ಟಡಿಗೆ ನೀಡುವುದನ್ನು ವಿರೋಧಿಸಿ ಆರೋಗ್ಯ ಸಮಸ್ಯೆ ಇರುವುದರಿಂದ ಕಸ್ಟಡಿಗೆ ನೀಡದಂತೆ ವಾದಿಸಿದರು. ವಾದ ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ಅಂದ್ರೆ ಮೇ 8ವರೆಗೆ ಎಸ್​ಐಟಿ ಕಸ್ಟಡಿಗೆ ನೀಡಿ ಮಹತ್ವದ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಹೆಚ್‌.ಡಿ ರೇವಣ್ಣ ಆರೋಗ್ಯ ಸಮಸ್ಯೆ ಏನು? ಬೌರಿಂಗ್ ಆಸ್ಪತ್ರೆ ವೈದ್ಯರು ಬಿಚ್ಚಿಟ್ರು ಅಸಲಿ ವಿಷಯ; ಏನಂದ್ರು? 

ನ್ಯಾ.ರವೀಂದ್ರಕುಮಾರ್​ ಬಿ ಕಟ್ಟೀಮನಿ ಅವರ ಹೆಚ್ಚಿನ ವಿಚಾರಣೆಗಾಗಿ ರೇವಣ್ಣ ಅವರನ್ನು 4 ದಿನಗಳ ಕಾಲ ಎಸ್​ಐಟಿಗೆ ನೀಡಿ ಆದೇಶ ನೀಡಿದರು. ಕಿಡ್ನ್ಯಾಪ್​ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ರೇವಣ್ಣ ಅವರ ವಿಚಾರಣೆ ಸಿಐಡಿ ಕಚೇರಿಯಲ್ಲಿ ಮುಂದುವರಿಯಲಿದೆ.

ರೇವಣ್ಣನ ಮುಂದಿನ ಆಯ್ಕೆಗಳೇನು?

  • ಮೇ 6ಕ್ಕೆ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ
  • ಬೇಲ್‌ ಅರ್ಜಿ ಸಲ್ಲಿಕೆಗೆ ಹೆಚ್.ಡಿ. ರೇವಣ್ಣ ಪರ ವಕೀಲರ ಸಿದ್ಧತೆ
  • ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ನಾಳೆ ಜಾಮೀನು ಅರ್ಜಿ
  • ಕಿಡ್ನಾಪ್ ಆಗಿದ್ದ ಸಂತ್ರಸ್ತೆಯನ್ನ ಪತ್ತೆ ಹಚ್ಚಿರುವ ಎಸ್‌ಐಟಿ ಟೀಂ
  • ಕೇಸ್‌ಗೂ ರೇವಣ್ಣಗೂ ಸಂಬಂಧವಿಲ್ಲ ಅಂತ ವಾದ ಮಂಡಿಸುವುದು
  • ಮತ್ತೆ ಜಾಮೀನು ವಜಾ ಆದ್ರೆ ಹೈಕೋರ್ಟ್ ಮೊರೆ ಹೋಗಬಹುದು
  • ಹೈಕೋರ್ಟ್​ ಜನಪ್ರತಿನಿಧಿಗಳ ಪೀಠದಲ್ಲಿ ಅರ್ಜಿ ಸಲ್ಲಿಸಲು ತಯಾರಿ
  • ಎಲ್ಲವೂ ಈಗ ಕಿಡ್ನ್ಯಾಪ್ ಸಂತ್ರಸ್ತೆಯ ಹೇಳಿಕೆಯ ಮೇಲೆ ನಿರ್ಧಾರ
  • ಸಂತ್ರಸ್ತೆ ಗುರುತರ ಆರೋಪ ಮಾಡದಿದ್ರೆ ಬೇಲ್‌ ಸಿಗೋ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ದಿನ SIT ಕಸ್ಟಡಿಗೆ ಹೆಚ್‌.ಡಿ ರೇವಣ್ಣ; ಕಿಡ್ನ್ಯಾಪ್ ಮಹಿಳೆ ಹೇಳಿಕೆ ಮೇಲೆ ಭವಿಷ್ಯ ನಿರ್ಧಾರ; ಮುಂದೇನು?

https://newsfirstlive.com/wp-content/uploads/2024/05/HD-Revanna-1.jpg

Load More